ಮತದಾನ ಬಳಿಕ ಲೋಕ ಕದನ ಕಲಿಗಳು ನಿರುಮ್ಮಳ
ಮೊಮ್ಮಕ್ಕಳೊಂದಿಗೆ ಕಾಲ ಕಳೆದ ಜಿಗಜಿಣಗಿ•ಬೆಂಬಲಿಗ ನಾಯಕರೊಂದಿಗೆ ಡಾ| ಸುನೀತಾ ಚರ್ಚೆ
Team Udayavani, Apr 25, 2019, 2:56 PM IST
ವಿಜಯಪುರ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಲೇ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದ ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಸುಮಾರು ಒಂದು ತಿಂಗಳಿಂದ ಬಿಸಿಲನ್ನೂ ಲೆಕ್ಕಿಸದೇ ಜಿಲ್ಲೆಯಾದ್ಯಂತ ತಿರುಗಿದ್ದವರಿಗೆ ಇದೀಗ ವಿಶ್ರಾಂತಿಯ ಸಮಯ ಎಂಬ ಭಾವ ಮೂಡಿದೆ. ಪರಿಣಾಮ ಮತದಾನ ಮುಗಿದ ಮರುದಿನ ಕೆಲವರು ಮನೆಯಲ್ಲಿ ಹಾಯಾಗಿದ್ದರೆ, ಮತ್ತೆ ಕೆಲವರು ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.
12 ಸ್ಪರ್ಧಿಗಳಲ್ಲಿ ಪ್ರಮುಖರಾದ ಹ್ಯಾಟ್ರಿಕ್ ವಿಜಯಕ್ಕಾಗಿ ವಿಜಯಪುರ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಂಪೂರ್ಣ ನಿರಾಳತೆಯಿಂದ ಕುಳಿತಿದ್ದಾರೆ. ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಗೆ ಹೊಂದಿಕೊಂಡಿರುವ ತೋಟದ ಮನೆಯಲ್ಲಿ ಜಿಗಜಿಣಗಿ ಸದಾ ಮುಖಂಡರು, ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಸ್ಥಿತಿಯಲ್ಲಿ ಇರುತ್ತಿದ್ದರು. ಆದರೆ ಬುಧವಾÃರಿಂಥ ಯಾವ ಗೌಜು-ಗದ್ದಲವಿಲ್ಲದೇ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರುವ ಅವರು ಮೊಮ್ಮಕ್ಕಳ ಆಸೆಯಂತರ ಪ್ರವಾಸಕ್ಕೆ ಹೊರಡುವ ಯೋಜನೆ ರೂಪಿಸುತ್ತಿದ್ದಾರೆ.
ಚುನಾವಣೆ ಫಲಿತಾಂಶ ಬರಲು ಇನ್ನೂ ಒಂದು ತಿಂಗಳಿದ್ದು, ಮೊಮ್ಮಕ್ಕಳಿಗೂ ಶಾಲೆ ರಜೆ ಇದೆ. ಹೀಗಾಗಿ ಪ್ರವಾಸಕ್ಕೆ ಹೋಗಿ ರಜೆಯ ಮೋಜು ಮಾಡಲು ಮೊಮ್ಮಕ್ಕಳು ದುಂಬಾಲು ಬಿದ್ದಿದ್ದಾರೆ. ಎಲ್ಲಿಗೆ ಹೋಗಬೇಕು ಎಂಬ ಕುರಿತು ಇನ್ನಷ್ಟೇ ನಿರ್ಧರಿಸಲಿದ್ದೇನೆ. ಕೇಂದ್ರ ಸಚಿವನಾದ ಬಳಿಕ ಮೊಮ್ಮಕ್ಕಳೊಂದಿಗೆ ಕಾಲ ಕಳಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದೀಗ ರಾಜಕೀಯದ ಜಂಜಡ ಇಲ್ಲದ ದೂರ ಪ್ರದೇಶದಕ್ಕೆ ಪ್ರವಾಸ ಹೊರಡಲು ಸಿದ್ದತೆ ನಡೆಸಿದ್ದಾರೆ.
ಇದರ ಮಧ್ಯೆ ಬುಧವಾರ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲೇ ಆಪ್ತರೊಬ್ಬರರ ಮನೆಯಲ್ಲಿ ಸಾವು ಸಂಭವಿಸಿದ ವಿಷಯ ತಿಳಿಯುತ್ತಲೇ ರಮೇಶ ಜಿಗಜಿಣಗಿ ಮೃತರ ದರ್ಶನಕ್ಕೆ ತೆರಳಿದರು. ಈ ಹಂತದಲ್ಲೇ ಹಲವು ಹಳ್ಳಿಗಳಿಂದ ಬಂದಿದ್ದ ಕೆಲವು ಕಾರ್ಯಕರ್ತರು ಜಿಗಜಿಣಗಿ ಅವರು ಮನೆಯಲ್ಲಿ ಇಲ್ಲದ ರ್ಕಾಣ ಕೆಲ ಕಾಲ ಅವರಿಗಾಗಿ ಕಾಯ್ದು, ಹೊರಟು ಹೋದರು.
ಇನ್ನು ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳ ಅಭ್ಯರ್ಥಿ ಸುನೀತಾ ಚವ್ಹಾಣ ತಿಂಗಳಿಂದ ಸೂರ್ಯೋದಯಕ್ಕೆ ಮುನ್ನವೇ ಎದ್ದು ಪ್ರಚಾರಕ್ಕೆ ಓಡುವ ಧಾವಂತದಿಂದ ಮುಕ್ತರಾಗಿರುವ ನಿರಾಳತೆ ಪಡೆಯುತ್ತಿದ್ದಾರೆ. ನಿತ್ಯವೂ ಬೆಳಗ್ಗೆ 5ಕ್ಕೆ ಎದ್ದು ವಾಹನ ಏರಿ ಓಡುವ ದರ್ದಿಲ್ಲ. ಹೀಗಾಗಿ ನರಗದ ಸೊಲ್ಲಾಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸೂರ್ಯೋದಯದ ನಂತರ ಎದ್ದಿರುವ ಡಾ| ಸುನೀತಾ, ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಕೆಲಹೊತ್ತು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು.
ನಂತರ ಮತದಾನ ಮುಗಿಯುತ್ತಲೇ ತಮ್ಮ ರಾಜಕೀಯ ನಿರ್ಧಾರ ಕೈಗೊಳ್ಳುತ್ತಿದ್ದ ಪತಿ-ಶಾಸಕ ದೇವಾನಂದ ಚವ್ಹಾಣ ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಬುಧವಾರ ಮನೆಗೆ ಬಂದ ಪಕ್ಷದ ನಾಯಕರು, ಕಾರ್ಯಕರ್ತ, ಹಿತೈಷಿಗಳೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಯಾವ ಭಾಗದಲ್ಲಿ ತಮ್ಮ ಪರ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ, ಎಲ್ಲೆಲ್ಲಿ ಹಿನ್ನಡೆಯಾಗಿದೆ ಎಂದೆಲ್ಲ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಕಾರ್ಯಕರ್ತರು ನನ್ನ ರಾಜಕೀಯ ಜೀವನದ ನರನಾಡಿಗಳಿದ್ದಂತೆ. ಕಾರ್ಯಕರ್ತರಿಲ್ಲದೇ ಯಾವ ಪಕ್ಷ-ನಾಯಕ ಬೆಳೆಯಲಾರ. ಕಾಯಕರ್ತರು ಕಳೆದ ಒಂದು ತಿಂಗಳಿಂದ ತಮ್ಮ ಮನೆಯನ್ನು ತೊರೆದು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಎಷ್ಟು ಕ್ರತಜ್ಷತೆ ಸಲ್ಲಿಸಿದರೂ ಸಾಲದು. ಈ ಬಾರಿಯೂ ನನ್ನ ಗೆಲುವು ಶತಸಿದ್ದ, 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ.
•ರಮೇಶ ಜಿಗಜಿಣಗಿ
ಕೇಂದ್ರ ಸಚಿವ-ಬಿಜೆಪಿ ಅಭ್ಯರ್ಥಿ
ನಸುಕಿನಲ್ಲೇ ಪ್ರಚಾರಕ್ಕೆ ಓಡೋಡಿ ಹೋಗುತ್ತಿದ್ದ ನನಗೆ ತಿಂಗಳಿಂದ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಮನೆಯಲ್ಲೇ ಇದ್ದು ಮಕ್ಕೊಂದಿಗೆ ಬೆರೆಯುತ್ತೇನೆ. ನಾನು ಗೆಲ್ಲಲೇಬೇಕು ಎಂದು ಜೆಡಿಎಸ್-ಕಾಂಗ್ರೆಸ್ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಕಳೆದ ಒಂದು ತಿಂಗಳಿಂದ ವಿಶ್ರಾಂತಿ ಇಲ್ಲದೇ ದುಡಿದಿದ್ದಾರೆ. ಇವರ ಪರಿಶ್ರಮದ ಫಲವಾಗಿ ನಾನು ಕನಿಷ್ಠ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.
•ಡಾ| ಸುನೀತಾ ಚವ್ಹಾಣ
ಮಿತ್ರ ಪಕ್ಷಗಳ ಜೆಡಿಎಸ್ ಅಭ್ಯರ್ಥಿ
•ಜಿ.ಎಸ್. ಕಮತರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.