ಅಬಕಾರಿ ದಾಳಿ: ಕಲಬೆರಕೆ ಸೇಂದಿ, ಮೂರು ಆಟೋ ಜಪ್ತಿ
Team Udayavani, Jul 6, 2022, 5:48 PM IST
ಗುರುಮಠಕಲ್: ತಾಲೂಕಿನ ಅರಕೇರ(ಕೆ) ಗ್ರಾಮದಲ್ಲಿ ನೀರು ಸರಬರಾಜು ಘಟಕದ ಹತ್ತಿರ ಅಕ್ರಮ ಕಲಬೆರಕೆ ಸೇಂದಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಕಲಬೆರಕೆ ಸೇಂದಿ ಮತ್ತು ಮೂರು ಆಟೋ ಜಪ್ತಿ ಮಾಡಿದ್ದಾರೆ.
33 ಲೀಟರ್ ಕಲಬೆರಕೆ ಸೇಂದಿ ಸಹ ವಶಪಡಿಸಿಕೊಳ್ಳಲಾಗಿದೆ. ಒಟ್ಟು 5,41,450 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು, 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರವೀಣಕುಮಾರ, ಮಹ್ಮದ ರಫೀ, ನೀಲಕಂಠ, ಶರಣಬಸಪ್ಪ, ಶರೀಫ್, ಶೇಖರ, ದೊಂಡಿಬಾ, ಶಂಕರ, ಗುರುನಾಥ, ಅನಿಲ್, ಸುಭಾನಿ, ನಾಗರಾಜ, ಜಟ್ಟೆಪ್ಪ ಎಂಬವರನ್ನು ಬಂಧಿಸಲಾಗಿದೆ.
ಅಬಕಾರಿ ನಿರೀಕ್ಷಕರು ಕೇದಾರನಾಥ ಎಸ್ .ಟಿ., ಅಬಕಾರಿ ಉಪ ನಿರೀಕ್ಷಕರಾದ ಶರಣು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ನಂದಿಗೌಡ, ಬಸವರಾಜ ಇದ್ದರು. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.