ಕ್ಷೌರಿಕರಿಗೆ 500 ಮಾಸ್ಕ್ ವಿತರಣೆ
Team Udayavani, May 17, 2020, 6:10 AM IST
ಸುರಪುರ: ಕೋವಿಡ್ ಸಂದರ್ಭದಲ್ಲೂ ಕ್ಷೌರಿಕರ ವೃತ್ತಿಗೆ ಅನುಮತಿ ನೀಡಲಾಗಿತ್ತು. ಆದರೆ ನಗರದಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪುನಃ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಅಂಗಡಿಗಳು ಶೀಘ್ರದಲ್ಲಿ ಆರಂಭವಾಗಬಹುದು ಎಂದು ಪೌರಾಯುಕ್ತ ಜೀವನ ಕಟ್ಟಿಮನಿ ಹೇಳಿದರು.
ನಗರಸಭೆ ವತಿಯಿಂದ ಶನಿವಾರ ಕಚೇರಿ ಎದುರು ಕ್ಷೌರಿಕರಿಗೆ 500 ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿ, ವೃತ್ತಿಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ. ಕಾರಣ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾನಿಟೈಸರ್ ಬಳಸಿ. ಆರೋಗ್ಯದ ಬಗ್ಗೆ ಜಾಗೃತರಾಗಿರಿ ಎಂದು ತಿಳಿಸಿದರು.
ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಮಾತನಾಡಿ, ನಗರಸಭೆ ಉಚಿತವಾಗಿ ಮಾಸ್ಕ್ ವಿತರಿಸಿ ಸಹಾಯ ನೀಡಿದೆ. ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸುತ್ತೇವೆ. ಕೆಲಸದಲ್ಲಿ ಅಂತರ ಕಾಯ್ದುಕೊಳ್ಳುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ. ಪೊಲೀಸ್ ಇಲಾಖೆಗೆ ಪಿಪಿಇ ಕಿಟ್ ಮತ್ತು ಗ್ಲೌಸ್ ನೀಡಲು ಮನವಿ ಮಾಡಿದ್ದೇವೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ಸರ್ಕಾರ ಕ್ಷೌರಿಕರಿಗೆ ಪರಿಹಾರ ಘೋಷಿಸಿ ನೆರವಿನ ಹಸ್ತ ಚಾಚಿದೆ. ಅದೇ ರೀತಿ ಸರ್ಕಾರ ಕ್ಷೌರಿಕರಿಗೆ 10 ಲಕ್ಷ ರೂ. ವಿಮೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಸವಿತಾ ಸಮಾಜದ ರಾಜ್ಯ ಘಟಕದ ನಿರ್ದೇಶಕ ಸೂರ್ಯಕಾಂತ ಚಿನ್ನಾಕಾರ, ಚಂದ್ರಾಮ ಮುಂದಿನಮನಿ, ಯಲ್ಲಪ್ಪ ದುಗನೂರ, ರಾಮು ದೇವಿಕೇರಿ, ಗೋಪಾಲ ಬಿಳಾರ, ಗೋವಿಂದ ಚಿನ್ನಾಕಾರ, ಬಸವರಾಜ ಗೌಡಗೇರಿ, ರಾಘವೇಂದ್ರ ಕಡಬೂರ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.