ಬಂಡವಾಳಶಾಹಿ ಕಾಂಗ್ರೆಸ್-ಬಿಜೆಪಿಗೆ ತಕ್ಕ ಪಾಠ ಕಲಿಸಿ
ಜಿಎಸ್‌ಟಿಯಿಂದಾಗಿ ಸಹಸ್ರಾರು ಸಣ್ಣ ಉದ್ಯಮಗಳು ದಿವಾಳಿ
Team Udayavani, Apr 19, 2019, 1:44 PM IST
ಯಾದಗಿರಿ: ಗಾಂಧಿ ವೃತ್ತದಲ್ಲಿ ನಡೆದ ಎಎಸ್‌ಯುಸಿಐ ಪಕ್ಷದ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೆ.ಸೋಮಶೇಖರ ಮಾತನಾಡಿದರು.
ಯಾದಗಿರಿ: ದೇಶದಲ್ಲಿ ಬಂಡವಾಳಶಾಹಿಗಳ ಪರವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಎಸ್‌ಯುಐಸಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್.ವಿ. ದಿವಾಕರ್ ಹೇಳಿದರು.
ನಗರದ ಗಾಂಧಿ ಧಿವೃತ್ತದಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಅಭ್ಯರ್ಥಿ ಕೆ. ಸೋಮಶೇಖರ ಪರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ-2ರ ದುರಾಡಳಿತ, 2ಜಿ ತರಂಗ, ಕಾಮನ್‌ವೆಲ್ತ್ ಗೇಮ್ ಹಗರಣ ಹೀಗೆ ಹಲವಾರು ಹಗರಣಗಳಿಂದ ಬೇಸತ್ತ ಜನರು ಆಕ್ರೋಶ ಮತ್ತು ಅಬ್ಬರದ ಪ್ರಚಾರದಿಂದ ಅಚ್ಛೇ
ದಿನ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನಂತರ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಏಜೆಂಟ್‌ನಂತೆ ವರ್ತಿಸಿದೆ ಎಂದು ದೂರಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ನೋಟು
ಬ್ಯಾನ್‌ನಿಂದಾಗಿ 4 ಕೋಟಿಗೂ ಅಧಿಕ ಉದ್ಯೋಗ ನಷ್ಟವಾಗಿರುವುದನ್ನು ಮುಚ್ಚಿಡಲಾಗಿದೆ. ಜಿಎಸ್ ಟಿಯಿಂದಾಗಿ ಸಹಸ್ರಾರು ಸಣ್ಣ ಉದ್ಯಮಗಳು ದಿವಾಳಿಯಾಗಿವೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿ ಪ್ರಕಾರ 2017-18ರಲ್ಲಿ ನಿರುದ್ಯೋಗ ಪ್ರಮಾಣ ಶೇ. 6.1ರಷ್ಟು ಹೆಚ್ಚಳವಾಗಿವೆ. ಇದು ಕಳೆದ
45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ದಾಖಲಾಗಿದೆ ಎಂದು ಹೇಳಿದರು. ಹೋರಾಟದ ಹಿನ್ನೆಲೆ ಇರುವ ದುಡಿಯುವ, ಕಾರ್ಮಿಕ ವರ್ಗದ ನೈಜ ಪ್ರತಿನಿಧಿ ಎಸ್‌ಯುಸಿಐ ಕಮ್ಯನಿಸ್ಟ್‌ದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಅಭ್ಯರ್ಥಿ ಕೆ. ಸೋಮಶೇಖರ ಮಾತನಾಡಿ, ನಮ್ಮ ಪಕ್ಚದ ಹಲವು ಹೋರಾಟಗಳಿಗೆ ದೇಶದ ಸ್ವಾತಂತ್ರ್ಯ ಹೋರಟಗಾರರು, ಮಹಾನ್ ಕ್ರಾಂತಿಕಾರಿಗಳ ಆದರ್ಶವೇ ಸ್ಫೂರ್ತಿ. ಹಾಗಾಗಿ ಪಕ್ಷಕ್ಕೆ ಚುನಾವಣೆ
ಒಂದು ಹೋರಾಟದ ಭಾಗ. ತನ್ನನ್ನು ಗೆಲ್ಲಿಸಿದ್ದಲ್ಲಿ ಈ ಭಾಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಗಟ್ಟಿಯಾಗಿ ಎತ್ತಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಡಿ.ಉಮಾದೇವಿ, ಶರಣಗೌಡ ಗೂಗಲ್, ಶರಣಪ್ಪ ಉದಾºಲ, ಸದಸ್ಯ ರಾಮಲಿಂಗಪ್ಪ ಬಿ.ಎನ್., ಸೈದಪ್ಪ ಎಚ್.ಪಿ., ಜಮಾಲ್‌ಸಾಬ್, ಎಚ್.ಜಿ. ದೇಸಾಯಿ, ಸಿದ್ದಲಿಂಗ ಬಾಗೇವಾಡಿ, ಎಚ್.ಜಿ. ದೇಸಾಯಿ, ಸುಭಾಷ್‌ಚಂದ್ರ, ಭರತಕುಮಾರ, ಸುನೀಲ, ಶಿವಬಾಳಮ್ಮ, ಮಹಾದೇವಿ ಶೋಭಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.