62 ಸಿಬ್ಬಂದಿಗೆ ಕಾರಣ ಕೇಳಿ ಕನಗವಲ್ಲಿ ನೋಟಿಸ್ ಜಾರಿ
ಲೋಕಸಭಾ ಚುನಾವಣೆ ಕರ್ತವ್ಯ ಲೋಪ
Team Udayavani, Apr 21, 2019, 4:45 PM IST
ವಿಜಯಪುರ: ಲೋಕಸಭಾ ಸಾರ್ವತ್ರಿಕ-2019ರ ಚುನಾವಣೆಗೆ ಸಂಬಂಧಿ ಸಿದಂತೆ ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದರೂ ತರಬೇತಿಗೆ ಗೈರಾದ 62 ಸಿಬ್ಬಂದಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಪರ್ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಚುನಾವಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಮತಗಟ್ಟೆಗಳಿಗೆ ನಿಯೋಜಿತವಾಗಿರುವ ಸಿಬ್ಬಂದಿಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಏ.16 ಹಾಗೂ 17ರಂದು ಪೂರ್ವಯೋಜಿತ ತರಬೇತಿ ಹಮ್ಮಿಕೊಳ್ಳಲಾಗಿತ್ತು. ತರಬೇತಿಗೆ ಕಡ್ಡಾಯ ಹಾಜರಿಗೆ ಸೂಚಿಸಿದ್ದರೂ 62 ಅಧಿಕಾರಿ-ಸಿಬ್ಬಂದಿಗಳು ತರಬೇತಿಗೆ ಗೈರಾಗಿದ್ದರು.
ಚುನಾವಣೆಯಂತಹ ಮಹತ್ವದ ಕಾರ್ಯದಲ್ಲಿ ಕರ್ತವ್ಯ ಚ್ಯುತಿ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ ನೋಟಿಸ್ ತಲುಪಿದ 12 ಗಂಟೆಯೊಳಗೆ ಖುದ್ದಾಗಿ ಹಾಜರಾಗಿ, ಜಿಲ್ಲಾ ಚುನಾವಣಾಧಿಕಾರಿಗಳಿಗೆ ಲಿಖಿತ ಹೇಳಿಕೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ತವ್ಯಲೋಪ ಎಸಗಿದವರು: ಪಿಒ ಶ್ರೀನಿವಾಸ ಮಲ್ಲಪ್ಪ ಮಾಳೇದ, ಎಪಿಒ ಆರ್.ಬಸನಗೌಡ ಬಿರಾದಾರ, ಎಪಿಒಆರ್‌ಒ ಅಶ್ವಿನಿ ವಿ.ಕುಲಕರ್ಣಿ, ಪಿಒ ಶ್ರೀಶೈಲ ಕಲ್ಲಪ್ಪ ಬಂಡಿವಡ್ಡರ, ಪಿಆರ್‌ಒ ಶೀಲಾ ಪ್ರಕಾಶ ನಾದ, ಎಪಿಆರ್‌ಒದೇನು ಹಮು ಲಮಾಣಿ, ಎಪಿಒಆರ್‌ಒ ವಿಜಯಕುಮಾರ ಪೂಜಾರಿ, ಪಿಆರ್‌ಒ
ರಾಮರಾವಗೌಡ ಕಲಗೊಂಡಪ್ಪ ಪಾಟೀಲ, ಎಪಿಆರ್‌ಒ ಸಯ್ಯದಭಾಷಾ ಅಬ್ದುಲ್‌ಹಮೀದ್ ಶೇಖ್, ಪಿಒ ಡಬ್ಲ್ಯೂ .ಎ.ಬಿಜಾಪುರ, ಎಪಿಆರ್‌ಒ ರವಿ ಪವಾರ, ಎಪಿಆರ್‌ಒ ಸನತ್ ಕೆ., ಎಪಿಆರ್‌ಒ ಬಸವರಾಜ ಗುನ್ನಾಪುರ, ಪಿಒಗಳಾದ ಮಹ್ಮದ್ ಖುರಾಮ ಅಫ್ಜಲ್, ಮುಜಾಫರ ಬಂದೇನವಾಜ ಮುಲ್ಲಾ, ಬಸಪ್ಪ, ಎಂ.ಆರ್. ಜೋಶಿ, ಜಟ್ಟೆಪ್ಪ ಕಲ್ಲಪ್ಪ ಹಲಸಂಗಿ, ಶರಣಪ್ಪ ನಾಯ್ಕ, ಎಂ.ಐ. ಕೊಕಣಿ, ಚಂದಾಸಾ ಮುಲ್ಲಾ, ಪಿಆರ್‌ಒ ಶ್ರೀನಿವಾಸ, ಸೋಮಲಿಂಗ ದುರಗಪ್ಪ ಕೂಡಗಿ, ಬಸರಾಜ ಜಮಾದಾರ, ಎಪಿಆರ್‌ಒ ವಿನಾಯಕ ಒಡೆಯರಾಜ, ಪಿಒ ವಿ.ವಿ. ಚವ್ಹಾಣ, ಡಿ.ಆರ್. ಲಮಾಣಿ, ಸಿ.ಎಂ. ವಾರದ, ಪಿಆರ್‌ಒ ಎಂ.ವೈ. ವಗ್ಗರ, ಪಿಒ ಸುರೇಶ ನಾಯ್ಕ, ಪಿಆರ್‌ಒ ಸಂಜಯ ಖಡಗೇಕರ, ಪಿಒ ಸಾವಿತ್ರಿಬಾಯಿ ಯಲಗೋಡ, ಶ್ರೀಕಾಂತ ರಾಠೊಡ, ಪಿಆರ್‌ಒ ಸಿ.ಎಂ. ಕುಮಠಗಿ, ಪಿಆರ್‌ಒ ಬಿ.ಎ. ಗೂಳಿ, ಪಿಒಗಳಾದ ಶಂಕರ ರಾಠೊಡ, ಸಕೀಲಮ್ಮ, ಪರಮೇಶ್ವರಪ್ಪ ತಳವಾರ, ಪಿಆರ್‌ಒ ಜುಮ್ಮಪ್ಪ ಹರಿಜನ, ಪಿಒಗಳಾದ ರಾಜಶೇಖರ ಬಾಳಾಸಾಹೇಬ ಬಿರಾದಾರ, ಕೃಷ್ಣಾ ರಾಮಚಂದ್ರ ರಾಠೊಡ, ಬಸವರಾಜ ಚನ್ನಪ್ಪಗೌಡ, ಟಿ.ಎಂ.ಅಂಗಡಿ, ರಫೀಕಉನ್ನೀಸಾ, ಎಪಿಆರ್‌ಒ ಕಲ್ಪನಾ ಬಿ.ಪಾಟೀಲ, ಪಿಒಗಳಾದ ಮಲ್ಲಪ್ಪ ರಾವುತಪ್ಪ ಹಿರೇಕುರುಬರ, ರಾಜಶೇಖರ ಸಿ.ಡೊಳ್ಳಿ, ಕುಲಕರ್ಣಿ ವಿ.ಬಿ., ಹಿರೋಳಕರ ಬಿ.ಎ., ಅಕ್ಕಮಹಾದೇವಿ ಎ.ಬಿರಾದಾರ, ಪಿಆರ್‌ಒ ಮುಕುಲ ಹೆಬ್ಳಿಕರ, ಎಪಿಆರ್‌ಒ ಶಮಸುದ್ದಿನ್ ಎ.ಮಂದ್ರುಪ, ಪಿಒಗಳಾದ ದೇಶಪಾಂಡೆ ಜೆ.ಎನ್., ಬಿ.ಎ. ಹಜೇರಿ, ಪಿ.ಎಂ. ಹೊಸಮನಿ, ಪ್ರಕಾಶ ಪಾಂಡಪ್ಪ ಲಮಾಣಿ, ತುಕಾರಾಮ ಮಲ್ಲಪ್ಪ ದೊಡಮನಿ, ಪಿಆರ್‌ಒ ಸೈಯದ್ ದಸ್ತಗಿರಪಾಶಾ ಸಾಹೇಬಲಾಲ, ಪಿಒಗಳಾದ ರುದ್ರಮ್ಮ, ಅಬ್ದುಲ್ ರೆಹಮಾನ್ ಮಮ್ಮದಸಾಬ ಒಂಟಿ, ಶ್ರೀನಿವಾಸ ಕಟ್ಟಿಮನಿ ಹಾಗೂ ಸಯ್ಯದಶೇಖ ನಿರಾನಖಾದ್ರಿ ಎಂ. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.