ತೋಟಗಾರಿಕೆಗೆ ಜಿಲ್ಲೆಯಲ್ಲಿ ಉತ್ತಮ ವಾತಾವರಣ
ಸೂಕ್ತ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಸಲಹೆ
Team Udayavani, Apr 19, 2019, 3:46 PM IST
ಯಾದಗಿರಿ: ತೋಟಗಾರಿಕೆ ವಿಸ್ತರಣಾ ಘಟಕದಲ್ಲಿ ರೈತರಿಗಾಗಿ ಮಾವು ಬೇಸಾಯದ ತಂತ್ರಜ್ಞಾನ ತರಬೇತಿ ಶಿಬಿರದಲ್ಲಿ ಡಾ| ಪ್ರಶಾಂತ ಮಾವಿನ ಬೆಳೆಯಲ್ಲಿನ ಕೀಟ ಮತ್ತು ರೋಗ ಕುರಿತು ರೈತರಿಗೆ ಮಾಹಿತಿ ನೀಡಿದರು.
ಯಾದಗಿರಿ: ಜಿಲ್ಲೆಯಲ್ಲಿ ತೋಟಗಾರಿಗೆ ಬೆಳೆಯಲು ಉತ್ತಮ ವಾತಾರಣವಿದ್ದು, ಸೂಕ್ತ ನೀರಿನ ವ್ಯವಸ್ಥೆ ಮಾಡಿಕೊಂಡು ರೈತರು
ಮುಂದೆ ಬರಬೇಕು ಎಂದು ಬಾಗಲಕೋಟೆ ತೋಟಗಾರಿಗೆ ವಿವಿ
ಯಾದಗಿರಿ ವಿಸ್ತರಣಾ ಘಟಕದ ಮುಂದಾಳು ಡಾ| ರೇವಣ್ಣಪ್ಪ ಹೇಳಿದರು.
ನಗರದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಆಯೋಜಿಸಲಾಗಿದ್ದ ರೈತ ಮತ್ತು ರೈತ ಮಹಿಳೆಯರಿಗಾಗಿ ಮಾವು
ಬೇಸಾಯ ತಂತ್ರಜ್ಞಾನ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. ಮಾವು ಬೆಳೆಯಲು ಜಮೀನಿನ ಮಣ್ಣು,
ನೀರು ಪರೀಕ್ಷೆ ಮಾಡಿಸುವುದರ ಜತೆಗೆ ಉತ್ತಮ ತಳಿಗಳ ಆಯ್ಕೆ, ಸೂಕ್ತ ಸಮಯದಲ್ಲಿ ಸಸಿ ನಾಟಿ ಮಾಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೆ ಸಸಿಗಳನ್ನು ಉಪಯೋಗಿಸದೇ ಮಾವು ಬೆಳೆಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ
ನೀಡಿದರು. ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ನೀರಿನ ಕೊರತೆ ಇರುವುದರಿಂದ ಹನಿ ನೀರಾವರಿ ಅಳವಡಿಸಿಕೊಳ್ಳಲು ಹಾಗೂ ಇದಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇತ್ತೀಚೆಗೆ ಅಧಿಕ ಸಾಂದ್ರತೆಯಲ್ಲಿ ಮಾವು ನಾಟಿ ಮಾಡಿ ಹೆಚ್ಚಿನ
ಇಳುವರಿ ಮತ್ತು ಲಾಭ ಪಡೆಯಬಹುದಾಗಿದೆ. ಈ ಮೊದಲು
10ಗಿ10 ಮೀಟರ್ ಅಂತರದಲ್ಲಿ ಪ್ರತಿ ಹೆಕ್ಟೇರ್‌ಗೆ ಕೇವಲ 100 ಕಸಿ ನಾಟಿ ಮಾಡಲಾಗುತ್ತಿದ್ದು, ಅಧಿ ಕ ಸಾಂದ್ರತೆಯಲ್ಲಿ 2.58 ಗಿ2.5 ಮೀಟರ್ ಅಂತರದಲ್ಲಿ ಪ್ರತಿ ಹೆಕ್ಟೇರ್‌ಗೆ 1500 ರಿಂದ 1600 ಕಸಿ ನಾಟಿ ಮಾಡಿ ಮೊದಲಗಿಂತ 15 ಪಟ್ಟು ಹೆಚ್ಚಿಗೆ ಕಸಿಗಳನ್ನು ನಾಟಿ ಮಾಡಿ ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಲಾಗುತ್ತಿದೆ ಎಂದು ಹೇಳಿದರು.
ರೈತ ಮುಂಖಡ ಚನ್ನಾರೆಡ್ಡಿ ಮಾತನಾಡಿ, ರೈತರು ಕೃಷಿ ವಿಜ್ಞಾನಗಳ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಂಡು ವೈಜ್ಞಾನಿಕ ತಂತ್ರಜ್ಞಾನಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿ ಹೆಚ್ಚಿನ ಲಾಭ ಪಡೆಯಲು ಸಹಕಾರವಾಗುತ್ತದೆ ಎಂದು ಹೇಳಿದರು.
ಡಾ| ಪ್ರಶಾಂತ ಮಾತನಾಡಿ, ಮಾವಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಬಾಧೆ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದರು. ರೈತರೊಂದಿಗೆ ತೋಟಗಾರಿಕೆ ಬಗ್ಗೆ ಹಾಗೂ ವಿಶೇಷವಾಗಿ ಮಾವಿನ ಬಗ್ಗೆ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಪ್ರಗತಿಪರ ರೈತರಾದ
ಜಗನ್ನಾಥ ರೆಡ್ಡಿ ಚಿಂತನಪಲ್ಲಿ, ಮೊಹೀನ್ ಪಟೇಲ್ ಹೊಸಳ್ಳಿ, ಸೂಗಪ್ಪ ಪಾಟೀಲ ಗಣಪೂರು ಮತ್ತು ಶಾಂತಾಕುಮಾರಿ ಯಾದಗಿರಿ ಭಾಗವಹಿಸಿ ತರಬೇತಿ ಲಾಭ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.