ಸರ್ಕಾರಿ ಶಾಲೆಯಲ್ಲೂ ಇಂಗ್ಲಿಷ್‌ ಮಾಧ್ಯಮ

ಜಿಲ್ಲೆಯ 36 ಸರ್ಕಾರಿ ಶಾಲೆಗಳ ಆಯ್ಕೆ •ಪ್ರಚಾರದ ಕೊರತೆಯಿಂದ ಜನರಿಗಿಲ್ಲ ಮಾಹಿತಿ

Team Udayavani, May 29, 2019, 11:13 AM IST

29-May-6

ವಿಜಯಪುರ: ನಗರದ ಬಾಗಲಕೋಟೆ ರಸ್ತೆಯ ಶಾಲೆ ನಂ. 13ರಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗಕ್ಕೆ ಆಯ್ಕೆಯಾಗಿರುವ ಶಾಲೆಯಲ್ಲಿ ನೋಂದಣಿ ಸಹಿತ ಪಠ್ಯ ವಿತರಣೆ ಆರಂಭಗೊಂಡಿರುವುದು.

ವಿಜಯಪುರ: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಿಸಲು ಮುಂದಾಗಿದ್ದು, ವಿಜಯಪುರ ಜಿಲ್ಲೆ ಆಯ್ದ 36 ಶಾಲೆಗಳನ್ನು ಇಂಗಿಷ್‌ ಕಲಿಕೆಗೆ ಆಯ್ಕೆ ಮಾಡಲಾಗಿದೆ. ಆದರೆ ಇಲಾಖೆ ಹಾಗೂ ಶಿಕ್ಷರಕ ಮಧ್ಯೆ ಸಮನ್ವಯ ಕೊರತೆ ಕಾರಣ ಹಲವು ಕಡೆಗಳಲ್ಲಿ ಈಗಷ್ಟೇ ಜಾಗೃತಿಗೆ ಸಿದ್ಧತೆ ನಡೆದಿದೆ. ಮತ್ತೆ ಕೆಲವು ಕಡೆಗಳಲ್ಲಿ ಶಿಕ್ಷಕರ ವಿಶೇಷ ಆಸಕ್ತಿ ಕಾರಣ ಹೆಚ್ಚಾಗಿ ಮಕ್ಕಳ ಶಾಲಾ ದಾಖಲೆ ನೋಂದಣಿ ನಡೆದಿದೆ. ಮೇ 29ರಿಂದ ಜಿಲ್ಲೆಯ ಸರ್ಕಾರಿ ಆಯ್ದ ಶಾಲೆಗಳಲ್ಲಿ ಅಧಿಕೃತವಾಗಿ ಇಂಗ್ಲಿಷ್‌ ವಿಭಾಗ ಆರಂಭಗೊಳ್ಳಲಿದೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ ಆರಂಭಿಸಿರುವ 5 ಹಾಗೂ ಈ ವರ್ಷ ಆರಂಭಗೊಳ್ಳುತ್ತಿರುವ 5 ಕರ್ನಾಟಕ ಪಬ್ಲಿಕ್‌ ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ 36 ಶಾಲೆಗಳನ್ನು ಪ್ರಸಕ್ತ ವರ್ಷದಿಂದ ಪ್ರತ್ಯೇಕವಾಗಿ ಇಂಗ್ಲಿಷ್‌ ಮಾಧ್ಯಮ ಕಲಿಕೆ 1ನೇ ತರಗತಿ ಆರಂಭಗೊಳ್ಳಲಿದೆ. ಖಾಸಗಿ ಶಾಲೆಗಳು ಇಂಗ್ಲಿಷ್‌ ಭಾಷಾ ಮಾಧ್ಯಮ ಭೋದನೆ ನೆಪದಲ್ಲಿ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಇಂಗ್ಲಿಷ್‌ ಕಲಿಕೆಯ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲೇ ಪ್ರತ್ಯೇಕವಾಗಿ ಇಂಗ್ಲಿಷ್‌ ಮಾಧ್ಯಮ ವಿಭಾಗ ತೆರೆಯಲು ಮುಂದಾಗಿದೆ.

ಸರ್ಕಾರ ಈಗಾಲೇ ಶಿಕ್ಷಣ ಇಲಾಖೆ ಮೂಲಕ ಕಳೆದ ಏಪ್ರಿಲ್ 2ರಂದೇ ಈ ಕುರಿತು ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ ಈಗಾಗಲೇ 1ರಿಂದ 7ನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ ಭೋದಿಸುತ್ತಿರುವ ಓರ್ವ ಶಿಕ್ಷಕರನ್ನು ನೂತನವಾಗಿ 1ನೇ ತರಗತಿಯಿಂದ ಆರಂಭಗೊಳ್ಳುತ್ತಿರುವ ಇಂಗ್ಲಿಷ್‌ ವಿಭಾಗಕ್ಕೆ ನಿಯೋಜಿಸಿದೆ. ರಾಜ್ಯ ಸರ್ಕಾರವೇ ಜಿಲ್ಲೆಯ ಯಾವ್ಯಾವ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಿಸಬೇಕು ಎಂದು ಆಯ್ದ 36 ಶಾಲೆಗಳ ಪಟ್ಟಿ ಮಾಡಿದೆ. ಇದರ ಅನ್ವಯ ಈಗಾಗಲೇ ಉದ್ದೇಶಿತ ಶಾಲೆಗಳ ಇಂಗ್ಲಿಷ್‌ ಶಿಕ್ಷಕರಿಗೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಮಕ್ಕಳಿಗೆ ರೂಪುಗೊಂಡಿರುವ ಪಠ್ಯ ಆಧಾರಿತ ಭೋದನೆ ವಿಧಾನಗಳ ಕುರಿತು 15 ದಿನಗಳ ತರಬೇತಿಯನ್ನೂ ನೀಡಲಾಗಿದೆ.

ಇದಲ್ಲದೇ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರತ್ಯೇಕವಾಗಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಗೊಂಡಿದ್ದು, ಉಚಿತ ಶಿಕ್ಷಣ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಸಂಪೂರ್ಣ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ನೀಡಲು ಸರ್ಕಾರ ಮುಂದಾಗಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಪೈಪೋಟಿ ನಡೆಸುವಂತಾಗಿದೆ.

ಇಂಗ್ಲಿಷ್‌ ಮಾಧ್ಯಮ ವಿಭಾಗದಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಅಕ್ಷರಗಳು, ಶಬ್ದ ಜೋಡಣೆ, ಸಣ್ಣ ಸಣ್ಣ ವಾಕ್ಯ ರಚನೆ, ಚಿಕ್ಕ ಚಿಕ್ಕ ಪ್ರಬಂಧ ಬರಹ ಹೀಗೆ ಪಠ್ಯದ ಸ್ವರೂಪವನ್ನು ರೂಪಿಸಲಾಗಿದೆ. ಇದಲ್ಲದೇ ಪ್ರತಿ ಶಾಲೆಯಲ್ಲಿ ಕನ್ನಡ ಶಾಲೆಗಳ ಕೋಣೆಗಳ ಮಾದರಿಯಲ್ಲಿ ಇಂಗ್ಲಿಷ್‌ ಕಲಿಕೆಗೆ ಆಯ್ಕೆಯಾಗಿರುವ ಶಾಲೆಯ ಒಂದು ಕೋಣೆಯಲ್ಲಿ ಸಂಪೂರ್ಣ ಇಂಗ್ಲಿಷ್‌ ಪರಿಸರ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಕೋಣೆಗಳ ಆಯ್ಕೆ ಮಾಡುವ ಕೆಲಸ ನಡೆದಿದೆ.

ಇದಲ್ಲದೇ ಇಂಗ್ಲಿಷ್‌ ಮಾಧ್ಯಮ ವಿಭಾಗದ ಶಾಲೆಗಳ ಶಿಕ್ಷಕರು ಜನರಲ್ಲಿ ಈ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಜಾಗೃತಿ ಮೂಡಿಸಲು ಬ್ಯಾನರ್‌ಗಳ ಅವಳಡಿಕೆ, ಕರಪತ್ರಗಳ ವಿತರಣೆ, ಹಳ್ಳಿಗಳಲ್ಲಿ ಡಂಗೂರ ಬಾರಿಸುವುದು, ಶಿಕ್ಷಕರೇ ಸ್ವಯಂ ತಮ್ಮ ವ್ಯಾಪ್ತಿಯ ಗಲ್ಲಿಗಳಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ನೀಡುವಂತೆ ಮೌಖೀಕ ಸೂಚನೆ ನೀಡಲಾಗಿತ್ತು. ಆದರೆ ಜಿಲ್ಲೆಯ ಕೆಲವು ಶಾಲೆಗಳ ಶಿಕ್ಷಕರು ನಾಲ್ಕು ದಿನಗಳ ಹಿಂದಷ್ಟೇ ನಮಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಹೀಗಾಗಿ ಬ್ಯಾನರ್‌, ಕರಪತ್ರ ಮುದ್ರಣ, ಹಂಚಿಕೆ ಇನ್ನಷ್ಟೇ ಆಗಬೇಕಿದೆ ಎಂದು ಹೇಳುತ್ತಾರೆ.

ಮತ್ತೆ ಕೆಲ ಶಿಕ್ಷಕರು ಈಗಾಗಲೇ ಇಲಾಖೆಯ ಮೇಲಧಿಕಾರಿಗಳು ಮೌಖೀಕವಾಗಿ ಸೂಕ್ತ ನಿರ್ದೇಶನ ಸಹಿತ ಮಾಹಿತಿ ನೀಡಿದ್ದಾರೆ. ಅಲ್ಲದೇ ಇಂಗ್ಲಿಷ್‌ ಭೋದನೆಗೆ ಆಯ್ಕೆಯಾದ ಅಯ್ದ ಶಾಲೆಗಳ ಇಂಗ್ಲಿಷ್‌ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನೂ ನೀಡಿದೆ. ಇದರ ಅನ್ವಯ ನಮ್ಮ ಶಾಲೆಯ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಜನರಲ್ಲಿ ಜಾಗೃತಿಗಾಗಿ ಕರಪತ್ರ ಮುದ್ರಿಸಿ ಹಂಚಲಾಗಿದೆ. ಇದಲ್ಲದೇ ಶಾಲೆಯ ಪ್ರವೇಶ ದ್ವಾರದಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್‌ ಕಟ್ಟಿ ಜನರಲ್ಲಿ ಜಾಗೃತಿ ಮೂಡಿಸಿದ್ದರಿಂದ ನಿರೀಕ್ಷೆ ಮೀರಿ ಪ್ರವೇಶ ದಾಖಲೀಕರಣ ಮಾಡಿದ್ದೇವೆ.

ಮತ್ತೂಂದೆಡೆ ಶಾಲೆಯ ಶಿಕ್ಷಕರೇ ಮನೆ ಮನೆಗೆ ತೆರಳಿ ಮಕ್ಕಳ ಪಾಲಕರಿಗೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ದೊರೆಯಲಿದೆ ಎಂಬ ಕುರಿತು ಮಾಹಿತಿ ನೀಡಿದ್ದೇವೆ. ಇದರಿಂದ ನಮ್ಮ ಶಾಲೆಯ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ದಾಖಲೆಗೆ ನೋಂದಣಿ ಆರಂಭಿಸಿದ್ದಾರೆ ಎಂದು ವಿವರಿಸುತ್ತಾರೆ.

ಇತ್ತ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಪ್ರತ್ಯೇಕವಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಯೋಜನೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಖಾಸಗಿ ಇಂಗ್ಲಿಷ್‌ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಶಿಕ್ಷಣ ಮಾಧ್ಯಮ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಬಡ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳ ಮಕ್ಕಳು ಶಿಕ್ಷಣ ಕಲಿಕೆ ಕುರಿತು ಇರುವ ಹಿಂಜರಿಕೆ ಹೋಗಲಾಡಿಸಲು ನೆರವಾಗುತ್ತದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸುವವರೂ ಇದ್ದಾರೆ.

ಇದೆಲ್ಲದ ಪರ-ವಿರೋಧದ ಮಧ್ಯೆ ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಕ್ಕೆ ಸಕಲ ಸಿದ್ದತೆ ನಡೆಸಿದೆ. ಶಿಕ್ಷಣ ಇಲಾಖೆ ವಿಶೇಷ ಆಸಕ್ತಿಯಿಂದ ಚುರುಕಿನ ಕೆಲಸ ಮಾಡುವುದಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವಿರೋಧದ ಮಧ್ಯೆಯೂ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿದೆ.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.