ಭಾರತೀಯ ಪರಂಪರೆಯಲ್ಲಿ ಕಲೆಗಿದೆ ವಿಶೇಷ ಸ್ಥಾನ
ಜಾನಪದ ಸಾಹಿತ್ಯದಲ್ಲಿ ಅಡಗಿವೆ ನೈತಿಕ ಮೌಲ್ಯಗಳು
Team Udayavani, Jun 23, 2019, 3:59 PM IST
ಯಾದಗಿರಿ: ಸಣ್ಣ ಸಂಬರದಲ್ಲಿ ಮೈಸಾಸೂರ ಮರ್ಧನಾ ದೊಡ್ಡಾಟ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಲಾವಿದ ಎಸ್.ಎಲ್. ತೋರಣಕರ್ ಮಾತನಾಡಿದರು.
ಯಾದಗಿರಿ: ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಜಾನಪದ, ನಾಟಕಗಳಿಗೆ ಹಾಗೂ ಯಕ್ಷಗಾನ ಬಯಲಾಟದಂತಹ ಜಾನಪದ ಕ್ಷೇತ್ರದ ಕಲೆಗಳಿಗೆ ಎಲ್ಲಿಲ್ಲದ ಸ್ಥಾನ-ಮಾನ ಇದೆ ಎಂದು ಕಲಾವಿದ ಎಸ್.ಎಲ್. ತೋರಣಕರ್ ಹೇಳಿದರು.
ತಾಲೂಕಿನ ಸಣ್ಣ ಸಂಬರದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ವೀಣಾಶ್ರೀ ಸಂಗೀತ ಹಾಗೂ ವಿವಿಧೊದ್ದೇಶ ಸೇವಾ ಸಂಸ್ಥೆ ಹಾಗೂ ದಿ| ಹಳ್ಳಾ ವೆಂಕಟಮ್ಮ ಸ್ವರಮಧುರಾ ಸಂಗೀತ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೈಸಾಸೂರ ಮರ್ಧನಾ ದೊಡ್ಡಾಟ ತರಬೇತಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲೆ ಉಳಿಸುವ ಕರ್ತವ್ಯ ನಮ್ಮದಾಗಿದೆ. ಜಾನಪದದಲ್ಲಿ ಬರುವ ಅನೇಕ ಬಡ ಕಲಾವಿದರು, ಬಡತನ, ಅನಕ್ಷರತೆ, ಆರ್ಥಿಕ ಪರಿಸ್ಥಿತಿ, ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಜಾನಪದ ಕಲೆ ಬಿಟ್ಟು ಬೇರೆ ಉದ್ಯೋಗಗಳತ್ತ ಮಾರು ಹೋಗುತ್ತಿದ್ದಾರೆ. ನಾವೆಲ್ಲರೂ ಈ ಕಲೆಗಳನ್ನು ಉಳಿಸಿ-ಬೆಳೆಸಬೇಕಾಗಿದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಕೃತಿ ತರಬೇತಿ ನೀಡಬೇಕು ಎಂದು ಹೇಳಿದರು.
ರಮಾದೇವಿ ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ದೇವರು, ಧರ್ಮ, ಭಯ, ಭಕ್ತಿ ನೈತಿಕ ಮೌಲ್ಯಗಳು ಅಡಗಿವೆ, ಜಾನಪದ ಕಲಾವಿದರು ಯಾವುದೇ ವಿಶ್ವ ವಿದ್ಯಾಲಯದಿಂದ ಅಭ್ಯಾಸ ಮಾಡದೇ ಸಂದರ್ಭಕ್ಕೆ ತಕ್ಕಂತೆ ಸ್ವತಃ ಜಾನಪದಗಳನ್ನು ಹಾಡುತ್ತಾರೆ. ಅವರ ಕಲೆ ಈಗ ನಶಿಸಿ ಹೋಗುತ್ತಿದ್ದು, ಅಗತ್ಯ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಬಸರೆಡ್ಡಿ ಮಾತನಾಡಿ, ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ದೇಶಿ ಸಂಸ್ಕೃತಿ ಬೆಳೆಸಬೇಕು, ಜಾನಪದ ಕಲೆಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ರೈತರು ರಾಶಿ ಮಾಡುವಾಗ ರಾಶಿ ಹಾಡು ಹಾಡುವುದು, ಮೊಹರಂ ಪದ, ತಾಯಿ ಮಗುವಿಗೆ ಹಾಲುಣಿಸುವಾಗ ಜೋಗುಳ ಪದ, ಕಟ್ಟಿ ಹಾಡುವಾಗ ಅದರ ಸವಿ ಸವೆದು ಮಗು ನಿದ್ರಗೆ ಜಾರುತ್ತಿತ್ತು. ಇಂತಹ ಕಲೆಗಳನ್ನು ಉಳಿಸಬೇಕು. ಅಖೀಲ ಕರ್ನಾಟಕ ಜಾನಪದ ಲೋಕದಲ್ಲಿ ಕಟ್ಟಿರುವ ಗೆಜ್ಜೋತ್ಸವ ಎಂಬ ಕಾರ್ಯಕ್ರಮಗಳನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಾಧ್ವಾರ ಗ್ರಾಪಂ. ಅಧ್ಯಕ್ಷೆ ಶಕುಂತಲಾ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ತೋರಣಕರ ಗ್ರಾಪಂ ಅಧ್ಯಕ್ಷ ಶರಣಪ್ಪ ಲಕ್ಷ್ಮಣ, ಸಂಜೀವಕುಮಾರ ಜುಮ್ಮಾ, ಸಿದ್ರಾಮರಡ್ಡಿ ಪಳ್ಳಾ, ಪ್ರಕಾಶ ಅಂಗಡಿ ಕನ್ನಳ್ಳಿ, ನಾಗಪ್ಪ, ಮನ್ಯಮ್ಮ ರಾಘವೇಂದ್ರ, ಶಾಂತಪ್ಪ ಕಾನಳ್ಳಿ ವಕೀಲರು, ದೊಡ್ಡಪ್ಪಗೌಡ, ತಾಯಪ್ಪ ಬದ್ದೇಪಲ್ಲಿ, ವೆಂಕಟೇಶ ಮೇತ್ರೆ, ಗುರುನಾಥರೆಡ್ಡಿ, ಅನಂತರೆಡ್ಡಿ, ನಿಂಗಣ್ಣ ಪೂಜಾರಿ, ರಾಮಚಾರಿ ಶಿಲ್ಪಾಕಲೆ, ಬಿ.ಸಿ. ಪಾಟೀಲ, ಹಣಮಂತ ವಂಕಸಂಬರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.