ಮತದಾನದಲ್ಲಿ ಅಲ್ಪ ಪ್ರಮಾಣ ಹೆಚ್ಚಳ

ಸೈನಿಕ ಶಾಲೆಯಲ್ಲಿ ಸಶಸ್ತ್ರ ಕಾವಲು,ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ, ಕಳೆದ ಬಾರಿ ಶೇ. 59.70-ಈ ಬಾರಿ ಶೇ. 61.70

Team Udayavani, Apr 25, 2019, 4:16 PM IST

25-April-20

ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ಸಮ್ಮುಖದಲ್ಲಿ ಲೋಕಸಭೆ ಚುನಾವಣೆ ಮತಯಂತ್ರಗಳನ್ನು ಸಶಸ್ತ್ರ ಪೊಲೀಸ್‌ ಕಾವಲಿಗೆ ಒಪ್ಪಿಸಲಾಯಿತು

ವಿಜಯಪುರ: ದೇಶದ 17ನೇ ಲೋಕಸಭೆ ರಚನೆಗಾಗಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಲ್ಲಿ ಏ. 23ರಂದು ಮತದಾನ ನಡೆಯಿತು. ಇದರಲ್ಲಿ 17.95 ಲಕ್ಷ ಮತದಾರರಲ್ಲಿ 11.08 ಲಕ್ಷ ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 61.70 ಮತದಾನವಾಗಿದೆ. ಲೋಕಸಭೆಯ ಕಳೆದ ಚುನಾವಣೆಗಿಂತ ಈ ಬಾರಿ ಶೇ. 2 ಮತದಾನ ಹೆಚ್ಚಳವಾಗಿದೆ.

ಮಂಗಳವಾರ ಮತದಾನದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಮತಯಂತ್ರಗಳನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ನಗರಕ್ಕೆ ತರಲಾಗಿದ್ದು, ಅಥಣಿ ರಸ್ತೆಯಲ್ಲಿರುವ ಸೈನಿಕ ಶಾಲೆಯಲ್ಲಿ ಸಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಕಣ್ಗಾವಲಿನಲ್ಲಿ ಕಾಯ್ದಿರಿಸಲಾಗಿದೆ. ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಕಾರಣ ಕ್ಷೇತ್ರ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. ಹೀಗಾಗಿ ಈ ಬಾರಿ ವಿಜಯಪುರ ಲೋಕಸಭೆ ಪ್ರತಿನಿಧಿಯಾಗಲು ಸ್ಪರ್ಧೆ ಯಲ್ಲಿ 12 ಅಭ್ಯರ್ಥಿಗಳು ಮತಪರೀಕ್ಷೆ ಎದುರಿಸಿದ್ದು, ಸಂಸತ್‌ ಪ್ರವೇಶಿಸುವವರು ಯಾರೂ ಎಂಬುದನ್ನು ತಿಳಿಯಲು ಮೇ 23ರವರೆಗೆ ಕಾಯಬೇಕಿದೆ.

ಜಿಲ್ಲೆಯಲ್ಲಿ 13,01,025 ಪುರುಷ, 12,60,170 ಮಹಿಳೆಯರು ಹಾಗೂ ಇತರೆ 269 ಮತದಾರರು ಸೇರಿ 17,95,931 ಮತದಾರರಿದ್ದಾರೆ. ಇದರಲ್ಲಿ 5,86,804 ಪುರುಷರು ಹಾಗೂ 5,21,227 ಮತದಾರರು ಹಾಗೂ 27 ಇತರೆ ಸೇರಿ 11,08,058 ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. 61.70 ಮತದಾನವಾಗಿದೆ. ಪ್ರಖರ ಬಿಸಿಲು, ಗುಳೆ ಹೋಗಿರುವ ಮತದಾರರು, ಕುಡಿಯುವ ನೀರು, ಉದ್ಯೋಗದಂಥ ಸಮಸ್ಯೆಗಳ ಮಧ್ಯೆಯೂ ಉತ್ತಮ ಮತದಾನವಾಗಿದೆ. 2014 ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ. 2 ಮತದಾನ ಹೆಚ್ಚಳವಾಗಿದೆ.

2014 ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, 8,46,929 ಪುರುಷ, 7,74,430 ಮಹಿಳಾ ಮತದಾರರು ಮಾತ್ರವಲ್ಲದೇ 177 ಇತರ ಮತದಾರರು ಸೇರಿ ಒಟ್ಟು 16,21,536 ಮತದಾರರಿದ್ದರು. ಇದರಲ್ಲಿ 5,22,431 ಪುರುಷ, 4,45,848 ಮಹಿಳಾ ಮತದಾರರು ಹಾಗೂ 7 ಜನ ಇತರ ಮತದಾರರು ಸೇರಿ 9,68,286 ಮತದಾರರು ಮತದಾನದ ಹಕ್ಕು ಚಲಾಯಿಸಿದ್ದರಿಂದ ಶೇ. 59.70 ಮತದಾನವಾಗಿತ್ತು.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,83,715 ಮತದಾರರಲ್ಲಿ 1,10,240 ಮತದಾರರು ಮತ ಚಲಾಯಿಸಿದ್ದು, ಶೇ. 60.10 ಮತದಾನವಾಗಿದೆ. ಈ ಬಾರಿ 2,06,824 ಮತದಾರರಲ್ಲಿ 1,23,091 ಮತದಾರರು ತಮ್ಮ ಹಕ್ಕು ಪ್ರತಿಪಾದಿಸಿದ್ದರಿಂದ ಶೇ. 59.51 ಮತದಾನವಾಗಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 6ನೇ ಸ್ಥಾನದಲ್ಲಿದೆ.

ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,86,574 ಮತದಾರರಲ್ಲಿ 1,09,082 ಮತ ಚಲಾಯಿಸಿದ್ದರಿಂದ ಶೇ. 58.31 ಮತದಾನವಾಗಿತ್ತು. ಈ ಬಾರಿ 2,10,866 ಮತದಾರರಲ್ಲಿ 1,23,055 ಮತದಾರರು ಮತಚಲಾವಣೆ ಮಾಡಿದ್ದರಿಂದ ಶೇ. 58.36 ಮತದಾನವಾಗಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 7ನೇ ಸ್ಥಾನದಲ್ಲಿದೆ.

ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,83,101 ಮತದಾರರಲ್ಲಿ 1,17,312 ಮತದಾರರು ಮಾತ್ರವೇ ಮತದಾನ ಮಾಡಿದ್ದರಿಂದ ಶೇ. 64.01 ಮತದಾನವಾತ್ತು. ಈ ಬಾರಿ 2,04,850 ಮತದಾರರಲ್ಲಿ 1,35,252 ಮತದಾರರು ಮಾತ್ರ ಮತದಾನ ಮಾಡಿರುವುದರಿಂದ ಶೇ. 66.02 ಮತದಾನವಾಗಿದೆ. ಜಿಲ್ಲೆಯಲ್ಲೇ 8 ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನವಾದ ಎರಡನೇ ಸ್ಥಾನದಲ್ಲಿದೆ.

ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,93,941 ಮತದಾರರಲ್ಲಿ 1,24,995 ಜನ ಮತದಾನದಲ್ಲಿ ಭಾಗವಹಿಸಿದ್ದು, ಶೇ. 64.49 ಮತದಾನವಾಗಿತ್ತು. ಈ ಬಾರಿ 2,06,738 ಮತದಾರರಲ್ಲಿ 1,39,192 ಮತದಾರರು ಮಾತ್ರ ಮತದಾನ ಮಾಡಿರುವ ಕಾರಣ ಶೇ. 67.33 ಮತದಾನವಾಗಿದ್ದು, ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನವಾದ ಕ್ಷೇತ್ರ ಎಂಬ ಹಿರಿಮೆಯೊಂದಿಗೆ ಮೊದಲ ಸ್ಥಾನದಲ್ಲಿದೆ.

ವಿಜಯಪುರ ನಗರ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 2,34,669 ಮತದಾರರಲ್ಲಿ 1,25,006 ಮತದಾರರು ಮತ ಚಲಾಯಿಸಿದ್ದು, ಶೇ. 53.41 ಮತದಾನವಾಗಿತ್ತು. ಈ ಬಾರಿ ಒಟ್ಟು 2,48,843 ಮತದಾರರಲ್ಲಿ 1,41,569 ಮತದಾರರು ಮಾತ್ರ ಮತದಾನ ಮಾಡಿದ್ದರಿಂದ ಶೇ. 56.89 ಮತದಾನವಾಗಿದೆ. ಇದರೊಂದಿಗೆ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲೇ ಕೊನೆ ಸ್ಥಾನ ಸಂಪಾದಿಸಿದೆ.

ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ ಒಟ್ಟು 2,36,474 ಮತದಾರರಲ್ಲಿ 1,39,958 ಮತದಾರರು ಮಾತ್ರ ಮತದಾನದಲ್ಲಿ ಭಾಗವಹಿಸಿದ್ದರಿಂದ ಶೇ. 59.11 ಮತದಾನವಾಗಿತ್ತು. ಈ ಬಾರಿ ಒಟ್ಟು 2,56,845 ಮತದಾರರಲ್ಲಿ 1,63,613 ಮತದಾನ ಆಗಿದ್ದು, ಜಿಲ್ಲೆ 8 ವಿಧಾನಸಭೆ ಕ್ಷೇತ್ರಗಳಲ್ಲಿ 3ನೇ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಮಿತ್ರಪಕ್ಷಗಳ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ ಅವರ ಪತಿ ದೇವಾನಂದ ಚವ್ಹಾಣ ಶಾಸಕ ಎಂಬುದು ಗಮನೀಯ.

ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 7,08,092 ಮತದಾರರಲ್ಲಿ 1,25,661 ಮತದಾರರು ಮತ ಚಲಾಯಿಸಿದ್ದರಿಂದ ಶೇ. 60.41 ಮತದಾನವಾಗಿತ್ತು. ಈ ಬಾರಿ 2,33,849 ಮತದಾರರಲ್ಲಿ 1,46,412 ಮತದಾರರು ಮತದಾನ ಮಾಡಿದ್ದರಿಂದ ಶೇ. 62.61 ಮತದಾನದೊಂದಿಗೆ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 4ನೇ ಸ್ಥಾನದಲ್ಲಿದೆ.

ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 1,94,970 ಮತದಾರರಲ್ಲಿ 1,16,032 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರಿಂದ ಶೇ. 59.39 ಮತದಾನವಾಗಿತ್ತು. ಈ ಬಾರಿ 2,27,114 ಮತದಾರರಲ್ಲಿ 1,35,874 ಮತದಾನವಾಗುವ ಮೂಲಕ ಶೇ. 59.83 ಮತದಾನವಾಗುವ ಮೂಲಕ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 5ನೇ ಸ್ಥಾನದಲ್ಲಿದೆ. ಗಮನೀಯ ಅಂಶ ಎಂದರೆ ಈ ಕ್ಷೇತ್ರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಪ್ರತಿನಿಧಿಸುವ ಕ್ಷೇತ್ರ ಎಂಬುದು ವಿಶೇಷ.

ಚುನಾವಣೆ ಪೂರ್ವದಲ್ಲಿ ಯುವ ಮತದಾರರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತು ಕಾಲೇಜುಗಳಲ್ಲಿ ಹಾಗೂ ನಗರ-ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮತದಾನ ನೋಂದಣಿ ಅಭಿಯಾನ ಮಾಡಿದ್ದೇವು. ಚುನಾವಣೆ ಘೋಷಣೆ ಬಳಿಕ ಮತದಾನ ಮಾಡುವ ಮಹತ್ವ ತಿಳಿಸುವ ಕುರಿತು ಜಿಲ್ಲೆಯಾದ್ಯಂತ ನಡೆಸಿದ ವಿವಿಧ ಸ್ವರೂಪದ ಜಾಗೃತಿ ಪರಿಣಾಮ ನೋಂದಣಿ ಹಾಗೂ ಮತದಾನ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
•ವಿಕಾಸ ಸುರಳಕರ,
ಜಿಲ್ಲಾಧ್ಯಕ್ಷರು ಸ್ವೀಪ್‌ ಸಮಿತಿ, ವಿಜಯಪುರ

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.