ಎಲ್ಲರಲ್ಲೂ ಬೆಳೆಯಲಿ ಸಾಹಿತ್ಯ ಚಿಂತನೆ

ಹಲಸಂಗಿ ಗೆಳೆಯರ ಸಾಹಿತ್ಯ ಅನ್ಯ ಭಾಷೆಗೆ ತರ್ಜುಮೆಯಾಗಲಿ: ಡಾ| ಮರಿಗುದ್ದಿ

Team Udayavani, Aug 1, 2019, 10:38 AM IST

1-Agust-8

ವಿಜಯಪುರ: ಮಧುರಚನ್ನರ ನಾಯಕತ್ವದಲ್ಲಿ ಹಲಸಂಗಿ ಗೆಳೆಯರು ರಚಿಸಿದ ಅಪರೂಪದ ಸಾಹಿತ್ಯ ಸಂಕಲನಗಳನ್ನು ವಿವಿಧ ಭಾಷೆಗಳಿಗೆ ತರ್ಜುಮೆ ಮಾಡಬೇಕು. ರಾಜ್ಯಾದ್ಯಂತ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಕಮ್ಮಟ, ಸಾಹಿತ್ಯ ಚಿಂತನ ಕಾರ್ಯಕ್ರಮ ಹಮ್ಮಿಕೊಂಡು ಸಾಹಿತ್ಯಾಭಿರುಚಿ ಬೆಳೆಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ| ಗುರುಪಾದ ಮರಿಗುದ್ದಿ ಅಭಿಪ್ರಾಯಪಟ್ಟರು.

ಬುಧವಾರ ಜಿಲ್ಲಾಡಳಿತ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಬಿಎಲ್ಡಿಇ ಸಂಸ್ಥೆಯ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಧುರಚನ್ನರ 116ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಹಲಸಂಗಿ ಗೆಳೆಯರು ಕುಗ್ರಾಮದಲ್ಲಿದ್ದರೂ ತಮ್ಮ ಸಾಹಿತ್ಯ ಚಿಂತನೆಗಳ ಶ್ರೀಮಂತಿಕೆಯಿಂದ ನಾಡಿನ ಜನರ ಪ್ರೀತಿ ಸಂಪಾದಿಸಿದ್ದರು. ಮಧುರ ಚನ್ನರ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯ ಚಿಂತನೆಗಳು ಜೀವನದಲ್ಲಿ ಬದುಕಿರುವ ಉದ್ದೇಶವನ್ನು ತಿಳಿಸುತ್ತದೆ. ಇಂದಿನ ಯುವ ಪೀಳಿಗೆ ಇಂತಹ ಮಹಾನ್‌ ವ್ಯಕಿಗಳ ಸಾಹಿತ್ಯವನ್ನು ಅಭ್ಯಸಿಸಬೇಕು, ಸಾಹಿತ್ಯ ಕೃಷಿಯಲ್ಲಿ ತೊಡಗಬೇಕು ಎಂದು ಹೇಳಿದರು.

ಹಲಸಂಗಿ ಗೆಳೆಯರ ಬಳಗವನ್ನು ಸಮರ್ಥವಾಗಿ ಕಟ್ಟುವಲ್ಲಿ ಮಧುರಚನ್ನರ ಪಾತ್ರ ಅಪಾರ. ಕುಗ್ರಾಮಗಳ ಬದುಕನ್ನು ಒಂದು ದೇಶ ಸಮಗ್ರತೆ ಎಂಬಂತೆ ರೂಪಿಸುವಲ್ಲಿ ಅವರ ಚಟುವಟಿಕೆಗಳು ಸಹಕಾರಿಯಾಗಿವೆ. ಮಧುರಚನ್ನರು ಜೀವನದುದ್ದಕ್ಕೂ ಅಂತರ್ಜಗತ್ತನ್ನು ಅನುಭವಿಸಿಷ್ಟೇ ಅಲ್ಲದೇ ಇವರ ಭೌತಿಕ ಜೀವನದ ಹೊರತಾಗಿ ಆತ್ಮಭಾವದ ತೀವ್ರತೆ, ಸಾಹಿತ್ಯ ಲೋಕದ ಚಿಂತನೆ ಅವರಲ್ಲಿ ಹುದುಗಿತ್ತು. ಹಲವಾರು ಭಾಷೆಗಳನ್ನು ಕಲಿತು ಆಯಾ ಭಾಷೆಗಳ ಸಾಹಿತ್ಯ ಅಭ್ಯಸಿಸಿ ಅದರ ಭಾವನೆಗಳನ್ನು ತಮ್ಮ ಜೀವನದಲ್ಲಿ ಸವಿದು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.

ಹಲಸಂಗಿ ಗೆಳೆಯರು ತಮ್ಮ ಜೀವನದಲ್ಲಿ ಅಪಾರ ಸ್ನೇಹ ಸಂಪತ್ತನ್ನು ಹೊಂದಿದ್ದ ಇವರು, ಸಾಹಿತ್ಯದ ದೃಷ್ಟಿಕೋನದಲ್ಲಿ ನಿಸ್ವಾರ್ಥ ಇರಬೇಕು. ಸಾಹಿತ್ಯ ಚಿಂತನೆ ಎಲ್ಲರಲ್ಲೂ ಬೆಳೆಯಬೇಕು ಎಂಬ ಆಶಯ ಹೊಂದಿದ್ದ ಗೆಳೆಯರ ಬಳಗ, ಯಾರು ಬೇಕಾದರೂ ಸನ್ಮಾರ್ಗಕ್ಕೆ ಪ್ರಯತ್ನಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಅನುಭವಿಗಳ ಸಾಲಿನಲ್ಲಿ ಮಧುರಚನ್ನರು ಮೊದಲು ಸಾಲಿನಲ್ಲಿದ್ದಾರೆ. ಸಾಹಿತ್ಯ ಚಿಂತನೆಯಲ್ಲಿ ಹೊಸತನ ಮೂಡಿಸುವ ದೃಷ್ಟಿಕೋನ ಇವರದ್ದಾಗಿದೆ. ದೇವರು ಇದ್ದಾನೇಯೇ ಎಂಬ ಪ್ರಶ್ನೆಗೆ ಅವರ ಉತ್ತರ ಕಲ್ಪನೆ ಆದಿಯಲ್ಲಿ ಅಂತಃ ಕರಣ ದಿಂದಲೇ ನೋಡಬೇಕು. ಇದರೊಂದಿಗೆ ಸನ್ಮಾರ್ಗ ತಲುಪಬೇಕು ಎಂಬ ಕಲ್ಪನೆ ಇವರದ್ದಾಗಿತ್ತು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್‌. ಮದಭಾವಿ, ಹಲಸಂಗಿ ಗೆಳೆಯರ ಬಳಗವು ರಾಜ್ಯದಲ್ಲಿ ಹೆಚ್ಚು ಹೆಸರುವಾಸಿಯಾಗುವಂತಹ ಬಳಗವಾಗಿದೆ. ಸಿಂಪಿ ಲಿಂಗಣ್ಣ, ಮಧುರಚನ್ನ ಮುಂತಾದವರು ಸಾಹಿತ್ಯ ಸಂಸ್ಕೃತಿ ಕಲೆಯ ಪ್ರೇಮವನ್ನು ಕರಗತ ಮಾಡಿಕೊಂಡಿದ್ದರು. ಹಲಸಂಗಿ ಗೆಳೆಯರ ಜೀವಿತಾವಧಿ ಅಲ್ಪವಿದ್ದರೂ ಎಂದಿಗೂ ಮರೆಯದಂತಹ ಸನ್ಮಾರ್ಗ ತೋರಿಸುವಂತಹ ಸಾಹಿತ್ಯ ಉಳುಮೆ ಮಾಡಿದ್ದಾರೆ ಹಾಗೂ ಗದ್ಯಭಾಗಕ್ಕೆ ಹೊಸರೂಪ ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶಾಲಾ-ಕಾಲೇಜುಗಳಲ್ಲಿ ವಿದ್ವಾಂಸರನ್ನು ಕರೆಸಿ, ಚಿಂತನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಕಾವ್ಯ, ಸಾಹಿತ್ಯ, ಜಾನಪದ ಕಲೆ, ಸಂಸ್ಕೃತಿ ಉಳುವಿಗಾಗಿ ಶ್ರಮಿಸುತ್ತಿರುವವರಿಗೆ 50 ಸಾವಿರ ರೂ.ಗಳನ್ನು ಹಲಸಂಗಿ ಗೆಳೆಯರ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ ವಿತರಿಸಲಾಗುತ್ತದೆ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಮಾತನಾಡಿದರು. ಸಹಕಾರಿ ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಬಿ.ಆರ್‌. ಬನಸೋಡೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ವಿದ್ಯಾವತಿ ಅಂಕಲಗಿ, ಬಿ.ಸಿ. ಹತ್ತಿ, ದ್ರಾಕ್ಷಾಯಿಣಿ ಹುಡೇದ ಇದ್ದರು.

ಹಲಸಂಗಿ ಪ್ರತಿಷ್ಠಾನದ ಸಂಚಾಲಕ ದೊಡ್ಡಣ್ಣ ಭಜಂತ್ರಿ ಸ್ವಾಗತಿಸಿದರು. ಸಿಂಪಿ ನಿರೂಪಿಸಿದರು. ಸೋಮಶೇಖರ ವಾಲಿ ವಂದಿಸಿದರು.

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.