ಕಾರ್ಮಿಕರಿಗೆ ಬಂತು ಶುಕ್ರದೆಸೆ
ನಗರದಲ್ಲಿ ಹೆಸರು ನೋಂದಣಿಗೆ ವಿಶೇಷ ಕೌಂಟರ್ ಆರಂಭ•ಕೂಲಿ ಪಾವತಿಗೆ ನರೇಗಾ ನಿಯಮ ಸಡಿಲಿಕೆ
Team Udayavani, May 15, 2019, 10:48 AM IST
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕಾರ್ಮಿಕರಿದ್ದ ಸ್ಥಳಕ್ಕೆ ಬಂದು ಕೆಲಸ ಕೊಡಲು ಹೆಸರು ನೋಂದಣಿ ಆರಂಭಿಸಿರುವ ತಾಪಂ ಅಧಿಕಾರಿಗಳ ತಂಡ.
ವಿಜಯಪುರ: ಹಳ್ಳಿಗಳಲ್ಲಿ ಉದ್ಯೋಗ ಸಿಗದೇ ವಿಜಯಪುರ ನಗರಕ್ಕೆ ಬರುತ್ತಿದ್ದ ಕಾರ್ಮಿಕರ ಸಮೀಕ್ಷೆ ನಡೆಸಿ, ತಕ್ಷಣವೇ ಉದ್ಯೋಗ ಕೊಡುವ ಕೆಲಸ ಆರಂಭಗೊಂಡಿದೆ. ನಗರದ ಅಥಣಿ ರಸ್ತೆಯಲ್ಲಿ ಉದ್ಯೋಗಕ್ಕಾಗಿ ಕಾರ್ಮಿಕರು ಅಂಗಲಾಚುತ್ತ ನಿಲ್ಲುತ್ತಿದ್ದ ಸ್ಥಳದಲ್ಲೇ ಜಾಬ್ ಕಾರ್ಡ್ ವಿತರಣೆ ಹಾಗೂ ಉದ್ಯೋಗ ನೀಡುವುದಕ್ಕೆ ಜಿಪಂ ಅಧಿಕಾರಿಗಳ ಪ್ರತ್ಯೇಕ ತಂಡವನ್ನು ನಿಯೋಜಿಸಿದೆ.
‘ವಿಜಯಪುರ ಮಾರುಕಟ್ಟೆಯಲ್ಲಿ ಕಾರ್ಮಿಕರು ಸಿಗುತ್ತಾರೆ’ ಶೀರ್ಷಿಕೆಯಲ್ಲಿ ‘ಉದಯವಾಣಿ’ ಮೇ 13ರಂದು ವಿಶೇಷ ವರದಿಗೆ ಪ್ರಕಟಿಸಿದ ಬೆನ್ನಲ್ಲೇ ಸ್ಪಂದನೆ ದೊರೆತಿದೆ. ವರದಿ ಪ್ರಕಟವಾಗುತ್ತಲೇ ಎಚ್ಚೆತ್ತ ವಿಜಯಪುರ ಜಿಪಂ ಸಿಇಒ ವಿಕಾಸ ಸುರಳಕರ ಕೂಡಲೇ ವಿಜಯಪುರ ನಗರಕ್ಕೆ ಉದ್ಯೋಗ ಅರಸಿ ಬರುವ ಹಳ್ಳಿಗರ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿದ್ದು ನೋಂದಣಿ ಕೇಂದ್ರವನ್ನೂ ತೆರೆದಿದ್ದಾರೆ.
ಇದಕ್ಕಾಗಿ ವಿಜಯಪುರ ನಗರದ ಆಥಣಿ ರಸ್ತೆಯಲ್ಲಿ ಉದ್ಯೋಗಕ್ಕಾಗಿ ಕಾರ್ಮಿಕರು ನಿಲ್ಲುತ್ತಿದ್ದ ಸ್ಥಳದಲ್ಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ನೀಡಲು ಹೆಸರು ನೋಂದಣಿಗೆ ಶಾಶ್ವತವಾಗಿ ಕೌಂಟರ್ ತೆರೆಯಲಾಗಿದೆ. ಇಬ್ಬರು ಪಿಡಿಒಗಳನ್ನು ಈ ಕೇಂದ್ರಕ್ಕೆ ನಿಯೋಜಿಸಿದ್ದು, ಬುಧವಾರದಿಂದ ಈ ಕೇಂದ್ರ ಕಾರ್ಯಾರಂಭ ಮಾಡಿದೆ.
ಹಳ್ಳಿಗಳಲ್ಲಿ ಉದ್ಯೋಗ ಇಲ್ಲ ಎಂದು ನಗರಕ್ಕೆ ಬರುವ ನರೇಗಾ ಜಾಬ್ ಕಾರ್ಡ್ ಇರುವ ಕಾರ್ಮಿಕರಿಗೆ ತಕ್ಷಣವೇ ಸರ್ಕಾರಿ ವಾಹನದಲ್ಲಿ ಹತ್ತಿರದ ಹಳ್ಳಿಗೆ ಕರೆದೊಯ್ದು ಉದ್ಯೋಗ ಕೊಡಲು ವ್ಯವಸ್ಥೆ ಮಾಡಲಾಗಿದೆ. ನರೇಗಾ ಜಾಬ್ ಕಾರ್ಡ್ ಇಲ್ಲದ ಕಾರ್ಮಿಕರನ್ನು ಗುರುತಿಸಿ, ಸ್ಥಳದಲ್ಲೇ ಜಾಬ್ ಕಾರ್ಡ್‌ಗೆ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ನೋಂದಣಿ ಕಾರ್ಮಿಕರ ಹೆಸರುಗಳನ್ನು ಆಯಾ ಗ್ರಾಪಂಗಳಿಗೆ ರವಾನಿಸಿ, ತಕ್ಷಣ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ.
‘ಉದಯವಾಣಿ’ ವರದಿ ಪರಿಣಾಮ ಜಿಲ್ಲೆಯಲ್ಲಿ ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಲು ನಿರ್ಧರಿಸಿದೆ. ನರೇಗಾ ಯೋಜನೆಯ ನಿಮಯ ಸಡಿಲಿಸಿ 3 ದಿನಗಳಲ್ಲೇ ಎನ್‌ಎಂಆರ್ ಸಲ್ಲಿಸಿ, 4-5 ದಿನಗಳಲ್ಲಿ ಕೂಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಎಂಬಂತೆ ಡೋಣೂರು ಪಿಡಿಒ ಫಾರ್ಮ್ ನಂ-6 ಅರ್ಜಿ ಸಲ್ಲಿಸಿದ ವಿಜಯಪುರ ನಗರಕ್ಕೆ ಕೂಲಿಗೆ ಬರುತ್ತಿದ್ದ ಪರಶುರಾಮ ತಳಕೇರಿ ಹಾಗೂ ಇತರೆ ಕಾರ್ಮಿಕರ ಮನೆಗೆ ಪಿಡಿಒ ಸ್ವಯಂ ತೆರಳಿ ಕೂಲಿ ಕೊಡಿಸಿದ್ದಾರೆ. ಸರ್ಕಾರಿ ವಾಹನದಲ್ಲಿ ನೆರೆಯ ಗ್ರಾಮ ಇಂಗಳೇಶ್ವರಕ್ಕೆ ಕರೆದೊಯ್ದು ಉದ್ಯೋಗ ಕೊಟ್ಟಿದ್ದಾರೆ. ಇದಲ್ಲದೇ ಗ್ರಾಮದಲ್ಲಿ ಸುಮಾರು 60 ಜನರಿಂದ ನರೇಗಾ ಯೋಜನೆಯಲ್ಲಿ ಉದ್ಯೋಗಕ್ಕಾಗಿ ಫಾರ್ಮ್-6 ಭರ್ತಿ ಮಾಡಿಸಿಕೊಂಡಿದ್ದು, ಎರಡು ದಿನಗಳಲ್ಲಿ ಗ್ರಾಮದಲ್ಲೇ ನಿರಂತರ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
ಮತ್ತೊಂದೆಡೆ ಮಂಗಳವಾರ ಬಸವನಬಾಗೇವಾಡಿ ಪಟ್ಟಣದ ನಂದೀಶ್ವರ ದೇವಸ್ಥಾನದ ಎದುರು ಕೂಡ ಇದೇ ರೀತಿ ಕಾರ್ಮಿಕರು ಕೆಲಸಕ್ಕೆ ಅಲೆಯುವ ಸ್ಥಿತಿ ಇದ್ದು, ಸದರಿ ವರದಿಯಿಂದ ಈ ಸ್ಥಳದಲ್ಲೂ ಕಾರ್ಮಿಕರ ಹೆಸರು ನೋಂದಣಿ ಆರಂಭಿಸಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ಇಂಡಿ ನೇತೃತ್ವದಲ್ಲಿ ಸಾಮಾಜಿಕ ಪರಿಶೋಧನಾ ಸಂಯೋಜಕ ಬಸವರಾಜ ಮಾದನಶಟ್ಟಿ, ಬಿ.ಎಸ್. ಧನಶೆಟ್ಟಿ, ತಾಂತ್ರಿಕ ಸಂಯೋಜಕ ವಿ.ಆರ್. ಪಟ್ಟಣಶೆಟ್ಟಿ, ಕಾರ್ಯದರ್ಶಿ ಘೋರ್ಪಡೆ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಣ್ಣೂರು ಎಸ್.ಎಸ್. ಶೇಗುಣಸಿ, ನರಸಲಗಿ ಜೆ.ಎಂ. ಮಮದಾಪುರ, ಯರನಾಳದ ರವಿ ಗುಂಡಾಳ, ಹೂವಿನಹಿಪ್ಪರಗಿಯ ಎಂ.ಎನ್. ಕತ್ತಿ, ಕಣಕಾಲ ಬಿ.ಎಂ. ಅಂಕದ, ಮಸಬಿನಾಳ ಕಾರ್ಯದರ್ಶಿ ಶಂಕರ ಕೋಲಕಾರ, ಮುತ್ತಗಿ ಎಸ್‌ಡಿಎ ಆರ್.ಎ. ಸಿಕ್ಕಲಗಾರ ಅವರಿದ್ದ ತಂಡ ಕಾರ್ಮಿಕರ ಸಮೀಕ್ಷೆ, ನೋಂದಣಿ ಆರಂಭಿಸಿದೆ.
ಗ್ರಾಪಂನಲ್ಲಿ ಪಿಡಿಒ ಸಿಗದಿದ್ದರೂ ವಿಜಯಪುರ ನಗರದಲ್ಲಿ ನರೇಗಾ ಯೋಜನೆ ಹೆಸರು ನೋಂದಣಿ ಹಾಗೂ ಉದ್ಯೋಗ ಕಲ್ಪಿಸಲು ಪ್ರತ್ಯೇಕ ಅಧಿಕಾರಗಳ ತಂಡದೊಂದಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ. ಕೂಲಿ ಹಣ ಪಾವತಿಗೆ ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ನರೇಗಾ ನಿಯಮ ಸಡಿಲಿಸಿ 3 ದಿನಗಳಲ್ಲಿ ಎನ್‌ಎಂಆರ್ ಸಲ್ಲಿಸಲು ಸೂಚಿಸಲಾಗಿದೆ.
•ವಿಕಾಸ ಸುರಳಕರ, ಜಿಪಂ ಸಿಇಒ, ವಿಜಯಪುರ
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.