ಸ್ಮಾರಕಗಳ ಸಂಶೋಧನೆ ಅಗತ್ಯ
ಜನರಿಗೆ ಮಹತ್ವ ತಿಳಿಸಿ •ಪುರಾತತ್ವ ಇಲಾಖೆಯಿಂದ ಅಧ್ಯಯನಕ್ಕೆ ಸೌಲಭ್ಯ
Team Udayavani, May 10, 2019, 3:42 PM IST
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇತಿಹಾಸ ಕೂಟದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ| ಎ.ವಿ. ನಾಗನೂರ ಮಾತನಾಡಿದರು.
ವಿಜಯಪುರ: ನಮ್ಮಲ್ಲಿ ಸ್ಮಾರಕಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಕಡಿಮೆ ಇದೆ. ಅವರಿಗೆ ಸ್ಮಾರಕಗಳ ಸಾಂಸ್ಕೃತಿಕ ಸಂಪತ್ತಿನ ಮಹತ್ವ ಅರ್ಥೈಸಿ, ಅವುಗಳನ್ನು ಉಳಿಸಿ-ಬೆಳೆಸುವಂತೆ ಪ್ರೇರೇಪಿಸುವ ಜವಾಬ್ದಾರಿ ನಮ್ಮದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿಜಯಪುರ ಸಹಾಯಕ ಅಧೀಕ್ಷಕ ಪುರತತ್ವವಿದರಾದ ಡಾ| ಎ.ವಿ. ನಾಗನೂರ ಹೇಳಿದರು.
ಗುರುವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತಿಹಾಸ ಅಧ್ಯಯನ ವಿಭಾಗದಲ್ಲಿ ಇತಿಹಾಸ ಕೂಟದ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಸವಾಲುಗಳು ಹಾಗೂ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದ ಅವರು, ಸಾಂಸ್ಕೃತಿಕ ಸಂಪತ್ತುಗಳಾದ ಸ್ಮಾರಕಗಳ ಕುರಿತು ಸಂಶೋಧನೆಗಳ ಅಗತ್ಯತೆ ಇದೆ ಎಂದರು.
ಸ್ಮಾರಕ ಅಧ್ಯಯನಕ್ಕೆ ಮುಂದಾಗಿ: ನಮ್ಮಲ್ಲಿ ಸ್ಮಾರಕ ವಿಭಾಗಗಳು, 50 ವಸ್ತು ಸಂಗ್ರಹಾಲಯಗಳಿವೆ. ಎಪಿಗ್ರಫಿ ಬ್ರ್ಯಾಂಚ್‌ಗಳಿವೆ. ಈ ಬ್ರ್ಯಾಂಚ್‌ಗಳು ಅರೇಬಿಕ್, ಪರ್ಷಿಯನ್, ಶಾಘನ್ ಭಾಷೆಯ ವಿಭಾಗಗಳನ್ನು ಹೊಂದಿದೆ. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ಇವೆ. ಈ ರೀತಿಯಾಗಿ ಸಂಶೋಧನೆಗೆ ಬೇಕಾದ ಮಾಹಿತಿ ಒದಗಿಸಲು ಸಾಕಷ್ಟು ಸೌಕರ್ಯಗಳಿವೆ. ಜನರು ಇವುಗಳ ಉದ್ದೇಶ ಅರಿತುಕೊಂಡು ಸ್ಮಾರಕಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ನಿಖಾಯದ ಡೀನ್ ಮತ್ತು ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ| ಓಂಕಾರ ಕಾಕಡೆ ಮಾತನಾಡಿ, ಇದು ಇತಿಹಾಸ ವಿಭಾಗದಲ್ಲಿಯೇ ಮೊಟ್ಟಮೊದಲು ಆರಂಭವಾಗಿರುವ ಇತಿಹಾಸ ಕೂಟದ ವತಿಯಿಂದ ಆಯೋಜಿಸಿರುವ ಮೊದಲ ಉಪನ್ಯಾಸ ಕಾರ್ಯಕ್ರಮ ಎಂಬುದು ಸಂತಸದ ಸಂಗತಿ. ಈ ಕಾರ್ಯಕ್ರಮಗಳ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಸ್ತುಸಂಗ್ರಹಾಲಯದ ಮುಖ್ಯಾಧಿಕಾರಿ ರಿಯಾಜ ಕರಜಗಿ, ಇತಿಹಾಸ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕಿ ಸುಮಂಗಲಾ ಕೋಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವೀಣಾ ಕುಂಟೋಜಿ ಪ್ರಾರ್ಥಿಸಿದರು. ನಿರ್ಮಲಾ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಆನಂದ ಕುಲಕರ್ಣಿ ನಿರೂಪಿಸಿದರು. ಕಾವೇರಿ ಶಹಾಪುರ ವಂದಿಸಿದರು.
ಸ್ಮಾರಕವನ್ನು ಪುನರ್ ನಿರ್ಮಾಣ ಮಾಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅವು ನಾಶವಾಗದಂತೆ ಕಾಯ್ದುಕೊಳ್ಳುವ ಕರ್ತವ್ಯ ನಮ್ಮೆಲ್ಲರದು. ಮುಖ್ಯವಾಗಿ ನಮ್ಮ ಸ್ಮಾರಕಗಳ, ಕೋಟೆ-ಕೊತ್ತಲಗಳ ಮೇಲೆ ಎಣ್ಣೆ ಅಥವಾ ಜಿಡ್ಡುಗಟ್ಟುವ ಪದಾರ್ಥ ಬಳಸಿ ಅವುಗಳನ್ನು ಹಾಳು ಮಾಡಬಾರದು.
•ಡಾ| ಎ.ವಿ. ನಾಗನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.