ಸರ್ಕಾರದಿಂದ ತ್ರಿ-ಸ್ಟಾರ್‌ ಹೋಟೆಲ್‌

ಪಾರಂಪರಿಕ ವಾಸ್ತು ವಿನ್ಯಾಸದಲ್ಲಿ 75 ಕೋಣೆ ನಿರ್ಮಾಣ 18 ಕೋಟಿ ರೂ. ಯೋಜನೆಗೆ ಡಿಸೆಂಬರ್‌ನಲ್ಲಿ ಟೆಂಡರ್‌

Team Udayavani, Oct 24, 2019, 12:56 PM IST

24-October-9

ಜಿ.ಎಸ್‌. ಕಮತರ
ವಿಜಯಪುರ:
ತುಕ್ಕು ಹಿಡಿದಿದ್ದ ವಿಜಯಪುರ ಪ್ರವಾಸೋದ್ಯಮಕ್ಕೆ ಕ್ರಿಯಾಶೀಲತೆಯ ಸ್ಪರ್ಶ ದೊರೆಯಲು ಆರಂಭಿಸಿದೆ. ನಗರಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಸೇವೆ ಕಲ್ಪಿಸಲು ಮತ್ತೂಂದೆಡೆ ತಕ್ಷಣವೇ ಹೆಚ್ಚಿನ ವಸತಿ ಸೇವೆ ಕಲ್ಪಿಸಲು 23 ಕೋಣೆಗಳ ನವೀಕರಣ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಗರದಲ್ಲಿ ನಡೆಯುತ್ತಿರುವ ಆದಿಲ್‌ ಶಾಹಿ ಮಯೂರ್‌ ಹೋಟೆಲ್‌ ತ್ರಿಸ್ಟಾರ್‌ ರೂಪದಲ್ಲಿ ತಲೆ ಎತ್ತಲಿದೆ. ಪಾರಂಪರಿಕ ಸ್ಮರೂಪದ ವಾಸ್ತು ವಿನ್ಯಾಸದಲ್ಲಿ ರೂಪಿಸಿ 75 ಕೋಣೆಗಳ ಮಾದರಿ ಹೋಟೆಲ್‌ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಖಾಸಗಿ ಒಡೆತನದಲ್ಲಿ ಹಲವು ಊಟ-ವಸತಿ ಸಮೇತ ವ್ಯವಸ್ಥೆ ಇವೆ. ಇದರ ಹೊರತಾಗಿಯೂ ಸರ್ಕಾರ ಕರ್ನಾಟಕದ ಕನ್ನಡದ ಮೊದಲ ದೊರೆ ಮಯೂರ ಅವರ ಹೆಸರಿನಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಸ್ಥಾನಿಕ ರಾಜ ವಂಶಗಳ ಹೆಸರಿನಲ್ಲಿ ಊಟ-ವಸತಿ ಸಹಿತ ಸರ್ಕಾರಿ ವಸತಿ ಸೇವೆ ನೀಡುತ್ತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಇಂಥ ಹೋಟೆಲ್‌ ನಗರದಲ್ಲಿ ಹೋಟೆಲ್‌ ಮಯೂರ್‌ ಆದಿಲ್‌ ಶಾಹಿ ಹೆಸರಿನಲ್ಲಿ ಅನೆಕ್ಸ್‌ ಹೊಂದಿದೆ.

ವಸತಿ ಕಟ್ಟಡಗಳ ನವೀಕರಣ: ಈಗಿರುವ ಈ ವ್ಯವಸ್ಥೆಯಲ್ಲಿ ಎರಡು ಹಾಸಿಗೆ 4 ರೂಮ್‌ ಗಳಿದ್ದು, ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ಸಾಲದು. ಹೀಗಾಗಿ ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಟ್ಟಗಳ ನವೀಕರಣ ನಡೆದಿದೆ. ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಈ ಕಟ್ಟಡವನ್ನು ಈ ಹಿಂದೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನೀಡಲಾಗಿತ್ತು.

ಕಳೆದ ಹಲವು ವರ್ಷಗಳ ಹಿಂದೆ ವಿದ್ಯಾರ್ಥಿನಿಯರ ಹಾಸ್ಟೆಲ್‌ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಕಾರಣ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಗೃಹಕ್ಕೆ ಬಳಲಸಲು ಈ ಕಟ್ಟಡವನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನವೀಕರಣ ನಡೆಸಿದೆ.

ಡಿಸೆಂಬರ್‌ಗೆ 23 ಕೋಣೆ ಲಭ್ಯ: ಒಟ್ಟು 23 ಕೋಣೆಗಳಿರುವ ಈ ಕಟ್ಟಡದಲ್ಲಿ ಜೋಡಿ ಹಾಸಿಗೆಯ 21 ಹಾಗೂ 2 ಸೂಟ್‌ಗಳಿವೆ. 2.13 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಡಿಸೆಂಬರ್‌ ವೇಳೆಗೆ ಪ್ರವಾಸಿಗರ ಸೇವೆಗೆ ಅರ್ಪಣೆಗೊಳ್ಳುವ ಸಾಧ್ಯತೆ ಇದೆ. ಆದಿಲ್‌ ಶಾಹಿ ತ್ರಿಸ್ಟಾರ್‌ ಹೋಟೆಲ್‌: ಇತ್ತ ಸ್ಟೇಶನ್‌ ರಸ್ತೆಯಲ್ಲಿರುವ ಹೋಟೆಲ್‌ ಮಯೂರ್‌ ಆದಿಲ್‌ ಶಾಹಿ ಹೆಸರಿನಲ್ಲಿ ಅನೆಕ್ಸ್‌ಗೆ ತ್ರಿಸ್ಟಾರ್‌ ಹೋಟೆಲ್‌ ಮಾದರಿಯಲ್ಲಿ ಹೊಸದಾಗಿ ನಿರ್ಮಿಸಲು ಯೋಜಿಸಲಾಗಿದೆ. ಈ ಹೋಟೆಲ್‌ನ ಮುಂದಿನ ಕಟ್ಟಡ ಹೊರತು ಪಡಿಸಿ, ಹಿಂದಿರುವ ಕಟ್ಟಡವನ್ನು ನೆಲಸಮ ಮಾಡಿ ಸರ್ಕಾರ ತ್ರಿಸ್ಟಾರ್‌ ಹೋಟೆಲ್‌ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಯೋಜನೆ ಸಿದ್ಧವಾಗಿದ್ದು ಸರ್ಕಾರ ಸದರಿ ಯೋಜನೆಗೆ ಅನುಮತಿಯನ್ನೂ ನೀಡಿದೆ.

ಜೋಡಿ ಹಾಸಿಗೆಯ 75 ಕೋಣೆಗಳ ನಿರ್ಮಾಣಕ್ಕೆ 18 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ಸಿದ್ಧವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಕಟ್ಟಡ ನವೀಕರಣದ ಬಳಿಕ ಸೇವೆಗೆ ಲಭ್ಯವಾಗುತ್ತಲೇ ಮಯೂರ್‌ ಆದಿಲ್‌ ಶಾಹಿ ಕಟ್ಟಡ ಕೆಡವಿ ತ್ರಿಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.

ಪಾರಂಪರಿಕ ತಾಣಗಳ ವಿನ್ಯಾಸ: ಸದರಿ ತ್ರಿಸ್ಟಾರ್‌ ಹೋಟೆಲ್‌ಗೆ ವಿಜಯಪುರ ಪಾರಂಪರಿಕ ಸ್ಮಾರಕದ ರೂಪ ನೀಡಲು ಯೋಜಿಸಲಾಗಿದೆ. ತ್ರಿಸ್ಟಾರ್‌ ಹೋಟೆಲ್‌ ಪ್ರವೇಶ ದ್ವಾರದಲ್ಲಿ ಗೋಲಗುಮ್ಮಟ ಮಾದರಿ ಕಮಾನು, ಒಳಾಂಗಣದಲ್ಲಿ ಇಬ್ರಾಹೀಂ ರೋಜಾ, ಬಾರಾಕಮಾನ್‌, ಆದಿಲ್‌ ಶಾಹಿ ಅರಸರ
ಕುಮಟಗಿ ಬೇಸಿಗೆ ಅರಮನೆ ಸೇರಿದಂತೆ ಐತಿಹಾಸಿಕ ವಿವಿಧ ಸ್ಮಾರಕಗಳ ಮಾದರಿಯನ್ನು ಈ ಕಟ್ಟಡದಲ್ಲಿ ಅಳವಡಿಸಲು ಯೋಜಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ತಾವು ವಾಸ ಮಾಡುವ ವಾಸ್ತವ್ಯದ ನೆಲೆಯಲ್ಲೂ ಪಾರಂಪರಿಕ ಕಟ್ಟಡದಲ್ಲಿ ವಾಸ ಮಾಡಿದ ಅನುಭೂತಿ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ.

ಇದಲ್ಲದೇ ತ್ರಿಸ್ಟಾರ್‌ ನಿರ್ಮಾಣಕ್ಕೆ ಸ್ಥಾನಿಕವಾಗಿ ದೊರೆಯುವ ಕಲ್ಲು, ಇಟ್ಟಿಗೆಗಳಂಥ ಕಚ್ಚಾ ಸಾಮಗ್ರಿಗಳನ್ನೇ ಬಳಸಲು ತೀರ್ಮಾನಿಸಿರುವುದು ವಿಶೇಷ. ಈ ತ್ರಿಸ್ಟಾರ್‌ ಹೋಟೆಲ್‌ನಲ್ಲಿ ಐಷಾರಾಮಿ ಸೌಲಭ್ಯಗಳು, ವಿಶ್ವ ದರ್ಜೆ ಅಧುನಿಕ ಶೈಲಿಯ ಜೊತೆಗೆ ಸ್ಥಾನಿಕ ಪಾರಂಪರಿಕ ಪೀಠೊಪಕರಣಗಳು, ವಿಶಿಷ್ಟ ವಿನ್ಯಾಸದ ದಿರಿಸಿನ ಕೊಣೆ ಸಹಾಯಕರು, ಊಟ-ತಿಂಡಿ ಸರಬರಾಜು ಸೇವರಕರನ್ನು ನೇಮಿಸಲು ಕೂಡ ಯೋಜಿಸಲಾಗಿದೆ.

ಪ್ರವಾಸಿಗರಿಗೆ ಹೆಚ್ಚಿನ ವಸತಿ ಸೌಲಭ್ಯ: ಸರ್ಕಾರಿ ಒಡೆತನದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಂದು ನವೀಕೃತ ಹಾಗೂ ಮತ್ತೊಂದು ನೂತನ ನಿರ್ಮಾಣದ ತ್ರಿಸ್ಟಾರ್‌ ಹೋಟೆಲ್‌ಗ‌ಳು ಲಭ್ಯವಾದಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ಪ್ರವಾಸಿಗರಿಗೆ ವಸತಿ ಸೌಲಭ್ಯದ ಕೊರತೆ ನೀಗಲಿದೆ.

ಅಲ್ಲದೇ ಸರ್ಕಾರಿ ಸ್ವಾಮ್ಯದ ಅದರಲ್ಲೂ ಪ್ರವಾಸೋದ್ಯಮ ಇಲಾಖೆ ಅಧೀನದ ಸಂಸ್ಥೆ ನಿರ್ವಹಿಸುವ ಹೋಟೆಲ್‌ನಲ್ಲಿ ತಂಗಲು ನಿರ್ದಿಷ್ಟ ಹಾಗೂ ನಿಖರ ಬಾಡಿಗೆ, ಊಟ-ಉಪಾಹಾರಕ್ಕೆ ಕನಿಷ್ಠ ಮಟ್ಟದ ದರ ಇರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಿ ಸೇವೆಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ಮಾನಸಿಕವಾಗಿ ಸುರಕ್ಷತೆಯ ಭಾವ ಇರಲಿದೆ.

ಇದರಿಂದ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ನೀಡಲು ಸಹಕಾರಿ ಆಗಲಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದಲ್ಲಿ ಬರುವ ಡಿಸೆಂಬರ್‌ನಲ್ಲಿ ಒಂದೆಡೆ ಹೆಚ್ಚಿನ ಕೋಣೆಗಳು ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಲಭ್ಯವಾಗಲಿದ್ದರೆ, ಮತ್ತೊಂದೆಡೆ ಸರ್ಕಾರಿ ಒಡೆತನದಲ್ಲಿ ತ್ರಿಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಇದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಸೌಲಭ್ಯಗಳು ಲಭ್ಯವಾಗಲಿದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.