ಗುಮ್ಮಟ ನಗರಿಯಲ್ಲಿ ಓಬವ್ವ ಪಡೆ ಗಸ್ತು
Team Udayavani, Dec 22, 2019, 12:54 PM IST
ಜಿ.ಎಸ್. ಕಮತರ
ವಿಜಯಪುರ: ನಗರದಲ್ಲಿ ಮಹಿಳೆಯರ ರಕ್ಷಣೆಗೆ ಟೊಂಕ ಕಟ್ಟಿದ್ದ ಮಹಿಳಾ ಪೊಲೀಸರ ಕಿತ್ತೂರು ಚನ್ನಮ್ಮ ಪಡೆ, ಇದೀಗ ಜೀಪ್ ಬದಲಾಗಿ ಓಬವ್ವ ಹೆಸರಿನಲ್ಲಿ ಬೈಕ್ ಏರಿ ನಗರದಲ್ಲಿ ಗಸ್ತು ತಿರುಗಲು ಮುಂದಾಗಿದೆ. ಬೀದಿ ಕಾಮಣ್ಣರಿಂದ ರಕ್ಷಣೆ ಕೊಡಿಸುವ ಜೊತೆಗೆ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ವ್ಯವಸ್ಥೆ ಮಹಿಳೆಯರಲ್ಲಿ ಸ್ವಯಂ ರಕ್ಷಣೆಗೆ ಮಹಿಳಾ ಪೇದೆಗಳ ಮೂಲಕ ಯುವತಿಯರಲ್ಲಿ ಜಾಗೃತಿಗೆ ಮುಂದಾಗಿದೆ.
ಐತಿಹಾಸಿಕ ವಿಜಯಪುರ ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಕಳೆದ ವರ್ಷ ಜಿಲ್ಲಾ ಪೊಲೀಸ್ ವ್ಯವಸ್ಥೆಯಲ್ಲಿ ಕಿತ್ತೂರು ಚನ್ನಮ್ಮ ಹೆಸರಿನಲ್ಲಿ ಮಹಿಳಾ ಪೊಲೀಸರ ಪ್ರತ್ಯೇಕ ಪಡೆಯನ್ನು ನಿಯೋಜಿಸಿತ್ತು. ಚನ್ನಮ್ಮ ಪಡೆಗೆ ಪ್ರತ್ಯೇಕ ಜೀಪ್ ವ್ಯವಸ್ಥೆ ಕೂಡ ಇದ್ದು, ನಗರದಲ್ಲಿ ಈ ಜೀಪ್ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಗಸ್ತು ತಿರುಗುತ್ತಿತ್ತು. ಆದರೆ ಕಳೆದ ಏಪ್ರಿಲ್ ತಿಂಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಚನ್ನಮ್ಮ ಪಡೆಯನ್ನು ರದ್ದು ಮಾಡಲಾಗಿತ್ತು. ಇದೀಗ ದೇಶದಲ್ಲಿ ಮತ್ತೆ ಮಹಿಳೆಯರ ಮೇಲೆ ದೌರ್ಜನ್ಯಗಳು, ಅದರಲ್ಲೂ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆ, ಹಲ್ಲೆಗಳಂಥ ಕೃತ್ಯಗಳು ಹೆಚ್ಚುತ್ತಲೇ ಜಿಲ್ಲೆಯ ಪೊಲೀಸರು ಕೂಡ ಮತ್ತೆ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದಾರೆ.
ಇದಕ್ಕಾಗಿ ಇದೀಗ ಕಿತ್ತೂರು ಚನ್ನಮ್ಮ ಪಡೆ ಬದಲಾಗಿ 15 ಮಹಿಳಾ ಪೇದೆಗಳ ಓಬವ್ವ ಪಡೆಯನ್ನು ರಚಿಸಲು ಮುಂದಾಗಿದೆ. ದೈಹಿಕವಾಗಿ ಸದೃಢರಾಗಿರುವ 3-4 ವರ್ಷಗಳಿಂದ ಗುಮ್ಮಟ ನಗರಿಯಲ್ಲಿ ಓಬವ್ವ ಪಡೆ ಗಸ್ತು ಕರ್ತವ್ಯದಲ್ಲಿರುವ ಹಾಗೂ ನೂತನವಾಗಿ ಸೇವೆಗೆ ಸೇರಿದ ಮಹಿಳಾ ಪೇದೆಗಳನ್ನು ಓಬವ್ವ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮಹಿಳಾ ಪೇದೆಗಳಿಗೆ ಚನ್ನಮ್ಮ ಪಡೆಗೆ ನೀಡಿದ್ದ ಜೀಪ್ ಬದಲಾಗಿ ಅಪಾಚಿ ಬೈಕ್ ನೀಡಲಿದೆ. ಈ ತಂಡದ ತಲಾ ಇಬ್ಬರು ಓಬವ್ವ ಪೇದೆಗಳು ಮಹಿಳೆಯರ ರಕ್ಷಣೆ ಕುರಿತು ನಗರದಲ್ಲಿ ಗಸ್ತು ತಿರುಗಲಿದ್ದಾರೆ.
ಇದಲ್ಲದೇ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗೆ ಮಾರ್ಗದರ್ಶನ ನೀಡಲಿದೆ. ಇದಕ್ಕಾಗಿ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯ ಓಬವ್ವ ಪಡೆಯ 15 ಮಹಿಳಾ ಪೇದೆಗಳನ್ನು ಗುರುತಿಸಿ, ಓಬವ್ವ ಪಡೆಯನ್ನು ರಚಿಸಿದೆ. ಸದರಿ ಮಹಿಳಾ ಪೇದೆಗಳಿಗೆ ಅಪಾಚಿ ಗೇರ್ ಬೈಕ್ ಓಡಿಸುವ ಹಾಗೂ ಚಾಲನಾ ಪರವಾನಿಗೆ ಕೊಡಿಸುವ ತರಬೇತಿ ನೀಡಲಾಗುತ್ತಿದೆ. ಈ ತಂಡ ನಗರದಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜುಗಳ ಬಳಿ ನಿರಂತರ ಗಸ್ತು ತಿರುಗಲಿದೆ. ಇದರಿಂದ ವಿದ್ಯಾರ್ಥಿನಿಯರು, ಮಹಿಳೆಯರನ್ನು ಚುಡಾಯಿಸುವ ಪೋಲಿಗಳಿಗೆ ಕಡಿವಾಣ ಬೀಳಲಿದೆ.
ಪೊಲೀಸ್ ರಕ್ಷಣೆ ಹೊರತಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಓಬವ್ವ ಪಡೆಯ ತಂಡದ ಮಹಿಳಾ ಪೇದೆಗಳಿಗೆ ಈಗಾಗಲೇ ಮಾರ್ಷಲ್ ಆರ್ಟ್ಸ್ ತರಬೇತಿ ಕೊಡಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ನಗರದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಅನುಭವಿ ಮಾರ್ಷಲ್ ಆರ್ಟ್ಸ್ತ ರಬೇತುದಾರರಿಂದ ತರಬೇತಿ ಕೊಡಿಸಲಾಗುತ್ತಿದೆ. ಇದಲ್ಲದೇ ಓಬವ್ವ ಪಡೆಯನ್ನು ಸಾರ್ವಜನಿಕರು ಸುಲಭವಾಗಿ ಗುರಿತಿಸಲು ಪ್ರತ್ಯೇಕವಾಗಿ ಸಮವಸ್ತ್ರ ರೂಪಿಸಲು ಸಿದ್ಧತೆ ನಡೆಸಿದ್ದು, ಈ ಕುರಿತು ಇನ್ನೂ ಯಾವುದೂ ಅಂತಿಮವಾಗಿಲ್ಲ.
ಪ್ರತಿದಿನ ಬೆಳಗ್ಗೆ 8ರಿಂದ 9, 10ರಿಂದ 11:30 ಹಾಗೂ ಸಂಜೆ 4ರಿಂದ 6ರವರೆಗೆ ಓಬವ್ವ ಪೇದೆಗಳಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದು ಓಬವ್ವ ಪಡೆ ಕಾರ್ಯಾಚರಣೆಗೆ ಮುಂದಾದ ನಂತರ ನಗರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯ, ಪ್ರೌಢ ಶಾಲೆಗಳು, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ತಮ್ಮ ಮೇಲೆ ಏಕಾಏಕಿ ಎದುರಾಗುವ ದೌರ್ಜನ್ಯದ ಸಂದರ್ಭದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಹೊಸ ವರ್ಷದ ಮೊದಲ ವಾರ ಇಲ್ಲವೇ ಜನೇವರಿ 26ರಂದು ಓಬವ್ವ ಪಡೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ.
ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಓಬವ್ವ ಪಡೆಯನ್ನು ರಚಿಸಲಾಗುತ್ತಿದ್ದು, ಜನೇವರಿ ಮೊದಲ ವಾರದಲ್ಲಿ ಈ ಪಡೆ ನಗರದಲ್ಲಿ ಕಾರ್ಯಾಚರಣೆ ನಡೆಸಲಿದೆ. ಓಬವ್ವ ಪಡೆಗೆ ಆಯ್ಕೆ ಮಾಡಲಾಗಿರುವ ಮಹಿಳಾ ಪೇದೆಗಳಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲಾಗುತ್ತಿದೆ. ಈ ತಂಡದ ತಲಾ ಇಬ್ಬರು ಓಬವ್ವ ಪೇದೆಗಳಿಗೆ ನಗರದ ಸಾರ್ವಜನಿಕರ ಸ್ಥಳಗಳಲ್ಲಿ ನಿರಂತರ ಗಸ್ತು ತಿರುಗಲು ಅಪಾಚಿ ಬೈಕ್ ನೀಡಲಾಗುತ್ತಿದೆ.
ಪ್ರಕಾಶ ನಿಕ್ಕಂ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.