ಸಂತ್ರಸ್ತರಿಗೆ ಧೈರ್ಯ-ನೆರವು ನೀಡಿದ ಕರವೇ
ಯಾವುದೇ ರಾಜಕೀಯ ಪಕ್ಷ ಮಾಡದ ಕೆಲಸ ಕರವೇ ಮಾಡಿದೆಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ
Team Udayavani, Nov 24, 2019, 5:37 PM IST
ಯಾದಗಿರಿ: ರಾಜ್ಯಾದ್ಯಂತ ಕರವೇ ಸಂಘಟಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಅಡಗಿದೆ. ಯಾವುದೇ ರಾಜಕೀಯ ಪಕ್ಷ ಮಾಡದ ಕಾರ್ಯವನ್ನು ಇಲ್ಲಿಯವರೆಗೆ ಕರವೇ ಮಾಡುತ್ತಿದ್ದು, ಇತ್ತೀಚೆಗೆ ರಾಜ್ಯದಲ್ಲಿ ನೆರೆ ಬಂದಾಗ ನೆರೆ ಸಂತ್ರಸ್ತರಲ್ಲಿ ಧೈರ್ಯ ತುಂಬುವ ಜೊತೆಗೆ ನೆರವಾಗಿ ಪ್ರತಿಯೊಂದು ಕುಟುಂಬಕ್ಕೆ ತಲಾ 25 ಸಾವಿರದಂತೆ ಇಲ್ಲಿಯವರೆಗೆ 49 ಲಕ್ಷ ರೂ. ನೀಡಲಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.
ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ನಡೆದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ಅತಿ ದೊಡ್ಡ ಸಂಘಟನೆಯಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಕಟ್ಟಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾವೇರಿ, ಮಹದಾಯಿ, ಭೀಮಾ ನದಿ ಹೋರಾಟದ ಭಾಗವಾಗಿ ಯಾವುದೇ ರಾಜಕೀಯ ಪಕ್ಷ ಮಾಡದ ರೀತಿಯಲ್ಲಿ ಹೋರಾಟ ನಡೆಸಿದ್ದೇವೆ. ಕಾರ್ಯಕರ್ತರು ಪೊಲೀಸರ ಲಾಟಿ ಏಟನ್ನು ಕೂಡ ಲೆಕ್ಕಿಸದೇ ಹೋರಾಟ ನಡೆಸಿ ಯಶಸ್ಸು ಖಂಡಿದ್ದೇವೆ ಎಂದರು.
ನ್ಯಾಯಾಲಯ ಆದೇಶ: ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಒಂದೇ ಸಂಘಟನೆಯಾಗಿದೆ. ಇದನ್ನು ಮಾನ್ಯ ನ್ಯಾಯಾಲಯವು ಕೂಡ ಒಪ್ಪಿ ನಮಗೆ ಆದೇಶ ನೀಡಿದೆ. ಯಾರಾದರೂ ಕರವೇ ಹೆಸರನ್ನು ದುರುಪಯೋಗ ಪಡಿಸಿಕೊಂಡರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಬಲಪಡಿಸಿ ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ಕಾರ್ಯಕರ್ತರಿಗೆ ಋಣಿ: ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸಂಘಟನೆ ಗಟ್ಟಿಯಾಗಿದೆ. ರಾಜ್ಯಾಧ್ಯಕ್ಷರ ಸಹಕಾರದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಕಟ್ಟಲಾಗುವುದು. ನಮ್ಮ ಕೈ ಬಲಪಡಿಸಿದ ಪ್ರತಿಯೊಬ್ಬ ಕಾರ್ಯಕರ್ತರಿಗೆ ನಾನು ಋಣಿ. ನನ್ನ ಕಾರ್ಯಕರ್ತರೇ ನನಗೆ ಜೀವಾಳವಾಗಿದ್ದಾರೆ. ಅವರಿಗೆ ಯಾವುದೇ ರೀತಿ ತೊಂದರೆಯಾದಲ್ಲಿ ನಾನು ಯಾವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ, ರಾಜ್ಯ ಸಂಚಾಲಕ ಸಂತೋಷ ಪಾಟೀಲ, ರಾಜ್ಯ ಉಪಾಧ್ಯಕ್ಷ ದಾ.ಪಿ. ಅಂಜನಪ್ಪ, ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷ ಸಹನಾ ಶೇಖರ, ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಅಬ್ಬಿಗೇರೆ ವಿನೋದ, ರಾಜ್ಯ ಕಾರ್ಯದರ್ಶಿ ಶಿವುಕುಮಾರ ನಾಟೇಕಾರ, ರಾಯಚೂರು ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಕಲಬುರಗಿ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಬೀದರ್ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್, ವಿಜಯಪುರ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ಭೀಮಾಶಂಕರ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ತೇಜರಾಜ ರಾಠೊಡ, ಚೌಡಯ್ಯ ಬಾವುರ, ರಾಜು ಚವ್ಹಾಣ, ಅಬ್ದುಲ್ ಚಿಗಾನೂರ, ಶಿವುಕುಮಾರ ಕೊಂಕಲ್, ಮಹಾವೀರ ಲಿಂಗೇರಿ, ಹಣಮಂತ ಖಾನಳ್ಳಿ, ಯಮನಯ್ಯ ಗುತ್ತೇದಾರ, ವೆಂಕಟೇಶ ರಾಠೊಡ, ಅರ್ಜುನ ಪವಾರ, ಸಿದ್ದಪ್ಪ ಕ್ಯಾಸಪನಳ್ಳಿ, ಸಾಹೇಬಗೌಡ ನಾಯಕ, ಸಿದ್ದಪ್ಪ ಕೂಯಿಲೂರ, ಭೀಮಣ್ಣ ಶಖಾಪುರ, ವೆಂಕಟೇಶ ಬೈರಮಡ್ಡಿ, ಭೀಮು ಮಡ್ಡಿ, ರಾಜು ಪಗಲಾಪುರ, ಭೀಮು ಬಸವಂತಪುರ, ನಾಗು ತಾಂಡೂರಕರ್ ಇತರರು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ನಿರೂಪಿಸಿದರು. ಬಸರೆಡ್ಡಿ ಅಭಿಷ್ಯಾಳ ಸ್ವಾಗತಿಸಿದರು. ಮಲ್ಲು ದೇವಕರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.