ಹ್ಯಾಟ್ರಿಕ್ ವೀರ ರಮೇಶ ಜಿಗಜಿಣಗಿ ಕೈ ಹಿಡಿದ ತವರು ಕ್ಷೇತ್ರದ ಮತದಾರ
ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ 46,084 ಮತಗಳ ಲೀಡ್•ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಅಥರ್ಗಾ ಗ್ರಾಮಸ್ಥರು
Team Udayavani, May 26, 2019, 12:45 PM IST
ಉಮೇಶ ಬಳಬಟ್ಟಿ
ಇಂಡಿ: ವಿಜಯಪುರ ಮೀಸಲು ಕ್ಷೇತ್ರದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಈ ಬಾರಿಯೂ ತವರಿನ ಜನ ಕೈ ಹಿಡಿದಿದ್ದಾರೆ. ರಮೇಶ ಜಿಗಜಿಣಗಿ ಕೆಲಸ ಮಾಡಿಲ್ಲ, ಈ ಬಾರಿ ಜಿಗಜಿಣಗಿ ಸೋಲು ಶತಸಿದ್ಧ ಎಂದು ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ವಿರೋಧಿ ಅಲೆ ಇದ್ದ ಸಂದರ್ಭದಲ್ಲೂ ತವರು ಕ್ಷೇತ್ರದ ಜನ ಜಿಗಜಿಣಗಿ ಕೈ ಬಿಟ್ಟಿಲ್ಲ.
ರಮೇಶ ಜಿಗಜಿಣಗಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದವರಾಗಿದ್ದು ತಾಲೂಕಿನ ಹೆಮ್ಮೆಯ ವಿಚಾರ. ಜಿಗಜಿಣಗಿ ಶಾಸಕರಾಗಿ, ರಾಜ್ಯ ಸಚಿವರಾಗಿ, ಕೇಂದ್ರ ಸಚಿವರಾಗಿ ಕಾರ್ಯ ಮಾಡಿದ್ದು ನಮ್ಮ ತಾಲ್ಲೂಕಿನ ಜನರಿಗೆ ಹೆಮ್ಮೆಯ ವಿಚಾರವಾಗಿದೆ.
ಕಳೆದ ಎರಡು ಬಾರಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ ಇಂಡಿ ತಾಲೂಕು ಹೆಚ್ಚು ಮತಗಳ್ನು ನೀಡಿ ಕೈ ಹಿಡಿದಿದೆ. ಇಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ 89,394 ಮತ, ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ 43,310 ಮತ, ಬಿಎಸ್‌ಪಿ 3,892 ಮತ ಪಡೆದಿದ್ದಾರೆ. ಹೀಗಾಗಿ ಇಂಡಿ ಕ್ಷೇತ್ರದಿಂದ ಜಿಗಜಿಣಗಿ ಪ್ರತಿಸ್ಪರ್ಧಿಗಿಂತ 46,084 ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇಂಡಿ ತಾಲೂಕು ಮತ್ತೂಮ್ಮೆ ಬಿಜೆಪಿ ಕೈ ಹಿಡಿದಿದೆ. ರಮೇಶ ಜಿಗಜಿಣಗಿ ಇಂಡಿ ತಾಲೂಕಿನವರು ಎಂಬ ಅಭಿಮಾನ ಒಂದೆಡೆಯಾದರೆ ಜಿಗಜಿಣಗಿಗಿಂತಲೂ ಮೋದಿ ಅಲೆ ತಾಲೂಕಿನಲ್ಲಿ ಹೆಚ್ಚಿನ ಕೆಲಸ ಮಾಡಿದೆ. ಅಲ್ಲದೆ ಕಾಂಗ್ರೆಸ್ ಪಕ್ಷ ಛಲವಾದಿ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಮೂಲ ದಲಿತರು ಸಹ ಬಿಜೆಪಿಗೆ ಮತದಾನ ಮಾಡಿದ್ದು ಅತಿ ಹೆಚ್ಚು ಮತ ಪಡೆಯಲು ಸಾಧ್ಯವಾಗಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾವು ಬಾಲ್ಯದಿಂದಲೂ ಗೆಳೆಯರು. ಜಿಗಜಿಣಗಿ ಮೃದು ವ್ಯಕ್ತಿತ್ವದ ವ್ಯಕ್ತಿ, ಯಾರ ಮನಸ್ಸನ್ನೂ ನೋಯಿಸದೆ ಸರ್ವ ಜನಾಂಗಕ್ಕೂ ಸಮಾನವಾಗಿ ಕಾಣುವ ವ್ಯಕ್ತಿ.ಅವನ ಗೆಲುವಿಗೆ ಅವನ ಸರಳತನ ಮತ್ತು ಮೋದಿ ಅಲೆಯೇ ಕಾರಣ.
•ಭೀಮರಾಯ ಮದರಖಂಡಿ,
ಜಿಗಜಿಣಗಿ ಬಾಲ್ಯದ ಗೆಳೆಯ, ಮಾವಿನಹಳ್ಳಿ.
ಜಿಗಜಿಣಗಿ ಬಡತನದಲ್ಲಿ ಬೆಳೆದ ವ್ಯಕ್ತಿ. ಬಡವರು ಯಾರಾದರೂ ಹೋದರೆ ಕೈಲಾದಷ್ಟು ಸಹಾಯ ಮಾಡುವ ರೂಢಿ ಮಾಡಿಕೊಂಡಿದ್ದಾನೆ. ನಮ್ಮ ಬಾಲ್ಯದ ಗೆಳೆಯ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ, ಕೇಂದ್ರ ಸಚಿವನಾಗಿ ಕಾರ್ಯ ಮಾಡಿದ್ದು ಹೆಮ್ಮೆಯ ವಿಚಾರ.
•ಬಸವರಾಜ ಇಂಗಳೇಶ್ವರ,
ಜಿಗಜಿಣಗಿ ಬಾಲ್ಯದ ಗೆಳೆಯ, ಅಥರ್ಗಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.