ನಿಯಮ ಮೀರಿ ಪ್ರಚಾರ ಸಾಮಗ್ರಿ ಮುದ್ರಿಸಿದರೆ 6 ತಿಂಗಳ ಜೈಲು
Team Udayavani, Mar 31, 2018, 3:56 PM IST
ಯಾದಗಿರಿ: ಮುದ್ರಕರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಬೇಕು. ಇಲ್ಲದಿದ್ದರೆ 2 ಸಾವಿರ ರೂ. ದಂಡ ಕಟ್ಟುವುದರ ಜೊತೆಗೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಪ್ರಿಂಟಿಂಗ್ ಪ್ರಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಪ್ರಚಾರದ ಬ್ಯಾನರ್, ಫ್ಲೆಕ್ಸ್, ಪೋಸ್ಟರ್, ಕರಪತ್ರ, ಪುಸ್ತಕ, ಕಿರುಹೊತ್ತಿಗೆ ಮುಂತಾದವುಗಳನ್ನು ಮುದ್ರಣ ಮಾಡುವ ಮುನ್ನ ಮುದ್ರಕರು ಸಂಬಂಧಿಸಿದ ಕ್ಷೇತ್ರ ಚುನಾವಣಾಧಿಕಾರಿಗಳ ಅನುಮತಿ ಪಡೆದಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಮಾತ್ರ ಮುದ್ರಣ ಮಾಡಬೇಕು ಎಂದು ಸೂಚಿಸಿದರು.
ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ 127(ಎ)ರನ್ವಯ ಚುನಾವಣಾ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರು, ಪ್ರಕಾಶಕರ ಹೆಸರು, ವಿಳಾಸ ಹಾಗೂ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಜೊತೆಗೆ ಮುದ್ರಣ ಮಾಡುವ ಮುನ್ನ ಪ್ರಕಾಶಕರಿಂದ ಘೋಷಣಾ ಪತ್ರ (ಅನುಬಂಧ-ಎ) ಪಡೆಯಬೇಕು. ಘೋಷಣಾ ಪತ್ರಕ್ಕೆ ಪ್ರಕಾಶಕನನ್ನು ಚೆನ್ನಾಗಿ ಬಲ್ಲ ಇಬ್ಬರು ವ್ಯಕ್ತಿಗಳಿಂದ ದೃಢೀಕರಣ ಪಡೆಯಬೇಕು. ಮುದ್ರಣದ ನಂತರ ಘೋಷಣಾ ಪತ್ರದೊಂದಿಗೆ ಪ್ರಚಾರ ಸಾಮಗ್ರಿಯ ನಾಲ್ಕು ಪ್ರತಿಯನ್ನು
ಮೂರು ದಿನದೊಳಗೆ ಪ್ರಿಂಟಿಂಗ್ ಪ್ರಸ್ ಮಾಲೀಕರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ ಎಂದು ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.
ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ಇವರ ಪರವಾಗಿ ಬೇರೆ ಯಾರೇ ಪ್ರಕಟಣೆ ಹೊರಡಿಸಲಿ, ಸಾಮಗ್ರಿ ಮುದ್ರಣ ವೆಚ್ಚಕ್ಕೆ ಸಂಬಂಧಿಸಿದ ಬಿಲ್ ರಶೀದಿ ಅಥವಾ ಚೆಕ್ ( 20 ಸಾವಿರಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಚೆಕ್)ಅನ್ನು ಆಯಾ ಕ್ಷೇತ್ರದ ಚುನಾವಣಾಧಿ ಕಾರಿಗೆ ಸಲ್ಲಿಸಬೇಕು. ಬಳಿಕ, ಅವರು ಪರಿಶೀಲನೆಗೆ ಖರ್ಚು-ವೆಚ್ಚ ಸಮಿತಿ ( ಕ್ಷೇತ್ರ)ಗೆ ಕಳುಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಲರ್ ಝೆರಾಕ್ಸ್ ಸೆಂಟರ್ ಸೇರಿದಂತೆ ಚುನಾವಣಾ ಪ್ರಚಾರ ಸಾಮಾಗ್ರಿ ಮುದ್ರಿಸುವ ಎಲ್ಲರೂ ಈ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಅವರು ತಾಕೀತು ಮಾಡಿದರು.
ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆ ಮುಂತಾದವುಗಳ ಬಗ್ಗೆ ಪ್ರಚೋದನಾತ್ಮಕ ವಿಷಯಗಳನ್ನು ಪ್ರಕಟಿಸಕೂಡದು. ಒಂದು ವೇಳೆ, ಪ್ರಕಟಿಸಿ, ಸಮಾಜದ ಶಾಂತಿಗೆ ಭಂಗ ಉಂಟು ಮಾಡಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೈದ್ರಾಬಾದ್ ಮುಂತಾದೆಡೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿಕೊಂಡು ಬಂದು, ಅವುಗಳಲ್ಲಿ ಸ್ಥಳೀಯ ಪ್ರಿಂಟಿಂಗ್ ಪ್ರಸ್ ಹೆಸರು ಹಾಕಿರುವುದು ಈ ಹಿಂದೆ ಕಂಡು ಬಂದಿದೆ ಎಂದು ಪ್ರಿಂಟಿಂಗ್ ಪ್ರಸ್ ಮಾಲೀಕರು ಈ ಸಂದರ್ಭದಲ್ಲಿ ಗೋಳು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಗಡಿಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ತಪಾಸಣೆ ನಡೆಯುತ್ತದೆ. ಆದಾಗ್ಯೂ ಇಂತಹ ಪ್ರಕರಣಗಳು ಕಂಡು ಬಂದಲ್ಲಿ, ಮಾಹಿತಿ ನೀಡಿ ಎಂದು ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿ ಕಾರಿ ಪ್ರಕಾಶ್ ಜಿ. ರಜಪೂತ ಸೇರಿದಂತೆ ಪ್ರಿಂಟಿಂಗ್ ಪ್ರಸ್ ಮಾಲೀಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.