ಎರಡು ಬಾರಿ ಸರ್ವೇ: ರೈತ ತಬ್ಬಿಬ್ಬು
Team Udayavani, May 19, 2019, 1:36 PM IST
ಯಾದಗಿರಿ: ಧರ್ಮಪುರ ಗ್ರಾಮದ ರೈತರ ಹೊಲ ಅಳೆಯಲು ಆಗಮಿಸಿದ್ದ ಸಿಬ್ಬಂದಿ.
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಧರಂಪುರ ಗ್ರಾಮದ ಹೊಲದ ಸರ್ವೇ ಮಾಡಲು ನಿಯುಕ್ತಿಗೊಂಡ ಅಧಿಕಾರಿ ಬದಲಿಗೆ ಬೇರೊಬ್ಬ ಅಧಿಕಾರಿ ಸರ್ವೇ ಮಾಡಿ 12 ಸಾವಿರ ರೂ. ರೈತರಿಂದ ವಸೂಲಿ ಮಾಡಿಕೊಂಡು ಹೋಗಿದ್ದ ಕುರಿತು ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ದೂರು ಸಲ್ಲಿಸಿದ ಮರುದಿನವೇ ಮತ್ತೂಮ್ಮೆ ಸರ್ವೇ ನಡೆದಿದೆ.
ಗ್ರಾಮದ ರೈತರು ಜಮೀನು ಅಳೆಯಲು ಈ ಹಿಂದೆಯೇ ಶುಲ್ಕವನ್ನು ಕಟ್ಟಿದ್ದರು. ಅಳತೆ ಮಾಡಬೇಕಿದ್ದ ಸಿಬ್ಬಂದಿ ಬದಲಿಗೆ ಬೇರೊಬ್ಬರು ಅಳೆದು ರೈತರಿಂದ ಹಣ ಪಡೆದಿರುವ ಕುರಿತು ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ದೂರು ನೀಡಿದ್ದರು.
ದೂರು ನೀಡಿದ ಮರುದಿನವೇ ಮತ್ತಿಬ್ಬರು ಸಿಬ್ಬಂದಿ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಹೊಲ ಅಳೆದುಕೊಡುತ್ತೇವೆ ಎಂದು ಬಂದಿದ್ದು ರೈತ ಸಣ್ಣ ಹಣಮಂತ ಮತ್ತು ಶಂಕ್ರಪ್ಪರನ್ನು ತಬ್ಬಿಬ್ಟಾಗುವಂತೆ ಮಾಡಿತು. ಬಳಿಕ ಅಧಿಕಾರಿಗಳು ಸಮಜಾಯಿಸಿ ನೀಡಿ ಹೊಲವನ್ನು ಅಳೆದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಅಮಾಯಕ ರೈತರನ್ನು ಸರ್ವೇ ಸಿಬ್ಬಂದಿ ಯಾಮಾರಿಸುತ್ತಿದ್ದು, ಹೆಚ್ಚಿನ ಹಣ ನೀಡದವರಿಗೆ ಸುಖಾ ಸುಮ್ಮನೆ ಟಿಪ್ಪಣಿ ಇಲ್ಲ, ಅಕಾರಬಂದ್ ಇಲ್ಲ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ಸರ್ವೇ ಮಾಡಬೇಕು. ಆದರೆ ಹಣಕ್ಕಾಗಿ ಇಲ್ಲದ ನೆಪ ಹೇಳಿ ಮೂರು ವರ್ಷಗಳಿಂದ ಸರ್ವೆ ಮಾಡದೇ ಸತಾಯಿಸುತ್ತಿದ್ದಾರೆ. ಅದೇ ಹಣ ಕೊಟ್ವರೆ ವಾರದೊಳಗೆಯೇ ಕೆಲಸವಾಗುತ್ತದೆ. ಹಣ ಕೊಡದಿದ್ದರೆ ವರ್ಷಗಟ್ಟಲೇ ಸತಾಯಿಸುತ್ತಾರೆ. ಇದು ನಿಲ್ಲಬೇಕು. ರೈತರಿಗೆ ಕಿರುಕುಳ ನೀಡಿದಲ್ಲಿ ಮುಂದೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು.
•ಟೋಕ್ರೆ ಕೋಲಿ,
ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.