ನಾಗರಪಂಚಮಿಯಂದು ಚೇಳಿಗೆ ಹಾಲೆರೆದು ಜಾತ್ರೆ!
ಮೈಮೇಲೆ ಕೆಂಪು ಚೇಳುಗಳನ್ನು ಬಿಟ್ಟುಕೊಂಡು ವಿಶಿಷ್ಟ ಆಚರಣೆ!
Team Udayavani, Aug 3, 2022, 8:57 PM IST
ದೋಟಿಹಾಳ: ಸಾಮಾನ್ಯವಾಗಿ ರಾಜ್ಯದ ನಾಗರಪಂಚಮಿಯಂದು ನಾಗರ ಹಾವಿಗೆ ಮತ್ತು ಹಾವಿನ ವಿಗ್ರಹಕ್ಕೆ ಹಾಲು ಹಾಕುತ್ತಾರೆ ಆದರೆ ಈ ಗ್ರಾಮದಲ್ಲಿ ಮಾತ್ರ ಚೋಳುಗಳಿಗೆ ಹಾಲೆರೆದು ಹಬ್ಬ ಆಚರಿಸುತ್ತಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮಾಯಿ ಬೆಟ್ಟದ ಮೇಲೆ ಪ್ರತಿ ನಾಗರಪಂಚಮಿಯಂದು ಚೇಳುಗಳ ಹಾಲೆರೆಯದು ಜಾತ್ರೆಯಲ್ಲಿ ಚೇಳಿಗಳನ್ನು ಮೈಮೇಲೆ ಬಿಟ್ಟುಕೊಂಡು ಆರಾಧಿಸಿಸುತ್ತಾರೆ. ಈ ಚೋಳಿನ ಜಾತ್ರೆಗೆ ರಾಜ್ಯದ ವಿವಿಧ ಭಾಗದ ಜನರು ಸೇರಿದಂತೆ ಪಕ್ಕದ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಪಂಚಮಿ ದಿನ ಇಲ್ಲಿಗೆ ಆಗಮಿಸುತ್ತಾರೆ.
ಮಾಯಿ ಅಂದರೆ ಚೇಳುಗಳ ದೇವತೆ. ಜುಲೈ- ಆಗಸ್ಟ್ ತಿಂಗಳ, ಶ್ರಾವಣ ಮಾಸದ ನಾಗರಪಂಚಮಿಯಂದು ಇಡೀ ಬೆಟ್ಟದಲ್ಲಿ ಕೆಂಪು ಚೇಳುಗಳದ್ದೇ ಕಾರುಬಾರು. ಕಲ್ಲುಸಂದಿಗಳಲ್ಲಿರುವ ಚೇಳುಗಳನ್ನು ಹೊರ ತೆಗೆದು ಯುವಕರು, ಮಕ್ಕಳು, ಮಹಿಳೆಯರು, ಹಿರಿ-ಕಿರಿಯರು ಮೈಮೇಲೆಲ್ಲಾ ಬಿಟ್ಟುಕೊಂಡು ಹಬ್ಬ ಆಚರಿಸುತ್ತಾರೆ.
ಇದನ್ನೂ ಓದಿ: ಶಬರಿಮಲೆ, ಮಂತ್ರಾಲಯದಲ್ಲಿ ಛತ್ರ ಅಭಿವೃದ್ದಿಗೆ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
ಚೇಳುಗಳ ಜೊತೆ ಸರಸ: ಅಚ್ಚರಿ ಎಂದರೆ, ಈ ಜಾತ್ರೆಗೆ ಬರುವ ಬಹುತೇಕರಿಗೆ ಚೇಳು ಕಡಿಯುವುದೇ ಇಲ್ಲ. ಚೇಳುಗಳು ಮೈಮೇಲೆ ಹರಿದಾಡಿದ ಬಳಿಕ ಕೆಳಗೆ ಬಿಡುತ್ತಾರೆ. ಕೆಲವರಿಗೆ ಕಡಿದರೂ ಅಲ್ಲಿನ ‘ಆಧಾರ (ವಿಭೂತಿ) ಹಚ್ಚಿದರೆ ನೋವು ಮಾಯವಾಗಿ ವಿಷ ಇಳಿಯುತ್ತದೆ ಅನ್ನೋ ನಂಬಿಕೆಯಿದೆ.
-ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ, ಭೀಮಣ್ಣ ಬ ವಡವಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.