ನೈಜ ಸ್ವಾತಂತ್ರ್ಯಕ್ಕಾಗಿ ಕಮ್ಯುನಿಸ್ಟ್ ಪಕ್ಷ ಅನಿವಾರ್ಯ
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ 71ನೇ ಸಂಸ್ಥಾಪನಾ ದಿನಾಚರಣೆ
Team Udayavani, Apr 26, 2019, 5:37 PM IST
ವಿಜಯಪುರ: ನಗರದಲ್ಲಿ ಹಮ್ಮಿಕೊಂಡಿದ್ದ ಎಸ್‌ಯುಸಿಐ ಕಮ್ಯೂನಿಷ್ಟ ಪಕ್ಷದ 71ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಗವಾನರೆಡ್ಡಿ ಮಾತನಾಡಿದರು.
ವಿಜಯಪುರ: ಬ್ರಿಟಿಷ್ ಸಾಮ್ರಾಜ್ಯ ಷಾಹಿಗಳಿಂದ ನಮ್ಮ ದೇಶದ ಬಂಡವಾಳಿಗರ ಕೈಗೆ ಅಧಿಕಾರ ಹಸ್ತಾಂತರವಾಗಿದೆ. ಭಾರತ ಸ್ವಾತಂತ್ರ್ಯ ಅರೆಬೆಂದ ಸ್ವಾತಂತ್ರ್ಯವಾಗಿದೆ. ಸಿಪಿಐ ಕಮ್ಯುನಿಸ್ಟ್ ಪಕ್ಷ ನೈಜ ಕಮ್ಯುನಿಸ್ಟ್ ಪಕ್ಷವಾಗಿಲ್ಲ. ಆದ್ದರಿಂದ ನೈಜ ಕಮ್ಯುನಿಸ್ಟ್ ಪಕ್ಷ ಕಟ್ಟುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ ಎಂದು ಎಸ್‌ಯುಸಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಗವಾನರೆಡ್ಡಿ ಅಭಿಪ್ರಾಯಪಟ್ಟರು.
ಗುರುವಾರ ನಗರದಲ್ಲಿ ಎಸ್‌ಯೂಸಿಐ ಕಮ್ಯೂನಿಷ್ಟ ಪಕ್ಷದ 71ನೇ ಸಂಸ್ಥಾಪನ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1948 ಏಪ್ರಿಲ್ 24ರಂದು ಎಸ್‌ಯುಸಿಐ ಸ್ಥಾಪಿಸಿ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಮಾಕ್ಸರ್ವಾದ ಅತ್ಯಂತ ವೈಜ್ಞಾನಿಕ, ವಸ್ತುನಿಷ್ಟ ವಿಚಾರ ಇರಿಸಿಕೊಂಡ ನಿಸರ್ಗದ ವಸ್ತುನಿಷ್ಟ ತತ್ವಾಧಾರದಲ್ಲಿರುವ ಮಾಕ್ಸರ್ವಾದ ಇಂದು ಹೆಚ್ಚು ಪ್ರಸ್ತುತವಾಗಿದೆ. ಇದನ್ನೇ ದ್ವಂದ್ವಾತ್ಮಕ ವಸ್ತುವಾದ ಎಂದು ಕಾರ್ಲ ಮಾಕ್ಸರ್ ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಹೀಗಾಗಿ ಸಮಾಜದ ಮುನ್ನಡೆಗೆ ಪ್ರಗತಿಗೆ ಬೇಕಾದಂತಹ ಮೌಲ್ಯ ಪ್ರತಿಪಾದಿಸುವ ಮಾಕ್ಸರ್ವಾದ ಇಂದು ಪ್ರಸ್ತುತ ಎಂದರು.
ಮನುಷ್ಯನಿಂದ ಮನುಷ್ಯನ ಮೇಲಾಗುವ ಶೋಷಣೆ ಇಲ್ಲದ ಸಮಾಜ ನಿರ್ಮಾಣ ಮಾಕ್ಸರ್ವಾದ ಗುರಿ ಹಾಗೂ ಸಮಾಜವಾದದ ಆಶಯ. ಕಾರ್ಮಿಕ ವರ್ಗದ ನೇತೃತ್ವದಲ್ಲಿ ಕ್ರಾಂತಿ ನಡೆಯಬೇಕು. ಕಾರ್ಮಿಕ ವರ್ಗದ ನೇತೃತ್ವವನ್ನು ನಡೆಸಲು ಒಂದು ಲೆನಿನ್ ಹೇಳಿದಂತೆ ನಾಯಕತ್ವ ಬೇಕಿದೆ. ಪ್ರಸಕ್ತ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಸಂಕಷ್ಟದಿಂದ ಸಾಮಾನ್ಯರ ಬದುಕು ಬಡವರ ಮತ್ತು ಮಧ್ಯಮ ವರ್ಗದವರ ಬದುಕು ಕತ್ತಲಾಗಿ ಸಾವು ಬೆಳಕಾಗುತ್ತಿದೆ. ಕೃಷಿ ದುಬಾರಿಯಾಗಿ ಸಣ್ಣ-ಮಧ್ಯಮ ರೈತರು ಪ್ರಸಕ್ತ ಸಂದರ್ಭದಲ್ಲಿ ಕೃಷಿಯಿಂದ ವಿಮುಖರಾಗಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕೃಷಿ ಸಮಸ್ಯೆಯಿಂದ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡುರುವುದು ಇಂದಿ ದುಸ್ಥಿತಿಯ ಪ್ರತೀಕ ಎಂದರು.
ಇಂದು ಕಮ್ಯುನಿಸ್ಟ್ ವೈಚಾರಿಕತೆಗೆ ಜನತೆ ಆಕರ್ಷಣೆ ಆಗುತ್ತಿರುವುದನ್ನು ಸಹಿಸದ ಮೂಲಭೂತವಾದಿಗಳು ಕೋಮು ದ್ವೇಷ ಹರಡುತ್ತಿದ್ದಾರೆ. ದೇಶಪ್ರೇಮ, ದೇಶದ್ರೋಹ ಬಗ್ಗೆ ಘೋಷಣೆಗಳೊಂದಿಗೆ ಅಂಧ ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಜನರ ಮೂಲಭೂತ ಅವಶ್ಯಕತೆಗಳಿಗೆ ಬೀದಿಗಿಳಿದು ಹೋರಾಟ ಕಟ್ಟುತ್ತಿದ್ದಾರೆ. ಆದರೆ ಆಳ್ವಿಕರು ಜನಗಳನ್ನು ದಿಕ್ಕು ತಪ್ಪಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಇದರ ವಿರುದ್ಧ ದುಡಿಯುವ ವರ್ಗ ಜಾಗೃತರಾಗಬೇಕು. ಪ್ರಸಕ್ತ ಚುನಾವಣೆಯಲ್ಲಿ ಎಸ್‌ಯುಸಿಐ(ಸಿ) ಹೋರಾಟದ ಭಾಗವಾಗಿ ಕಣಕ್ಕಿಳಿದು ಭಗತ್ ಸಿಂಗ್ ಮತ್ತ ನೇತಾಜಿ ಯಂತಹ ರಾಜಕೀಯ ಸಂದೇಶ ಜನತೆಯತ್ತ ಕೊಂಡಯ್ಯುವಲ್ಲಿ ಯಶಸ್ವಿಯಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಎಸ್‌ಯುಸಿಐ (ಸಿ) ನ ಜಿಲ್ಲಾ ಸಮಿತಿ ಸದಸ್ಯ ಬಾಳು ಜೇವೂರ ಮಾತನಾಡಿದರು. ಭರತಕುಮಾರ್, ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ ಎಚ್., ಶರತ ಪತ್ತಾರ, ಶಿವಬಾಳಮ್ಮ, ಗೀತಾ, ಸುನೀಲ, ಶೋಭಾ, ಅಶೋಕ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚುನಾವಣೆಗಳು ನಡೆಯುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಎಕಸ್ವಾಮ್ಯಾಧಿಪತಿಗಳಿಂದ ಹಣ ಪಡೆದು ಆಯ್ಕೆಯಾಗಿ ಬಂದ ಮೇಲೆ ಬಂಡವಾಳಿಗರ ಸೇವೆ ಮಾಡುತ್ತವೆ. ಇಂದು ಬಂಡವಾಳಶಾಹಿ ವ್ಯವಸ್ಥೆಗೆ ಸರಕಾರಗಳು ಆಕ್ಸಿಜನ್ ಕೊಟ್ಟು ಸಾವು ಮುಂದೂಡುತ್ತಿವೆ. ಇಂತಹ ಸರ್ಕಾರಗಳ ವಿರುದ್ಧ ಕಾರ್ಮಿಕ ವರ್ಗ ಶೋಷಣೆಗೆ ಒಳಪಟ್ಟ ವರ್ಗ ನೈಜ ಹೋರಾಟ ಕಟ್ಟಲು ಜನತೆ ಮುಂಬರಬೇಕು.
•ಭಗವಾನರೆಡ್ಡಿ,
ಎಸ್‌ಯುಸಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.