64ನೇ ಧಮ್ಮ ಚಕ್ರ ಪ್ರವರ್ತನಾ ದಿನ
Team Udayavani, Oct 28, 2020, 4:06 PM IST
ಯಾದಗಿರಿ: ನಗರದ ಅಂಬೇಡ್ಕರ್ ಭವನದಲ್ಲಿ ಬೋಧಿ ಸತ್ವ ಡಾ| ಬಾಬಾ ಸಾಹೇಬ ಅಂಬೇಡ್ಕರ್ ಅವರ 64ನೇ ಧಮ್ಮಚಕ್ರ ಪ್ರವರ್ತನಾ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಶೀಲ ಧ್ವಜಾರೋಹಣನೆರವೇರಿಸಿದ ಪ್ರಕಾಶ ಯಾತನೂರು ಮಾತನಾಡಿ, ಎಲ್ಲರೂ ಶಿಕ್ಷಕರಾಗಿ, ಎಲ್ಲರೂ ಇತಿಹಾಸಬಲ್ಲವರಾಗಬೇಕು. ಭಗವಾನ್ ಬುದ್ಧ ಡಾ| ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಯಲ್ಲಿಮುನ್ನಡೆಯಲು ಸಂಕಲ್ಪ ಮಾಡಬೇಕಾದ ದಿನ. ಡಾ| ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿ 64ವರ್ಷಗಳಾದವು. ಅವರ ಆಶಯ ಈಡೇರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಶರಣು ನಾಟೇಕರ್ 22 ಪ್ರತಿಜ್ಞೆಗಳನ್ನು ಸಭಿಕರಿಗೆ ಬೋ ಧಿಸಿದರು. ನಗರಸಭೆ ಸದಸ್ಯೆ ಬಸಮ್ಮ ಕುರಕುಂಬಳ ನೀಲಿ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಡಾ| ಭಗವಂತ ಅನವಾರ, ಎಸ್.ಪಿ. ನಾಡೇಕರ್, ಮರೆಪ್ಪ ಚಟ್ಟೇರಕರ್, ಶಾಂಸನ್ ಮಾಳಿಕೇರಿ, ಬಸಲಿಂಗಪ್ಪ ಕುರಕುಂಬಳ, ನರೇಂದ್ರ ಅನವಾರ, ನಿಂಗಪ್ಪ ಬೀರನಾಳ, ಶಿಕ್ಷಕ ಭೀಮರಾಯ, ಗುರುಲಿಂಗಪ್ಪ ಕಟ್ಟಿಮನಿ, ಕೈಲಾಸ ಅನವಾರ, ಚಂದ್ರಕಾಂತ ಚಲವಾದಿ, ಮಲ್ಲಿಕಾರ್ಜುನ ಇಟೆ, ಗೋಪಾಲ ತಳಿಗೇರಿ, ಮಲ್ಲಿನಾಥ ಸುಂಗಲ್ಕರ್, ಪ್ರಭು ಬುಕ್ಕಲ್, ಶರಣಪ್ಪ ಕೊಯುಲೂರು, ಅವಿನಾಶ ಅನವಾರ, ಸಂತೋಷ ಕುರಕುಂಬಳ, ಗೌತಮ ಅರಿಕೇರಿ, ಭೀಮು ಸುಂಗಲ್ಕರ್, ಸಂಪತ್ ಚಿನ್ನಾಕಾರ ಇತರರು ಇದ್ದರು.
ಮಾನ್ಪಡೆ ಇಲ್ಲದ ಚಳವಳಿಗೆ ಬಲವಿಲ್ಲ :
ಶಹಾಪುರ: ಬಿಡುವಿಲ್ಲದ ಹೋರಾಟ ನಡೆಸುತ್ತಲೇ ನಮ್ಮನ್ನಗಲಿದ ಮಾರುತಿ ಮಾನ್ಪಡೆಯವರ ಸಿದ್ಧಾತ, ತತ್ವಾದರ್ಶ ಎಲ್ಲರಿಗೂ ಮಾದರಿ. ಮಾನ್ಪಡೆ ಅವರಿಲ್ಲದ ಚಳವಳಿಗೆ ಬಲವಿಲ್ಲದಂತಾಗಿದೆ ಎಂದು ರೈತ ಮುಖಂಡ ಚನ್ನಪ್ಪ ಆನೆಗುಂದಿ ಕಳವಳ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಹೋರಾಟಗಾರ ಮಾರುತಿ ಮಾನ್ಪಡೆ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಅಸ್ಪೃಶ್ಯತೆ, ದಲಿತರ ಹಕ್ಕಿಗಾಗಿ, ಅಸಮಾನತೆ, ಶೋಷಣೆ ವಿರುದ್ಧ ಹಾಗೂ ಕೂಲಿಕಾರ್ಮಿಕರು, ರೈತರ ಪರವಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಅವರ ಕಾರ್ಯಕ್ಷಮತೆ ಮೆಚ್ಚುವಂತಹದ್ದು. ತಮ್ಮ ಇಡೀ ಜೀವನ ಸಾಮಾಜಿಕ ಕಾರ್ಯ, ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಮುಡಿಪಿಟ್ಟ ಧೀ ಮಂತ ನಾಯಕ ಮಾರುತಿ ಮಾನ್ಪಡೆ ಎಂದು ಸ್ಮರಿಸಿದರು.
ಹಿರಿಯ ವಕೀಲರಾದ ಆರ್.ಎಂ. ಹೊನ್ನಾರಡ್ಡಿ ಮತ್ತು ಇಬ್ರಾಹಿಂಸಾಬ ಮಾತನಾಡಿ, ಮಾನ್ಪಡೆ ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೇ ಮಾನವೀಯ ಕಳಕಳಿಯುಳ್ಳವರಾಗಿದ್ದರು. ಹೋರಾಟದ ಮೂಲಕ ಜನಮನದಲ್ಲಿ ಬೆರೆತಿದ್ದರು ಎಂದು ಹೇಳಿದರು.
ಈ ವೇಳೆ ಸಾಹಿತಿ ಶಿವಣ್ಣ ಇಜೇರಿ, ಜೈಲಾಲ್ ತೋಟದಮನಿ, ಮಲ್ಲಯ್ಯ ಪೋಲಂಪಲ್ಲಿ, ಎಸ್.ಎಂ. ಸಾಗರ, ದಾವಲಸಾಬ್, ರಂಗಣ್ಣ ಹಯ್ನಾಳ, ಎಲ್‌ಐಸಿ ನೌಕರ ಸಂಘದ ಕಾರ್ಯದರ್ಶಿ ಸಂತೋಷ ಕುಮಾರ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಎಸ್.ಹಿರೇಮಠ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.