88.54 ಲಕ್ಷ ರೂ. ಕೊರತೆ ಬಜೆಟ್ ಮಂಡನೆ ಯಾದಗಿರಿ:
ಬೀದಿ ದೀಪಗಳ ನಿರ್ವಹಣೆ ಸೇರಿ ಇತರ ಕಾರ್ಯಕ್ರಮಗಳಿಗೆ ಹಣ ನಿಗದಿಪಡಿಸಲಾಗಿದೆ ಎಂದರು.
Team Udayavani, Apr 9, 2021, 7:12 PM IST
ಯಾದಗಿರಿ: ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪೂರಕ ಬಜೆಟ್ ಮಂಡಿಸಲಾಗಿದ್ದು, ಹಿಂದಿನ ಎಲ್ಲ ಅಭಿವೃದ್ಧಿ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುವ ಜತೆಗೆ ಈ ವರ್ಷ ಹಲವಾರು ಹೊಸ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ 2021-22ನೇ ಸಾಲಿಗೆ 25.78 ಕೋಟಿ ರೂ. ಗಾತ್ರದ
ಬಜೆಟ್ ಮಂಡಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಒಟ್ಟು 2490.06 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು, ಅಂದಾಜು 2578.60 ಲಕ್ಷ ಖರ್ಚಾಗಲಿದ್ದು 88.54 ಲಕ್ಷ ರೂ. ಕೊರತೆಯಾಗಲಿದ್ದು
ಹಿಂದಿನ ವರ್ಷಗಳ ಆಸ್ತಿಗೆ ತೆರಿಗೆ ಇತರ ತೆರಿಗೆ ವಸೂಲಿ ಮಾಡಿ ಕೊರತೆ ಸರಿದೂಗಿಸಲಾಗುವುದು. ಸರ್ವ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದಿಂದ
ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬಗಳಿಗೆ ಸಹಾಯಧನಕ್ಕೆ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದರು. ಬಜೆಟ್ ಮೇಲಿನ ಚರ್ಚೆ
ಆರಂಭಿಸುತ್ತಿದ್ದಂತೆ ಸದಸ್ಯೆ ಲಲಿತಾ ಅನಪೂರ ಮಾತನಾಡಿ, ಪತ್ರಕರ್ತರ ಕುಟುಂಬಗಳಿಗೆ ಸಹಾಯಧನ ವಿತರಣೆಗೆ ಯಾವ ಮಾನದಂಡ
ಅನುಸರಿಸಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಆರೋಗ್ಯ ಮತ್ತು ಅಪಘಾತ ಇತರ ಸಂಕಷ್ಟದ ಸಂದರ್ಭದಲ್ಲಿ ಸಹಾಯಧನ
ನೀಡಲಾಗುವುದು. ಇದಕ್ಕಾಗಿ ಈ ಬಜೆಟ್‌ನಲ್ಲಿ 5 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.
ವಿವಿಧ ವಾರ್ಡ್‌ಗಳಲ್ಲಿರುವ ಸಾರ್ವಜನಿಕ ಶೌಚಾಲಯ ಸ್ವತ್ಛತೆಗೆ, ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಅಲ್ಲದೇ ಅಂಗವಿಕಲರ ಅಭಿವೃದ್ಧಿಗಾಗಿ ಕಾರ್ಯಯೋಜನೆ ರೂಪಿಸಲಾಗಿದೆ. ವಾರ್ಡ್‌ಗಳ ಸ್ವತ್ಛತೆ, ನೀರು ಹಾಗೂ ಇತರ ಸಮಸ್ಯೆ ನೀಗಿಸಲು ಪ್ರತಿ ವಾರ್ಡ್‌ಗೆ 5 ಲಕ್ಷ ರೂ. ನಿಗ ಪಡಿಸಿ ಒಟ್ಟು 155.00 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಶುಲ್ಕ ಮತ್ತು ಪುಸ್ತಕಗಳಿಗಾಗಿ ಧನ ಸಹಾಯ ನೀಡುವುದು, ಉದ್ಯಾನವನ ನಿರ್ವಹಣೆ, ನಗರದ ಮುಖ್ಯ
ರಸ್ತೆಗಳಲ್ಲಿ ಸ್ವಾಗತ ಕಮಾನು ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ ಸೇರಿ ಇತರ ಕಾರ್ಯಕ್ರಮಗಳಿಗೆ ಹಣ ನಿಗದಿಪಡಿಸಲಾಗಿದೆ ಎಂದರು.
ಸರ್ಕಾರದ ಅನುದಾನದಲ್ಲಿ ಎಸ್‌ಎಫ್‌ಸಿ ವೇತನ, ಎಸ್‌ಎಫ್‌ಸಿ ವಿದ್ಯುತ್, ಎಸ್‌ಎಫ್‌ಸಿ ಮುಕ್ತನಿಧಿ, ಎಸ್ ಸಿಪಿ, ಟಿಎಸ್‌ಪಿ, ಕುಡಿವ ನೀರು ಪರಿಹಾರ ನಿಧಿ 15ನೇ
ಹಣಕಾಸು ಅನುದಾನ, ಇತರ ಅನುದಾನ ಈಗಾಗಲೇ ಸರ್ಕಾರದ ಮುಂಗಡ ಪತ್ರದಲ್ಲಿ ಯಾದಗಿರಿ ನಗರಸಭೆಗೆ ಹಂಚಿಕೆಯಾದ ಮೊತ್ತಕ್ಕನುಸಾರವಾಗಿ
ಸರ್ಕಾರದ ಅನುದಾನ ಒಟ್ಟು 1934 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕುಡಿವ ನೀರಿನ ಸಮಸ್ಯೆಗೆ ತ್ವರಿತಗತಿಯಲ್ಲಿ
ಸ್ಪಂದಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಉಪಾಧ್ಯಕ್ಷೆ ಪ್ರಭಾವತಿ ಎಂ. ಕಲಾಲ್, ಪೌರಾಯುಕ್ತ ಭೀಮಣ್ಣ
ನಾಯಕ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.
ಅಂದಾಜು 556.06 ಲಕ್ಷ ರೂ. ಆದಾಯ ನಿರೀಕ್ಷೆ
2021-22ನೇ ಸಾಲಿನಲ್ಲಿ ನಗರಸಭೆ ನಿಧಿ ಯಲ್ಲಿ ಆಸ್ತಿ ತೆರಿಗೆಯಿಂದ 300 ಲಕ್ಷ , ಮಳಿಗೆ ಬಾಡಿಗೆ 40.25 ಲಕ್ಷ , ಕಟ್ಟಡ ಪರವಾನಗಿ 8.57 ಲಕ್ಷ , ಪರವಾನಗಿ
ಶುಲ್ಕದಿಂದ 5 ಲಕ್ಷ, ಅಭಿವೃದ್ಧಿ ಕರದಿಂದ 3.11 ಲಕ್ಷ, ನೀರಿನ ತೆರಿಗೆ 10 ಲಕ್ಷ , ರಸ್ತೆ ಅಗೆತ ಶುಲ್ಕ 5 ಲಕ್ಷ, ಖಾತಾ ನಕಲು 6.03 ಲಕ್ಷ, ಆಸ್ತಿ ತೆರಿಗೆ ದಂಡ 12 ಲಕ್ಷ, ವರ್ಗಾವಣೆ ಶುಲ್ಕ 105.82 ಲಕ್ಷ, ನೋಂದಣಿ 2.10 ಲಕ್ಷ ಮತ್ತು ಜಾಹೀರಾತು ತೆರಿಗೆ 4 ಲಕ್ಷ ಎಸ್‌ಡಬ್ಲೂಎಂ, ಸೆಸ್ 17.12 ಲಕ್ಷ ರೂ. ಇತರ ಆದಾಯಗಳು ಸೇರಿ ಒಟ್ಟು 556.06 ಲಕ್ಷ ರೂ. ಅಂದಾಜು ಆದಾಯ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.