ಜನರ ನಿರೀಕ್ಷೆಯಂತೆ ಕೆಲಸ ಮಾಡಿ ತೋರಿಸುವೆ: ಯತ್ನಾಳ
ಸಮಸ್ಯೆ ಆಲಿಸಲು ನಗರ ಸಂಚರಿಸಿದ ಶಾಸಕ
Team Udayavani, Jun 26, 2019, 11:00 AM IST
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರ ಸಂಚಾರ ನಡೆಸಿ ಸಾರ್ವಜನಿಕರಿಂದ ದೂರು ಆಲಿಸಿದರು.
ವಿಜಯಪುರ: ನಗರದ ಜನತೆ ಸಮಸ್ಯೆಗಳ ಪರಿಹಾರಕ್ಕಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರ ಸಂಚಾರ ನಡೆಸಿ ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದರು.
ನಗರದ ಅತ್ಯಂತ ಜನನಿಭಿಡ ಪ್ರದೇಶ ಎನಿಸಿಕೊಂಡಿರುವ ಹುತಾತ್ಮರ ವೃತ್ತ (ಮೀನಾಕ್ಷಿ ಚೌಕ್) ಪ್ರದೇಶದ ಮಿನಿ ಗಾರ್ಡನ್ ಕಾಮಗಾರಿ, ಒಳಚರಂಡಿ ಕಾಮಗಾರಿ ಬಗ್ಗೆ ಪರಿಶೀಲಿಸಿದರು. ನಗರದ ಯಾವುದೇ ಕಾಮಗಾರಿಗಳಿದ್ದರೂ ಸೂಕ್ತ ಪರಿಶೀಲನೆ ನಡೆಸಬೇಕು. ಹುತಾತ್ಮರ ವೃತ್ತದಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹ ಆಗದಂತೆ ನೋಡಿಕೊಳ್ಳಬೇಕು. ಮಿನಿ ಗಾರ್ಡನ್ ಸ್ಥಳದಲ್ಲಿ ಸುಸಜ್ಜಿತವಾದ ಬೆಳಕಿನ ವ್ಯವಸ್ಥೆಗಾಗಿ ಹೈ ಮಾಸ್ಟ್ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಸದರಿ ಪ್ರದೇಶದಲ್ಲಿ ಅನ್ಯ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಓದಲು ಅನಕೂಲ ಆಗುವಂತೆ ಬೆಂಚ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಡಾ| ಔದ್ರಾಮ್ ಆವರಿಗೆ ಸೂಚಿಸಿದರು.
ಜನ ನನ್ನ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡು ಮತ ಹಾಕುವ ಮೂಲಕ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಜನತೆ ಋಣ ತೀರಿಸಲು ನಾನು ಶಾಸಕನಾದ ಬಳಿಕ ಈಗಾಗಲೇ ನಗರದಲ್ಲಿ ವಿವಿಧ ಬಡಾವಣೆಗಳಿಗೆ ಹಲವು ಬಾರಿ ಭೇಟಿ ಮಾಡಿ ಸಾರ್ವಜನಿಕರ ದೂರು ಆಲಿಸಿ, ಜೊತೆಗೆ ತಕ್ಷಣವೇ ಜನರ ಭಾವನೆಗಳಿಗೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ವಿಜಯಪುರ ನಗರವನ್ನು ಬರುವ ದಿನಗಳಲ್ಲಿ ಸ್ಲಂ ಮುಕ್ತ ಮಾಡುವ ಕನಸು ಹೊಂದಿದ್ದೇನೆ. ಇದಕ್ಕಾಗಿ ನಗರದಲ್ಲಿ ಬಡವರು, ದಲಿತರ ಶ್ರೇಯಕ್ಕಾಗಿ ವಿಜಯಪುರ ನಗರದಲ್ಲಿ ದೀನ ದಲಿತರ, ಬಡವರಿಗೆ ನಿರಾಶ್ರಿತರಿಗೆ ವಿವಿಧ ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮಧ್ಯವರ್ತಿಗಳ ಕಾಟ ಇಲ್ಲದಂತೆ ನಿಮಯ ಬದ್ಧವಾಗಿ ಮನೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇನೆ. ವಾಜಪೇಯಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರದಲ್ಲಿ 10 ಸಾವಿರ ಮನಗೆಳನ್ನು ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದು ವಿವರಿಸಿದರು.
ನಗರದ ವಿವಿಧ ಸ್ಥಳಗಳಲ್ಲಿ ಓಪನ್ ಜಿಮ್‌ಗಳನ್ನು ಸ್ಥಾಪಿಸಿ, ಆಯಾ ಬಡಾವಣೆಗಳ ನಿವಾಸಿಗಳಿಗೆ ಅನಕೂಲ ಮಾಡಿಕೊಟ್ಟಿದ್ದೇನೆ. ಇನ್ನೂ ಅನೇಕ ಯೋಜನೆಗಳು ಇದ್ದು, ಅವುಗಳನ್ನು ಬರುವ ದಿನಗಳಲ್ಲಿ ಸಂಪೂರ್ಣ ಮುಗಿಸಿ ವಿಜಯಪುರ ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ಮಾಡುವ ಸಂಕಲ್ಪ ಈಡೇರಿಸುವುದು ನನ್ನ ಆದ್ಯತೆಯ ಕೆಲಸ ಎಂದರು.
ಬಿಜೆಪಿ ನಗರ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಶ್ರೀಹರಿ ಗೊಳಸಂಗಿ, ಅಶೋಕ ಬೆಲ್ಲದ, ಶೀತಲ ಓಗಿ, ಕೃಷ್ಣಾ ಗುನ್ಹಾಳಕರ, ಉಮೇಶ ವೀರಕರ, ರೋಹನ ಆಪ್ಟೆ, ರೋಹಿತ ಕೊಪ್ಪದ, ವಿನೋದ ತೆಲಸಂಗ, ಅಜಯ ಸೂರ್ಯವಂಶಿ, ಅರುಣ ಸೌದಿ, ಛಾಯಾ ಮಾಶಿಯನ್ನವರ, ಸಿದ್ದು ಯರನಾಳ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.