ಮೋದಿ ಅಭಿವೃದ್ಧಿ ಕಾರ್ಯ ಮುಂದಿಡಲಿ
Team Udayavani, Apr 20, 2019, 3:09 PM IST
ಕೆಂಭಾವಿ: ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯ ಪಟ್ಟಿ ಮಾಡಿ ಜನರ ಮುಂದಿಡಲಿ. ಅವರಿಗೆ ಬೇಕಿದ್ದರೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಪಟ್ಟಿ ಮಾಡಿ ಜನರಿಗೆ ನೀಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಗುತ್ತಿಬಸವಣ್ಣ ಗ್ರಾಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ ಪರ ಮತಯಾಚಿಸಿ ಅವರು ಮಾತಾನಾಡಿದರು.
ಈ ಹಿಂದೆ ನಮ್ಮ ಸರ್ಕಾರ ಸಾಕಷ್ಟು ಹೇಳಿಕೊಳ್ಳುವಂತಹ ಹಾಗೂ ಬಡ ಜನರಿಗೆ ಅನುಕೂಲವಾಗುವಂತಹ ಹಲವು ಅಭಿವೃದ್ಧಿ ಕೆಲಸ ಮಾಡಿದೆ. ಆದರೆ ಮೋದಿ ಐದು ವರ್ಷದ ಅವ ಧಿಯಲ್ಲಿ ನೋಟ್‌ಬ್ಯಾನ್ ಮಾಡಿ ಬಡ ಜನರು ಕೆಲಸ ಬಿಟ್ಟು ಬ್ಯಾಂಕ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣಕ್ಕಾಗಿ ಪರದಾಡುವ ಪರಿಸ್ಥಿತಿಗೆ ತಂದೊಡ್ಡಿದ್ದಾರೆ. ಜಿಎಸ್‌ಟಿ ಜಾರಿಗೆಗೊಳಿಸುವ ಮೂಲಕ ಸಗಟು ವ್ಯಾಪಾರಿಗಳಿಗೆ ತೊಂದರೆ ನೀಡಿರುವ ಕೆಲಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಡ ಜನರಿಗೆ ಯಾವುದೇ ಉಪಯುಕ್ತ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಬಾರಿ ಮತ್ತೊಮ್ಮೆ ಕ್ಷೇತ್ರದ ಜನರು ಬಿ. ವಿ. ನಾಯಕ ಅವರಿಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಬಿ. ವಿ. ನಾಯಕ ಮಾತನಾಡಿ, ಹಸಿವು ಮುಕ್ತ ಕರ್ನಾಟಕ ಮಾಡಲು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅನ್ನಭಾಗ್ಯ ಯೋಜನೆ, ಮಹಿಳಾ ಸಾಕ್ಷರತಾ ಹೆಚ್ಚಿಸಲು ಪದವಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಯೋಜನೆ, ಎಸ್‌ಸಿ,ಎಸ್‌ಟಿ ಪದವಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲಕ್ಕಾಗಿ
ಉಚಿತ ಲ್ಯಾಪ್‌ಟಾಪ್ ವಿತರಣೆ, ಎಸ್‌ಇಪಿಟಿಎಸ್‌ಪಿ ಯೋಜನೆಯಡಿ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.
ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದೆ.
ಪಕ್ಷದ ಸಾಧನೆ ಗುರುತಿಸಿ ನನಗೆ ಮತ ನೀಡಿ ಆರಿಸಿ ಕಳುಹಿಸಿ ಎಂದು ಮನವಿಮಾಡಿದರು. ಮುಖಂಡರಾದ ಶಂಕ್ರಣ್ಣ ವಣಿಕ್ಯಾಳ, ಕಿಶನ್ ರಾಠೊಡ, ಬಸನಗೌಡ ಯಾಳಗಿ, ಅಯ್ಯಪ್ಪಗೌಡ ವಂದಗನೂರ, ಸೋಮನಗೌಡ ವಂದಗನೂರ, ಶಾಂತಯ್ಯ ಹಿರೇಮಠ, ಶಿವನಗೌಡ ಬೋಮ್ಮನಳ್ಳಿ, ಗುತ್ತಪ್ಪಗೌಡ ಯಕ್ತಾಪುರ, ಗುರಣ್ಣಗೌಡ ಆಲ್ಹಾಳ, ರಂಗನಾಥ ಮಲ್ಕಾಪುರ, ಶರಣಗೌಡ ಹೊಸಮನಿ, ಸಿದ್ದನಗೌಡ ಬೆಕಿನಾಳ, ಮಹಾಂತಗೌಡ ವಂದಗನೂರ, ರುದ್ರಗೌಡ ರಬನಳ್ಳಿ, ಲಾಲಪ್ಪ ಹೊಸಮನಿ, ಬಸವರಾಜ ದೊಡ್ಡಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.