ಮುಖ್ಯ ಕಾಲುವೆಗಳಿಗೆ ಹೆಚ್ಚುವರಿ ನೀರು
Team Udayavani, Sep 9, 2017, 5:12 PM IST
ನಾರಾಯಣಪುರ: ಕೃಷ್ಣಾ ಅಚ್ಚು ಕಟ್ಟು ಭಾಗದ ನೀರಾವರಿ ಸೌಲಭ್ಯ ಕಲ್ಪಿಸುವ ನಾರಾಯಣಪುರ ಎಡದಂಡೆ ಹಾಗೂ
ಬಲದಂಡೆ ಮುಖ್ಯ ಕಾಲುವೆಗಳಿಗೆ ಸೆ. 11ವರೆಗೆ ನೀರು ಹರಿಸುವುದನ್ನು ಮುಂದುವರಿಸಲಾಗುತ್ತಿದೆ ಎಂದು ಕೃಷ್ಣಾ
ಭಾಗ್ಯ ಜಲ ನಿಗಮದ ವೃತ್ತ ಕಚೇರಿ ಅಧೀಕ್ಷಕ ಅಭಿಯಂತರ ವೀರಣ್ಣ ನಗರೂರ ಉದಯವಾಣಿಗೆ ತಿಳಿಸಿದ್ದಾರೆ.
ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ವಾರಾಬಂದಿ ನಿಯಮದಂತೆ (ಚಾಲು ಬಂದ್) ಸೆ. 08 ಸಂಜೆ ಉಭಯ (ಎಡ ಹಾಗೂ ಬಲ) ಮುಖ್ಯ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕಾಗಿತ್ತು. ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿರುವುದರಿಂದ ಮುಖ್ಯ ಕಾಲುವೆಗಳಿಗೆ ಮೂರು ದಿನಗಳವರಗೆ ಹೆಚ್ಚುವರಿಯಾಗಿ ನೀರು ಹರಿಸುವಂತೆ ಸರಕಾರ ನಿರ್ದೇಶನ ನೀಡಲಾಗಿದ್ದು, ಹೀಗಾಗಿ ಉಭಯ
ಮುಖ್ಯ ಸೆ. 08, 09, 10, 11ರವರೆಗೆ ನೀರು ಹರಿಸಲಾಗುವುದು. ಸೆ. 11ರಂದು ಸಂಜೆ ಉಭಯ ಕಾಲುಗಳಿಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ಮುಖ್ಯ ಕಾಲುವೆಗಳ ಕೆಳ ಹಂತದ ಅಧಿಕಾರಿಗಳಿಗೆ ಈ ವಿಷಯವಾಗಿ ನೀರಿನ ಬೇಡಿಕೆಯನ್ನು ಪರಿಶೀಲಿಸಲಾಗಿ
ಬಲದಂಡೆ ಮುಖ್ಯ ಕಾಲುವೆ ಜಾಲಗಳಿಂದ ನೀರಿನ ಬೇಡಿಕೆಗಳು ಬಂದೆವೆ ಎಂದು ತಿಳಿಸಿದರು. ಪ್ರಸ್ತುತ ಜಲಾಶಯದಲ್ಲಿ 492.18 ಮೀಟರ್‌ನಷ್ಟು ನೀರಿದ್ದು 32.98 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳ ಹರಿವು 6850 ಕ್ಯೂಸೆಕ್, ಎಡದಂಡೆ ಮುಖ್ಯ ಕಾಲುವೆಗೆ 2927 ಕ್ಯೂಸೆಕ, ಬಲದಂಡೆ 2000 ಕ್ಯೂಸೆಕ ನೀರು ಹರಸಲಾಗುತ್ತಿದೆ
ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.