ರಾಧಾಕೃಷ್ಣನ್ ಆದರ್ಶ ಅಳವಡಿಸಿಕೊಳ್ಳಿ
Team Udayavani, Oct 1, 2018, 3:16 PM IST
ಗುರುಮಠಕಲ್: ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರಿಗೆ ಸಮರ್ಪಿಸಿ ಶಿಕ್ಷಕರು ದೇಶದ ನಿರ್ಮಾಪಕರು ಎಂದು
ತೊರಿಸಿಕೊಟ್ಟ ದೇಶದ ಅನನ್ಯ ರತ್ನಗಳಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬರಾಗಿದ್ದಾರೆ. ಅಂತಹ ಮಹಾನ್ ನಾಯಕರ ಆದರ್ಶಗಳನ್ನು ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಪಟ್ಟಣದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದವರ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ರೂಪಿಸುವ ಶಕ್ತಿ ಗುರುಗಳ ಕೈಯಲ್ಲಿದೆ. ಇಂತಹ ಶಕ್ತಿ ಹೊಂದಿರುವ ಶಿಕ್ಷಕರು ಮಕ್ಕಳನ್ನು ತಿದ್ದಿ ತಿಡಿ
ಸಮಾಜದ ಸತ್ಪಪ್ರಜೆಗಳನ್ನಾಗಿ ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಹಿಂದಿನ ಶಿಕ್ಷಣ ಪದ್ಧತಿಗೂ ಈಗಿನ ಶಿಕ್ಷಣ ಪದ್ಧತಿಗೆ ಬಹಳ ಬದಲಾವಣೆಗಳಾಗಿದ್ದು, ಇಂತಹ ಬದಲಾವಣೆಗಳ ನಡುವೆ
ಶಿಕ್ಷಕರಾದವರು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರ ಮಾತನಾಡಿ, ಯಾದಗಿರಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರಿಕ್ಷಾ ಫಲಿತಾಂಶದಲ್ಲಿ ಕಟ್ಟಕಡೆಯ ಸ್ಥಾನದಲ್ಲಿದೆ. ಇದನ್ನು ಬದಲಾಯಿಸಲು ಶಿಕ್ಷಕರು ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುವುದರ ಜೊತೆಯಲ್ಲಿ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಇದಕ್ಕೆ ಬೇಕಾಗುವ ಎಲ್ಲಾ ಸಹಾಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು. ಯಾದಗಿರಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ರುದ್ರಗೌಡ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಾದಗಿರಿ ತಾಪಂ ಸದಸ್ಯರಾದ ಮಲ್ಲಿಕಾರ್ಜುನ ಅರುಣಿ, ನಾಗೇಂದ್ರಪ್ಪ, ಸುಭಾಶ್ಚಂದ್ರ ಹೊನಗೇರಾ, ಗುರುಮಠಕಲ್
ಪುರಸಭೆ ಸದಸ್ಯರಾದ ರವೀಂದ್ರ ರೆಡ್ಡಿ, ಆಶನ್ನ ಬುದ್ಧ, ಕೃಷ್ಣಾ ಮೇಧಾ, ಶಶಿಕಾಂತ ಕಶೆಟ್ಟಿ, ಶರಣಗೌಡ ಪಾಟೀಲ ಭಿಮನಳ್ಳಿ, ವ್ಹಿ.ಎಸ್. ಹಿರೇಮಠ, ಅಶೋಕ ಕೆಂಭಾವಿ, ಮಹಾದೇವಪ್ಪ, ರವೀಂದ್ರ ಚಿಂತನಹಳ್ಳಿ, ಹಣಮಂತ ಹೊಸಮನಿ, ಬನ್ನಪ್ಪ ಸುಂಕದ, ರಾಜಶೇಖರಗೌಡ, ಆರೀಫ್ ಮಲ್ಲಿಕಾರ್ಜುನ ಬಿಳಾರ, ಎಸ್.ಎಸ್. ಗಡ್ಡಿ, ಅಪ್ಪಾರಾವ ಸಂಕೋಳ್ಳಿ, ಕಿಷ್ಟರೆಡ್ಡಿ ಪಾಟೀಲ, ಬಾಲಪ್ಪ ನಿರೇಟಿ, ವಿಜಯ ಕುಮಾರ ನಿರೇಟಿ ಇದ್ದರು.
ಗುರುಮಠಕಲ್ ಖಾಸಾ ಮಠದ ಪೀಠಾಧಿ ಪತಿಗಳಾದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ
ದಿವ್ಯ ಸಾನಿಧ್ಯ ವಹಿಸಿ ಆಶೀರ್ವನ ನೀಡಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಬಾಲರಾಜ ಚಂಡರಕಿ ನಿರೂಪಿಸಿದರು. ಶಿವರಾಜ ಸಾಯಕ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.