ಗುಡ್ಡಗಾಡು ಭೂಮಿ ವರದಿಯಿಂದ ಬೆಚ್ಚಿದ ರೈತರು
ಹೆದ್ದಾರಿ ಪಾಲಾಗುವ ಭೂಮಿಗೆ ಪುಡಿಗಾಸು•ಸರ್ವೇ ಲೋಪ ಸರಿಪಡಿಸಿ
Team Udayavani, Jun 15, 2019, 11:29 AM IST
ವಾಡಿ: ಕಲಬುರಗಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಲಾಡ್ಲಾಪುರ ಗ್ರಾಮದ ರೈತರಿಗೆ ದರ ಕುಸಿತದ ಆತಂಕ ಎದುರಾಗಿದೆ.
ಮಡಿವಾಳಪ್ಪ ಹೇರೂರ
ವಾಡಿ: ಕಲಬುರಗಿ ಹಾಗೂ ಗುತ್ತಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ಭೂಸ್ವಾಧೀನ ಆತಂಕದ ಜತೆಗೆ ಪರಿಹಾರ ದರ ಪಾತಾಳಕ್ಕಿಳಿದಿರುವ ಚಿಂತೆ ರೈತರನ್ನು ಕಾಡುತ್ತಿದೆ.
ಜನದಟ್ಟಣೆ ಹಾಗೂ ತಿರುವುಗಳನ್ನು ಗಮನಿಸಿರುವ ಅಧಿಕಾರಿಗಳು, ಲಾಡ್ಲಾಪುರ ಗ್ರಾಮದ ಹೊರ ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 11 ಎಕರೆ ಕೃಷಿ ಭೂಮಿ ಹೆದ್ದಾರಿ ಪಾಲಾಗಲಿದ್ದು, ಭೂಮಿ ಕಳೆದುಕೊಳ್ಳುತ್ತಿರುವ ರೈತರು ಪರಿಹಾರ ನಷ್ಟ ಅನುಭವಿಸುವ ಆತಂಕ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಗಾಗಿ ಜಮೀನು ಬಿಟ್ಟುಕೊಡುವ ರೈತರಿಗೆ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಸಿಗುವುದೋ ಇಲ್ಲವೋ ಎನ್ನುವ ದುಗುಡಕ್ಕೆ ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ಅವೈಜ್ಞಾನಿಕ ಸರ್ವೇ ಕಾರಣವಾಗಿದೆ.
ಸರಕಾರ ನೀಡುವ ಪುಡಿಗಾಸು ಪರಿಹಾರ ನಮ್ಮನ್ನು ಬೀದಿಗೆ ತಳ್ಳಲಿದೆ ಎನ್ನುತ್ತಾರೆ ರೈತರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಸಂಬಂಧಿಸಿದ ರೈತರಿಗೆ ನೋಟಿಸ್ ಜಾರಿಮಾಡಿ, ಸಭೆ ನಡೆಸಿದೆ ಎನ್ನಲಾಗಿದ್ದು, ರೈತರ ಜಮೀನುಗಳ ದಾಖಲಾತಿ ಕೇಳಿದೆ. ಸರಕಾರದ ಮಾರುಕಟ್ಟೆ ಮೌಲ್ಯಪಟ್ಟಿ ಮಾನದಂಡದ ನಾಲ್ಕು ಪಟ್ಟು ಪರಿಹಾರ ಮೊತ್ತ ನೀಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಸರ್ವೇ ಎಡವಟ್ಟಿನಿಂದ ಪರಿಹಾರ ದರದಲ್ಲಿ ಇಳಿತ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.
ಲಾಡ್ಲಾಪುರ ಗ್ರಾಮದ ಸರ್ವೇ ನಂಬರ್ 296, 323, 295, 240, 283/1, 283/2 ಹೀಗೆ ಹಲವು ಪಹಣಿ ದಾಖಲಾತಿ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನೀಲ ನಕ್ಷೆಯಲ್ಲಿ ಅಚ್ಚಾಗಿವೆ. ಭೂಸ್ವಾಧೀನ ಪ್ರಕ್ರಿಯೆಗೊಳಗಾಗುವ ಜಮೀನುಗಳಿಗೆ ಕಾನೂನು ಪ್ರಕಾರ ಎಕರೆಗೆ ನಾಲ್ಕು ಲಕ್ಷ ರೂ. ದರ ನಿಗದಿಯಾಗಬೇಕು. ಲಾಡ್ಲಾಪುರ ಭೂಮಿ ವಲಯ ಗುಡ್ಡಗಾಡು ಪ್ರದೇಶದ್ದು ಎನ್ನುವ ಸರ್ವೇ ವರದಿ ರವಾನೆಯಾಗಿದ್ದರಿಂದ ಎಕರೆಗೆ ಕೇವಲ ಎರಡು ಲಕ್ಷ ರೂ. ಕೈಗೆಟಕುವ ಸಾಧ್ಯತೆ ಹೆಚ್ಚಿದ್ದು, ಮುಗಿಲೇ ಕತ್ತರಿಸಿ ಮೈಮೇಲೆ ಬೀಳುವ ಗಂಡಾಂತರ ಎದುರಾಗಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರಕಾರದ ಮಾರುಕಟ್ಟೆ ದರಪಟ್ಟಿಯ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡುವುದಾಗಿ ಹೇಳಿದೆ. ಅಂದರೆ ಎಕರೆಗೆ 16 ಲಕ್ಷ ರೂ. ದರ ಲಭ್ಯವಾಗಬೇಕು. ಕಂದಾಯ ಅಧಿಕಾರಿಗಳ ಸರ್ವೇ ಲೋಪದಿಂದ ಪರಿಹಾರ ಧನ ಪಾತಾಳಕ್ಕೆ ಕುಸಿದಿದ್ದು, ಎಕರೆಗೆ 8 ಲಕ್ಷ ರೂ. ದರದಂತೆ ಬಿಡಿಗಾಸು ಪರಿಹಾರ ನಮ್ಮ ಕೈಗಿಟ್ಟು ಬೀದಿಪಾಲು ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಗ್ರಾಮದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆ ಸರ್ವೇಯಿಂದಾದ ದರ ನಿಗದಿ ಲೋಪ ಸರಿಪಡಿಸಬೇಕು. ನೀರಾವರಿ ಕೃಷಿ ಆಧಾರಿತ ಭೂಮಿಗಳ ಮೌಲ್ಯ ಕಳೆದಿರುವ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹೆದ್ದಾರಿ ಅಭಿವೃದ್ಧಿಗಾಗಿ ಶಾಶ್ವತವಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಕಾನೂನುಬದ್ಧ ಮೌಲ್ಯ ನಿಗದಿಪಡಿಸಬೇಕು. ನಮ್ಮನ್ನು ಬೀದಿಗೆ ತಳ್ಳಿ ರಸ್ತೆ ಅಭಿವೃದ್ಧಿ ಮಾಡುವುದೇ ಆದರೆ ನಮ್ಮ ಶವಗಳ ಮೇಲೆಯೇ ಹೆದ್ದಾರಿ ಹಾಯ್ದು ಹೋಗಲಿ ಎಂದು ರೈತರಾದ ವಿಶ್ವನಾಥ ಸಾಹುಕಾರ, ಮರೆಮ್ಮ ಸಾಬಣ್ಣ ಹಾಗೂ ನಾಗರತ್ನಮ್ಮ ಮಲಕಂಡಿ ತಮ್ಮ ಮನದ ನೋವು ಹೊರಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.