ಪ್ರಿಯಾಂಕಾ ವಾದ್ರಾ ಬಂಧನ ವಿರೋಧಿಸಿ ಕೈ ಪ್ರತಿಭಟನೆ
Team Udayavani, Jul 21, 2019, 1:21 PM IST
ವಿಜಯಪುರ: ಉತ್ತರ ಪ್ರದೇಶದ ಸೋನಭದ್ರ ಘೋರವಾಲ್ದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಬಂಧನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಜಯಪುರ: ಉತ್ತರ ಪ್ರದೇಶದ ಸೋನಭದ್ರ ಘೋರವಾಲ್ ಗ್ರಾಮದಲ್ಲಿ ಕೊಲೆಗೀಡಾಗಿರುವ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ತೆರಳಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.
ಶನಿವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ವಿಠuಲ ಕಟಕದೊಂಡ ಮಾತನಾಡಿ, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ್ ಗ್ರಾಮದಲ್ಲಿ ಜಮೀನಿನ ವಿವಾದದ ಜಗಳದಲ್ಲಿ 10 ಜನ ಧಾರುಣವಾಗಿ ಕೊಲೆಯಾಗಿದ್ದು ಹಾಗೂ 28 ಜನ ತೀವ್ರ ಗಾಯಗೊಂಡಿರು ವಿಷಯ ತಿಳದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ವಾದ್ರಾ ಅವರು ಸಾಂತ್ವನ ಹೇಳಲು ತೆರಳುತ್ತಿದ್ದರು. ಇದನ್ನು ಅರಿತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಿಯಾಂಕಾ ಅವರನ್ನು ಬಂಧಿಸುವಂತೆ ನಿರ್ದೇಶನ ನೀಡಿರುವುದು ಖಂಡನೀಯ ಎಂದರು.
ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಆಡಳಿತ ನಡೆಸುವ ಪಕ್ಷದಷ್ಟೆ ಹೊಣೆ ಹಾಗೂ ಜವಾಬ್ದಾರಿ ವಿಪಕ್ಷಗಳಿಗೂ ಇರುತ್ತದೆ. ಇದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಸಂಕಷ್ಟದಲ್ಲಿರುವ ಜನರ ಬಳಿಗೆ ಸಾಂತ್ವನ ಹೇಳಲು ತೆರಳುತ್ತಿದ್ದರು. ದೇಶದಲ್ಲಿ ಜನಪರ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೂ ಬಿಜೆಪಿ ಸರ್ಕಾರ ಪ್ರತಿಪಕ್ಷವನ್ನು ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವದ ಈ ರಾಷ್ಟ್ರದಲ್ಲಿ ಹಿಟ್ಲರ್‌ನ ರೀತಿ ಈ ಆಡಳಿತ ಬಹಳ ದಿವಸ ನಡೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಹಾದೇವಿ ಗೋಕಾಕ, ಇಲಿಯಾಸ್ ಬೋರಾಮಣಿ, ಚಾಂದಸಾಬ ಗಡಗಲಾವ, ಜಮೀರ್‌ಅಹ್ಮದ್ ಭಕ್ಷಿ, ಸಾಹೇಬಗೌಡ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಸಾಹೇಬಗೌಡ ಬಿರಾದಾರ, ಅಬ್ದುಲ್ ಖಾದರ್ ಖಾದಿಮ, ಆರ್.ಕೆ. ಜವನರ, ದತ್ತಾತ್ರೇಯ ಆಲಮೇಲಕರ, ಮಹ್ಮದ್ ಹನೀಫ್ ಮಕಾನದಾರ, ಡಾ| ಗಂಗಾಧರ ಸಂಬಣ್ಣಿ, ವಸಂತ ಹೊನಮೊಡೆ, ಇರ್ಫಾನ್ ಶೇಖ್, ವಿಜಯಕುಮಾರ ಘಾಟಗೆ, ಪೀರಪ್ಪ ನಡುವಿನಮನಿ, ಬಿ.ಎಸ್. ಬ್ಯಾಳಿ, ಹಾಜಿಲಾಲ್ ದಳವಾಯಿ, ಮಲ್ಲು ತೊರವಿ, ಶರಣಪ್ಪ ಯಕ್ಕುಂಡಿ, ಲಕ್ಷ್ಮೀ ದೇಸಾಯಿ, ಜಯಶ್ರೀ ಭಾರತಿ, ಮಂಜುಳಾ ಗಾಯಕವಾಡ, ಸಂಗಮ್ಮ ಹೂಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia: ಅಸೌಖ್ಯದಿಂದ ಮಹಿಳೆ ಸಾವು
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.