ಚುನಾವಣೆ ಸಿಬ್ಬಂದಿಯಿಂದ ಮತಯಂತ್ರ ಜಾಗೃತಿ
ಪ್ರತಿಯೊಬ್ಬ ಪ್ರಜೆಯೂ ತಪ್ಪದೆ ಮತದಾನ ಮಾಡಲು ಮನವಿ
Team Udayavani, Apr 3, 2019, 4:38 PM IST
ಆಳಂದ: ಶಖಾಪುರದಲ್ಲಿ ಸೆಕ್ಟಟರ್ ಅಧಿಕಾರಿ ಗೌರಿಶಂಕರ, ಕಂ.ನೀ. ಶರಣಬಸಪ್ಪ ಹಕ್ಕಿ, ವಿ.ಎ. ರಮೇಶ ಮಾಳಿ 2ನೇ ಹಂತದ ಮತಯಂತ್ರ ಜಾಗೃತಿ ಕೈಗೊಂಡರು.
ಆಳಂದ: ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆ 2019ರ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಾಲೂಕಿನ ಭಾರತ ಚುನಾವಣೆ ಆಯೋಗದ ಸಿಬ್ಬಂದಿ 2ನೇ ಹಂತದ ಅಣುಕು ಮತದಾನ ಮೂಲಕ ಮತಯಂತ್ರ ಜಾಗೃತಿ ಅಭಿಯಾನ ಕೈಗೊಂಡು ಮತದಾನಕುರಿತು ಮತದಾರರಿಗೆ ಮಾಹಿತಿ ಒದಗಿಸಿದರು.
ಅಭಿಯಾನದಲ್ಲಿ ಇವಿಎಂ ಪ್ಯಾಡ್ ಮತ್ತು ವಿವಿಪಿಎಟಿ ಮತಯಂತ್ರಗಳ ಜಾಗೃತಿಯನ್ನು ಶಕಾಪುರ, ಸಂಗೋಳಗಿ ಜಿ. ಮೋರಿಸಾಬ ತಾಂಡಾ, ಗೊಲ್ಲಹಳ್ಳಿ, ಜಮಗಾ ಜೆ. ಜಿಡಗಾ, ರಾಜೋಳ ಸೇರಿದಂತೆ 15 ಗ್ರಾಮಗಳನ್ನು ಸೆಕ್ಟಟರ್ ಅಧಿಕಾರಿ ಗೌರಿಶಂಕರ, ಕಂ.ನೀ. ಶರಣಬಸಪ್ಪ ಹಕ್ಕಿ, ವಿ.ಎ. ರಮೇಶ ಮಾಳಿ ಪಿಯು ಕಾಲೇಜಿನ ಉಪನ್ಯಾಸಕ ಗಿರೀಶ ರೋಗಿ ನೇತೃತ್ವದ ತಂಡದಿಂದ ಅಭಿಯಾನ ಕೈಗೊಳ್ಳಲಾಗಿದೆ.
ಅಲ್ಲದೆ, ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಆಯಾ ತಂಡದ ಸಿಬ್ಬಂದಿ ಮತಯಂತ್ರದ ಮೂಲಕ ಸಾರ್ವಜನಿಕರಿಂದ ಅಣಕು ಮತದಾನ ನಡೆಸಿ ಜಾಗೃತಿ ಮೂಡಿಸಿದರು.
ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಗಿರೀಶ ಪಾಟೀಲ, ಸಹಾಯಕ ಚುನಾವಣಾಧಿ ಕಾರಿ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ನೇತೃತ್ವದಲ್ಲಿ ತಾಲೂಕಿನ ಒಟ್ಟು 104 ಹಳ್ಳಿ 36 ತಾಂಡಾಗಳಲ್ಲಿ 10 ತಂಡಗಳನ್ನು ರಚಿಸುವ ಮೂಲಕ, ತಲಾ ತಂಡಗಳಿಗೆ 10 ಗ್ರಾಮಗಳನ್ನು ವಹಿಸಲಾಗಿದೆ. ಈ ಮೂಲಕ ಮಂಗಳವಾರದಿಂದ ಎರದು ದಿನಗಳವರೆಗೆ ನಡೆಯುವ ಮತದಾನ ಜಾಗೃತಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.