ಬಾಬಾಸಾಹೇಬ್ ಅಂಬೇಡ್ಕರ್ ಅಜರಾಮರ
ಸಮಾನತೆ ಕನಸು ಹೊತ್ತು ಅಸಮಾನತೆ ವಿರುದ್ಧ ಹೋರಾಡಿದ ದೇಶದ ಧೀಮಂತ ನಾಯಕ
Team Udayavani, Apr 15, 2019, 12:46 PM IST
ಶಹಾಪುರ: ಭೀಮರಾಯನಗುಡಿ ಕೆಬಿಜೆಎನ್‌ಎಲ್ ವಸಾಹತುವಿನಲ್ಲಿ ಡಾ| ಅಂಬೇಡ್ಕರ್ ಪ್ರತಿಮೆಯನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅನಾವರಣ ಮಾಡಿದರು.
ಶಹಾಪುರ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿ ಸರ್ವ ಜನಾಂಗದ ಅಭಿವೃದ್ಧಿಗಾಗಿ ಹಾಗೂ ಸಧೃಡ ರಾಷ್ಟ್ರ ನಿರ್ಮಾಣಕ್ಕಾಗಿ ಅವರು ನೀಡಿದ ಕೊಡುಗೆ ಭೂಮಿ ಮೇಲೆ ಜೀವ ಸಂಕುಲ ಇರುವವರೆಗೂ ಅಜರಾಮರವಾಗಿರುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಭೀಮರಾಯನಗುಡಿ ಕಾಡಾ ಮತ್ತು ಕೆಬಿಜೆಎನ್‌ಎಲ್ ವಸಾಹತುವಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಆಶ್ರಯದಲ್ಲಿ ನಡೆದ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರ 128ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ಜಾತಿ ಧರ್ಮಗಳ ಜನಾಂಗದವರು ವಾಸ ಮಾಡಿದರೂ ವೈವಿಧ್ಯತೆಗಳಲ್ಲಿ ಏಕತೆ ಕಂಡುಕೊಳ್ಳುವಲ್ಲಿ ಡಾ| ಅಂಬೇಡ್ಕರ್ ಒಮ್ಮತ ಮೂಡಿಸಿದ್ದಾರೆ. ಸಮಾನತೆ
ಕನಸು ಹೊತ್ತು ಅಸಮಾನತೆ ವಿರುದ್ಧ ಹೋರಾಟ ಮಾಡಿದ ದೇಶದ ಧಿಧೀಮಂತ ನಾಯಕ. ಅವರ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಮುನ್ನಡೆದು ಶೈಕ್ಷಣಿಕ ಅಭಿವೃದ್ಧಿಯತ್ತ ಸಾಗಬೇಕು. ಶೋಷಿತರು ಬಲವರ್ಧನೆಗೆ ಶಿಕ್ಷಣವೇ ಶಕ್ತಿಯಾಗಿದೆ ಎಂದು ಹೇಳಿದರು. ಸರ್ಕಾರಿ ಸೌಲಭ್ಯ ಪಡೆದುಕೊಂಡರೆ ಸಾಲದು ಅವುಗಳು ಸಮಪರ್ಕವಾಗಿ ಸದ್ಬಳಕೆಯಾದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಇನ್ನೂ ಹೆಚ್ಚು ಶೈಕ್ಷಣಿಕ ಮತ್ತು ಪ್ರಗತಿಯತ್ತ ದಲಿತರು ಮುಖ್ಯವಾಹಿನಿಯತ್ತ ಬರಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಗರದ ಸಾರಿಪುತ್ರ ಬುದ್ಧ ವಿಹಾರದ ಪೂಜ್ಯ ಭಂತೆ ಮೆತ್ತಪಾಲ ಕಾರ್ಯಕ್ರಮ ಉದ್ಘಾಟಿಸಿ ಮಹಾಬೋಧಿ ಮಂತ್ರ ಬೋಧಿಸಿದರು. ಕಾಡಾ ಆಡಳಿತ ಅಧಿಕಾರಿ ವಿ.ಕೆ. ಪೋತದಾರ ಭೀಮದರ್ಶನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನಂದಾ ಕ್ಯಾತಣವರ್ ಹಾಗೂ ಸಂಗಡಿಗರು ನಡೆಸಿಕೊಟ್ಟ ಭಾರತ ಭಾಗ್ಯವಿಧಾತ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯಂಕಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ| ಶರಣು ಗದ್ದುಗೆ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಅಧಿಧೀಕ್ಷಕ ಅಭಿಯಂತರ ಎನ್.ಬಿ. ಭಜಂತ್ರಿ, ರಾಮಪ್ರಸಾದ, ಎಂ.ಎಂ. ಬಳಬಟ್ಟಿ, ಮುಖ್ಯ ಲೆಕ್ಕಾಧಿ ಕಾರಿ ಬನ್ನಪ್ಪ ಗುಡಿಮನಿ, ಡಾ| ಮಹೇಶ ಮಾಲಗತ್ತಿ, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಮಾಘಾ, ವೈದ್ಯಾಧಿಕಾರಿ ರಾಜಕುಮಾರ, ಸಾಹಿತಿ ದೇವೇಂದ್ರ ಹೆಗ್ಗಡೆ, ನೀಲಕಂಠ ಬಡಿಗೇರ, ಕಾರ್ಯಪಾಲಕ ಅಭಿಯಂತರ ಶಿವಾಜಿ, ಶಿವಪುತ್ರಪ್ಪ ಕಾಳಗಿ, ಪಿ. ಶ್ರೀನಿವಾಸ, ಜೆ. ಜಗನ್ನಾಥ, ಎಲ್. ಸುಭಾಶ, ಭೀಮರಾಯ ಕವಲ್ದಾರ ಮತ್ತು ಎಇಇಗಳಾದ ಬಸವಣ್ಣೆಪ್ಪ ಬೋಸಗಿ, ಸುಭಾಶ ಸಂಭಾಜಿ, ಶಂಕರ ರೂಬಿಕರ್, ಸಣ್ಣ ಪರಶುರಾಮ, ಜಿ.ಎನ್. ಅನೀಲರಾಜ, ಪ್ರೇಮ ಸಾಗರ, ಶಿವಮಹಾಂತ ಚಂದಾಪುರ, ಗುತ್ತಿಗೆದಾರ ಸಂಜೀವರಡ್ಡಿ ಪಾಟೀಲ, ವೆಂಕಟೇಶ ಗುರಸಣಿಗಿ, ರಾಜು ಯಾಳಗಿ, ಅಯ್ಯನಗೌಡ, ದಲಿತ ಮುಖಂಡ ಚಂದಪ್ಪ ಸೀತ್ನಿ, ಶಿವುಕುಮಾರ ತಳವಾರ, ರಾಮಣ್ಣ ಸಾದ್ಯಾಪುರ, ಮಹಾದೇವ ದಿಗ್ಗಿ ಇದ್ದರು.ಎಸ್.ಆರ್. ಚಲುವಾದಿ ಸ್ವಾಗತಿಸಿದರು. ಎಇಇ ಮಾರಕಪ್ಪನ್ ನಿರೂಪಿಸಿದರು. ಜೆಇ ಹುಸೇನಪ್ಪ ಕಟ್ಟಿಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.