ಲಿಂಬೆ‌ನಾಡಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ

ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಚರ್ಚೆ ಹುಟ್ಟು ಹಾಕಿದ ಮತದಾನ ಹೆಚ್ಚಳ

Team Udayavani, May 5, 2019, 10:17 AM IST

5-MAY-4

ಇಂಡಿ ಕ್ಷೇತ್ರ

ವಿಜಯಪುರ: ಲೋಕಸಭೆ ಚುನಾವಣೆ ಮತದಾನ ಮುಗಿದ ಬಳಿಕ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದ ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಶೇ. 2.2 ಮತದಾನ ಹೆಚ್ಚಳವಾಗಿದೆ. ಈ ಹೆಚ್ಚಳ ಮತದಾನದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಚಾರ ನಡೆದಿದೆ. ರಪ್ತ್ತು ಗುಣಮಟ್ಟದ ಲಿಂಬೆ ಬೆಳೆಯುವಲ್ಲಿ ಹೆಸರಾದ ಈ ನೆಲದ ಮತದಾರ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕಾರಣ ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ಮಣೆ ಹಾಕಿದ್ದಾರೆ ಎಂಬುದು ಇದೀಗ ಕುತೂಹಲದೊಂದಿಗೆ ಚರ್ಚೆ ನಡೆದಿದೆ.

ಇಂಡಿ ವಿಧಾನಸಭೆ ವ್ಯಾಪ್ತಿಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ 2,33,849 ಮತದಾರರಿದ್ದು, 1,46,412 ಮತದಾರರು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಇದರೊಂದಿಗೆ ಶೇ. 62.61 ಮತದಾನವಾಗಿದ್ದು ಜಿಲ್ಲೆಯ 8 ವಿಧಾನಸಭೆಗಳಲ್ಲಿ 5ನೇ ಸ್ಥಾನದಲ್ಲಿದೆ. 2014ರಲ್ಲಿ ಶೇ. 60.41 ಮತದಾನವಾಗಿದ್ದು, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಶೇ.2.2 ಮತದಾನದಲ್ಲಿ ಹೆಚ್ಚಳವಾಗಿದೆ. ಹೆಚ್ಚಾದ ಮತದಾನ ಯಾರಿಗೆ ವರ, ಯಾರಿಗೆ ಶಾಪ ಎಂಬ ಚರ್ಚೆ ಹುಟ್ಟು ಹಾಕಿದೆ‌.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಇಂಡಿ ತಾಲೂಕು ಕರ್ನಾಟಕ ರಾಜ್ಯದ ಗಡಿ ತಾಲೂಕಾಗಿದ್ದು, ಅಭಿವೃದ್ಧಿ ಇಲ್ಲಿ ಮರೀಚಿಕೆ. ಕುಡಿಯುವ ನೀರಿಗೆ ಗಂಭೀರ ಪರಿಸ್ಥಿತಿ ಇದ್ದರೂ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ರಪ್ತು ಹಾಗೂ ಉತ್ಕೃಷ್ಠ ಗುಣಮಟ್ಟದ ಲಿಂಬೆ ಬೆಳೆಯುವ ಈ ನೆಲದಲ್ಲಿ ರಾಜಕೀಯ ಮೇಲಾಟಕ್ಕೇನೂ ಕೊರತೆ ಇಲ್ಲ. ತಮಗೆ ಕುಡಿಯುವ ನೀರಿಲ್ಲದಿದ್ದರೂ ಹತ್ತಾರು ಸಾವಿರ ರೂ. ಸಾಲ ಮಾಡಿ ಲಿಂಬೆ ಸೇರಿದಂತೆ ತೋಟದ ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕುವ ಅನ್ನದಾನ ಗೋಳು ದೇವರಿಗೇ ಪ್ರಿಯ. ಮಳೆ ಇಲ್ಲದ ಬರದ ನೆಲದ ಇಲ್ಲಿನ ಮಣ್ಣಿನ ಮಕ್ಕಳು ಆನ್ಯ ನೆಲಕ್ಕೆ ಅನ್ನ ಹುಡುಕಿಕೊಂಡು ಗುಳೆ ಹೋಗುವುದು ಸಾಮಾನ್ಯ. ಇಂತ ಸಾಲು ಸಾಲು ಸಮಸ್ಯೆಗಳು, ಇಲ್ಲಗಳ ಸರಮಾಲೆ ಹೊದ್ದು ಮಲಗಿದೆ.

ಇಂತ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಚರ್ಚೆಗಿಂತ, ವ್ಯಕ್ತಿಗತ ಟೀಕೆ, ಆರೋಪಗಳಿಗೆ ಹೆಚ್ಚಿನ ಮಣೆ ಹಾಕಿದ್ದರಿಂದ ಮತದಾರ ಈ ಬಾರಿ ಯಾರಿಗೆ ಒಲಿದಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ. ಗಮನೀಯ ಅಂಶ ಎಂದರೆ ಮೋದಿ ಸರ್ಕಾರದಲ್ಲಿ ಮಂತ್ತಿಯಾಗುವ ಮಟ್ಟಕ್ಕೆ ರಾಜಕೀಯವಾಗಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಬಿಜೆಪಿ ಹಾಲಿ ಸಂಸದ ಹಾಗೂ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ತವರೂರು ಅಥರ್ಗಾ ಗ್ರಾಮ ಹಾಗೂ ಇವರ ನೇರ ಎದುರಾಳಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ ಅವರ ತಾಂಬಾ ನಾರಾಯಣ ಹಟ್ಟಿ ತಾಂಡಾ ಇರುವುದು ಇದೇ ತಾಲೂಕಿನಲ್ಲಿ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ತವರಿನ ಇಬ್ಬರಲ್ಲಿ ಯಾರಿಗೆ ಮತದಾರ ಮಣೆ ಹಾಕಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ.

ಮಳೆ ಕೊರತೆ, ಭೀಕರ ಬರ, ಗುಳೆ, ಲಿಂಬೆ ಬೆಳೆಗಾರರ ಸಮಸ್ಯೆ ಸೇರಿದಂತೆ ಈ ಭಾಗದ ಜನರು ಅತ್ಯಂತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಂಸದರಾಗಿ ಕಳೆದ ಎರಡು ದಶಕಗಳಲ್ಲಿ ರಮೇಶ ಜಿಗಜಿಣಗಿ ಅವರು ಹಳ್ಳಿಗಳಿಗೆ ಮುಖ ಹಾಕಿಲ್ಲ ಎಂಬ ಆರೋಪವಿದೆ. ಕೇಂದ್ರದಲ್ಲಿ ಸಚಿವರಾಗಿ ಪ್ರಭಾವ ಹೊಂದಿದ್ದರೂ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ತವರಿಗೆ ಏನನ್ನೂ ಮಾಡಿಲ್ಲ ಎಂಬ ಕೋಪ ಕ್ಷೇತ್ರದ ಜನರನ್ನು ಕಾಡುತ್ತಿರುವುದು ಇವರ ವಿರುದ್ಧ ವಿರೋಧಿ ಅಲೆ ಸೃಷ್ಟಿಸಿತ್ತು.

ಈ ವಿರೋಧಿ ಅಲೆ ಜಿಗಜಿಣಗಿ ಎಲ್ಲೆಡೆಯಂತೆ ಈ ಕ್ಷೇತ್ರದಲ್ಲೂ ಹೆಚ್ಚಿಗೆ ಕಾಡಿದ್ದರೂ, ಮೋದಿ ಅಲೆ, ಹೊಸ ಮತದಾರರು ತಮ್ಮೊಂದಿಗೆ ಇದ್ದಾರೆ. ಈ ತಾಲೂಕಿನಲ್ಲೇ ಹಾಯ್ದು ಹೋಗಿರುವ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಜೋಡಿ ಹಳಿ, ಇಂಡಿ ಸೇರಿದಂತೆ ಜಿಲ್ಲೆಯ 5 ಕಡೆಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಬಹುಹಳ್ಳಿ ಕುಡಿಯುವ ಯೋಜನೆಗಳನ್ನು ಮಾಡಿಸಿದ್ದಾರೆ. ಆದರೂ ಮಾಡಿದ್ದನ್ನು ಹೇಳಿಕೊಳ್ಳುವ ಮನಸ್ಥಿತಿ ರೂಢಿಸಿಕೊಂಡ ವ್ಯಕ್ತಿತ್ವ ಜಿಗಜಿಣಗಿ ಅವರದಲ್ಲ. ರಾಜಕೀಯ ವಿರೋಧಿಗಳು ಏನನ್ನೂ ಮಾಡಿಲ್ಲ ಎಂಬ ಆರೋಪ ಮಾಡಿದರೂ ಕ್ಷೇತ್ರಲ್ಲಿ ಮತದಾರ ಜಾಗೃತಾನಾಗಿದ್ದು, ಎಲ್ಲವವನ್ನೂ ಗಮನಿಸಿಯೇ ತಮ್ಮ ಬೆಂಬಲಕ್ಕೆ ನಿಂತಿದ್ದಾನೆ ಎಂಬುದು ಬಿಜೆಪಿ ನಾಯಕರ ಅಂಬೋಣ.

ಇನ್ನು ಜೆಡಿಎಸ್‌-ಕಾಂಗ್ರೆಸ್‌ ಮಿತ್ರಪಕ್ಷಗಳ ಲೆಕ್ಕಚಾರಾವೇ ಬೇರೆ. ನಾಲ್ಕು ದಶಕಗಳ ಸುದೀರ್ಘ‌ ಅವಧಿಗೆ ಅಧಿಕಾರದ ರಾಜಕೀಯ ಶಕ್ತಿ ಸ್ಥಾನದಲ್ಲಿರೂ ಜಿಗಜಿಣಗಿ ಅವರು ಯಾವ ಸಮಸ್ಯೆಗೂ ಪರಿಹಾರ ಕಂಡುಕೊಂಡಿಲ್ಲ. ತಾಲೂಕಿನಲ್ಲಿ ಕೆರೆಗಳು, ಕೊಳಬೆ ಬಾವಿಗಳು ಬತ್ತಿ ಜನರು ಕುಡಿಯುವ ನೀರಿಗೆ ತತ್ವಾರ ಎದುರಿಸಿದರೂ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರಿ ಮಂತ್ರಿಯಾಗಿ ಒಂದು ಹಳ್ಳಿಗೂ ಬೊಗಸೆ ನೀರು ಕೊಡಲಿಲ್ಲ. ಮಾಡಿದ ಕೆಲಸಗಳನ್ನು ಹೇಳಿಕೊಳ್ಳುವ ಜಾಯಮಾನದವರಲ್ಲ ಎಂದು ಸ್ವಪಕ್ಷೀಯ ಮುಖಂಡರು ಎಷ್ಟೇ ಸಮರ್ಥಿಸಿಕೊಂಡರೂ ಕೆಲಸ ಮಾಡಿದ್ದರೆ ತಾನೇ ಹೇಳಿಕೊಳ್ಳಲು ಎಂದು ವಿಪಕ್ಷಗಳ ಧುರೀಣರು ಮೂದಲಿಸಿದ್ದಾರೆ.

ಹೀಗಾಗಿ ನಾನು ಮಾಡಿದ ಕೆಲಸ ಹೇಳಿಕೊಳ್ಳುವುದಿಲ್ಲ, ಮೋದಿ ಮುಖ ನೋಡಿ ಮತ ಹಾಕಿ ಎಂದು ಸ್ಪರ್ಧೆಗೆ ಮುನ್ನವೇ ಸೋಲು ಒಪ್ಪಿಕೊಂಡಿದ್ದನ್ನು ಮತದಾರ ಗಂಭೀರವಾಗಿ ಪರಿಗಣಿಸಿದ್ದಾನೆ. ಕಳೆದ 10 ವರ್ಷಗಳಲ್ಲಿ ಸಂದಸರಾಗಿ ಯಾವೊಂದು ಹಳ್ಳಿಗೂ ಇವರ ಮುಖ ತೋರಿಸಿಲ್ಲ, ಕನಿಷ್ಠ ಚುನಾವಣೆ ಸಂದರ್ಭದಲ್ಲೂ ಬಹುತೇಕ ಹಳ್ಳಿಯ ಮತದಾರ ಇವರ ಮುಖವನ್ನೇ ನೋಡಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಿದ್ದಾನೆ ಎಂಬ ನಿರೀಕ್ಷೆ ಹೊಂದಿದ್ದಾರೆ.

ಇದಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 50 ಸಾವಿರ ಮತಗಳಿಂದ ಗೆದ್ದಿರುವ ಇಂಡಿ ಕ್ಷೇತ್ರ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಹಿಡಿತದಲ್ಲಿದೆ. 39 ಸಾವಿರ ಮತಗಳನ್ನು ಪಡೆದಿದ್ದ ಜೆಡಿಎಸ್‌ ಪಕ್ಷದ ಬಿ.ಡಿ. ಪಾಟೀಲ ಎರಡನೇ ಸ್ಥಾನದಲ್ಲಿದ್ದರು. ಪ್ರಸಕ್ತ ಲೋಕಸಭೆಯಲ್ಲಿ ಮೈತ್ರಿ ಫ‌ಲವಾಗಿ ಉಭಯ ಪಕ್ಷಗಳ ನಾಯಕರು ಒಂದಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದಂತೆ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆಹಿನ್ನಡೆ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಸಂಸದರಾಗಿ, ಕೇಂದ್ರ ಸಚಿವರಾಗಿ ರಮೇಶ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ರೈಲ್ವೆ ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಕೇಂದ್ರದಿಂದ ಜಿಲ್ಲೆಗೆ ಅಗತ್ಯ ಇರುವ ಯೋಜನೆಗಳನ್ನು ತಂದಿದ್ದಾರೆ. ಇಷ್ಟಕ್ಕೂ ಕೇಂದ್ರ ಸರ್ಕಾರ ನೇರವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿಲ್ಲದ ಕಾರಣ, ತನಗೆ ನೀಡಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಹೀಗಾಗಿ ಜಿಗಜಿಣಗಿ ಅವರು ಮಾಡಿರುವ ಸಾಧನೆ, ಯುವ ಮತದಾರರು ಹಾಗೂ ಮೋದಿ ಅಲೆ ಎಲ್ಲ ಸೇರಿ ಇಂಡಿ ಕ್ಷೇತ್ರ ಈ ಬಾರಿ ಬಿಜೆಪಿ ಪಕ್ಷಕ್ಕೆ ಕನಿಷ್ಠ 10 ಸಾವಿರಕ್ಕೂ ಅಧಿಕ ಮತಗಳನ್ನು ನೀಡಲಿದೆ.
ಕಾಸುಗೌಡ ಪಾಟೀಲ
ಅಧ್ಯಕ್ಷರು, ಬಿಜೆಪಿ ಮಂಡಲ, ಇಂಡಿ

ಕೇಂದ್ರ ಸಚಿವರಾಗಿರುವ ರಮೇಶ ಜಿಗಜಿಣಗಿ ಅವರು ಕಳೆದ ಎರಡು ಪೂರ್ಣಾವಧಿಗೆ ಸಂಸದರಾದರೂ ತಮ್ಮದೇ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡದ ಕಾರಣ, ಹಳ್ಳಿಗಳ ಮತದಾರ ಇವರ ಮುಖವನ್ನೇ ನೋಡಿಲ್ಲ. ರಾಜ್ಯದ ಗಡಿಯಲ್ಲಿರುವ ಇಂಡಿ ತಾಲೂಕು ಕುಡಿಯುವ ನೀರು, ಉದ್ಯೋಗದಂಥ ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದರೂ ತಮಗಿರುವ ಅಧಿಕಾರ ಸದ್ಬಳಕೆ ಮಾಡಿಕೊಂಡು ಜಿಲ್ಲೆ ಮಾತಿರಲಿ ತವರು ತಾಲೂಕಿನ ಅಭಿವೃದ್ಧಿಗೆ ಕನಿಷ್ಠ ಕಾಳಜಿ ತೋರಲಿಲ್ಲ. ಹೀಗಾಗಿ ಬಿಜೆಪಿ ವಿರೋಧಿ ಅಲೆ ಸೇರಿ ಈ ಬಾರಿ ಇಂಡಿ ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮಹಾಘಟ ಬಂಧನ್‌ನ ಜೆಡಿಎಸ್‌ ಅಭ್ಯರ್ಥಿ ಸುನೀತಾ ಅವರಿಗೆ 10 ಸಾವಿರ ಹೆಚ್ಚಿನ ಮತ ಪಡೆದು ಗೆಲುವಿಗೆ ಮುನ್ನಡೆ ನೀಡಲಿದೆ.
ಬಿ.ಡಿ. ಪಾಟೀಲ
ತಾಲೂಕಾಧ್ಯಕ್ಷರು, ಜೆಡಿಎಸ್‌, ಇಂಡಿ

ಜಿ.ಎಸ್‌. ಕಮತರ

ಟಾಪ್ ನ್ಯೂಸ್

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

BGV-Gruhalkmi

Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.