ಸಂಭ್ರಮದ ಹನುಮ ಜಯಂತಿ
ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಅಭಿಷೇಕ ವಿವಿಧೆಡೆ ಭಕ್ತ ಸಮೂಹಕ್ಕೆ ಅನ್ನ ಸಂತರ್ಪಣೆ
Team Udayavani, Apr 20, 2019, 1:23 PM IST
ವಿಜಯಪುರ: ನಗರದ ವಿವಿಧ ಆಂಜನೇಯ ದೇವಾಲಯಗಳಲ್ಲಿ ಹನುಮ ಜಯಂತಿ ಆಚರಿಸಲಾಯಿತು.
ವಿಜಯಪುರ: ಜಿಲ್ಲೆಯಾದ್ಯಂತ ವಾಯುಪುತ್ರನ ಭಕ್ತರು ಶುಕ್ರವಾರ
ಶ್ರದ್ಧಾ ಭಕ್ತಿಯಿಂದ ತಮ್ಮ ಆರಾಧ್ಯ ದ್ಯೆವ ಹನುಮ ಜಯಂತಿ ಅಚರಿಸಿದರು. ಹನುಮಾನ ದೇವರ ದೇವಾಲಯಗಳಲ್ಲಿ ಭಕ್ತ ಸಾಗರ ನೆರೆದಿತ್ತು. ಬೆಳಗ್ಗೆಯಿಂದಲೇ ಹನುಮಾನ ದೇವಾಲಯಕ್ಕೆ ತೆರಳಿದ ಸಾವಿರಾರು ಸಂಖ್ಯೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಹನುಮಂತನ ದರ್ಶನಾಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದರು.
ಬಾಲ ಹನುಮನಿಗೆ ತೊಟ್ಟಿಲಲ್ಲಿ ಹಾಕಿ ಭಕ್ತಿ ಗೀತೆಗಳನ್ನು ಹಾಡಲಾಯಿತು. ಅಭಿಷೇಕ, ಎಲಿಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಜನರು ಭಕ್ತಿ ಭಾವದಿಂದ ಹನುಮಂತನನ್ನು ನೆನೆದರು. ಭಗವಾನ ಹನುಮಂತ ಅವರ ಕುರಿತಾದ ಭಕ್ತಿಗೀತೆಗಳು ಎಲ್ಲೆಡೆ ಮೊಳಗಿದವು. ಹನುಮಂತ ಹನುಮಂತ , ಪವಮಾನ ಪವಮಾನ ಜಗದ ಪ್ರಾಣ, ಜೈ ಹೋ ಪವನ ಕುಮಾರ ಎಂದೆಲ್ಲೆ ಹಾಡಿ ಹೊಗಳುವ ಮೂಲಕ ಭಕ್ತಿ ಸಮರ್ಪಣೆ ಮೆರೆದರು.
ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆ ಬಳಿಯ
ಹನುಮಗಿರಿಯಲ್ಲಿ ಹನುಮ ಜಯಂತಿ ನಡೆಯಿತು. ಪವಮಾನ
ಹೋಮ, ಅಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಪಂ| ಮಧ್ವಾಚಾರ್ಯ ಮೊಕಾಶಿ ಹಾಗೂ ಪಂ|
ಸಂಜೀವಾಚಾರ್ಯ ಮದಭಾವಿ ಅವರ ನೇತೃತ್ವದಲ್ಲಿ ಈ ಬಾರಿ ಹನುಮ ದೀಕ್ಷಾಕಾರ್ಯಕ್ರಮ ನಡೆಯಿತು. ಯುವಕರಲ್ಲಿ
ದೇಶಭಕ್ತಿ ಹಾಗೂ ಹನುಮಂತನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ದೊರಕಿಸುವ ಕೇಸರಿ, ಬಿಳಿ ಹಾಗೂ ಹಸಿರು ವರ್ಣದ ದಾರ ಕಟ್ಟುವ ಹನುಮದೀಕ್ಷಾ ಕಾರ್ಯಕ್ರಮ ವೈಭವದಿಂದ ನಡೆಯಿತು.
ವಿಜಯಪುರದ ಮುಳ್ಳಗಸಿ ಬಳಿ ಇರುವ ಹೊಯ್ಸಳರ ಕಾಲದ
800 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹನುಮಾನ
ದೇವಾಲಯದಲ್ಲಿ ಹನುಮ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಹನುಮಂತ ದೇವರ 5 ಅಡಿ ಎತ್ತರದ ಭವ್ಯ ಬೆಳ್ಳಿ ಮೂರ್ತಿ ಮತ್ತು ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯಿತು.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಆಚಾರ ಕಟ್ಟಿ ಬಡಾವಣೆಯಲ್ಲಿನ 350 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಶ್ರೀರಾಮ ಮಂದಿರದಲ್ಲಿ ಸಹ ಹನುಮ ಜಯಂತಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಜಲ ನಗರದ ಇಬ್ರಾಹಿಂಪುರ ರೈಲ್ವೇ ನಿಲ್ದಾಣ ಬಳಿ ಇರುವ ವಜ್ರಹನುಮಾನ ದೇವಾಲಯ, ಗಣೇಶ ನಗರದಲ್ಲಿರುವ ಸಾಕ್ಷಿ ಹನುಮಾನ ಮಂದಿರಗಳಲ್ಲೂ ಸಂಭ್ರಮದಿಂದ ಹನುಮ ಜಯಂತಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಜಯಪುರದ ಮನಗೂಳಿ ಅಗಸಿಯಲ್ಲಿರುವ ಹನುಮಾನ
ದೇವಾಲಯ, ವಿವೇಕ್ ನಗರದಲ್ಲಿರುವ ಪ್ರಸನ್ನ ಪಂಚಮುಖೀ ಪ್ರಾಣದೇವ ದೇವಾಲಯ, ಪ್ರಸನ್ನಾಂಜನೇಯ ದೇವಾಲಯ, ಹನುಮಂತದೇವರ ಗುಡಿ, ಮಧುಲಾ ಮಾರುತಿ ದೇವಾಲಯ, ಲದ್ದಿಕಟ್ಟಿ ಹನುಮಂತ ದೇವಾಲಯ ಸೇರಿದಂತೆ ಹಲವಾರು ಹನುಮಂತ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ
ಕಾರ್ಯಕ್ರಮಗಳು ನೆರವೇರಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.