ವಯಸ್ಕರು ಅಕ್ಷರಸ್ಥರಾಗಲಿ: ಹೊಸ್ಮನಿ
Team Udayavani, Aug 11, 2017, 2:52 PM IST
ಯಾದಗಿರಿ: ವಯಸ್ಕರು ಸಾಕ್ಷರತೆ ಹೊಂದಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಾಯಕ ಅಧಿಕಾರಿ ಶ್ರೀಶೈಲ ಹೊಸ್ಮನಿ ಹೇಳಿದರು.ಶಹಾಪುರ ತಾಲೂಕು ನಾಯ್ಕಲ್ ಗ್ರಾಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಸಾಕ್ಷರ ಭಾರತ 2017ರ ಕಾರ್ಯಕ್ರಮದ ಅಡಿ ಸ್ವಯಂ ಸೇವಕರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಯಸ್ಕರು ಅಕ್ಷರ ಕಲಿತು ಅಕ್ಷರಸ್ಥರಾಗಬೇಕು. ತಂದೆ ತಾಯಿ ಋಣ ತೀರಿಸಬೇಕು ಎಂದರೆ ಪ್ರತಿಯೊಬ್ಬರು ಸಾಕ್ಷರತೆ ಹೊಂದಬೇಕು. ಅಕ್ಷರದ ಜ್ಞಾನದ ಜತೆಗೆ ಜೀವನ ಪಾಠ ಕಲಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಖಾಜಾ ಮೈನೋದ್ದೀನ್ ಜೇಮಶೇರಿ, ವಯಸ್ಕರಿಗೆ ಅಕ್ಷರ ಕಲಿಸಿ, ಸಾಕ್ಷರತೆಯನ್ನಾಗಿ ಮಾಡುವ
ಗುರಿ ಸ್ವಯಂ ಸೇವಕರ ಮೇಲಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೇರಕ ವೆಂಕಟೇಶ ಕಟ್ಟಿಮನಿ, ಗ್ರಾಮದಲ್ಲಿ ಕಲಿಕಾ ಕೇಂದ್ರ ತೆರೆಯಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. 75 ಜನ ಸ್ವಯಂ ಸೇವಕರಿಗೆ 4 ದಿನಗಳ ಕಾಲ ತರಬೇತಿ ನೀಡುವ ಮೂಲಕ ಕಲಿಸುವ ಸಾಮರ್ಥ್ಯ ತರಬೇತಿ ನೀಡಲಾಗುತ್ತದೆ. 750 ಜನ ವಯಸ್ಕರನ್ನು ಅಕ್ಷರಸ್ಥರಾಗಿ ಮಾಡುವ ಮಹತ್ತರ ಗುರಿ ಹೊಂದಲಾಗಿದೆ. ಚುನಾಯಿತ ಜನಪ್ರತಿನಿಧಿಗಳು ಮತ್ತು ಅ ಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕಿ ಚನ್ನಮಲ್ಲಮ್ಮ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಣ್ಣಗೌಡ, ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ರಂಗೋಜಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಸ್ವಯಂ ಸೇವಕಿ ಈರಮ್ಮ ಪ್ರಾರ್ಥಿಸಿದರು. ಶಿಕ್ಷಕ ಬಾಬುನಾಯ್ಕ ನಿರೂಪಿಸಿ, ಸ್ವಾಗತಿಸಿದರು. ಪ್ರೇರಕಿ ಅನ್ನಪೂರ್ಣ ಆನೆಗುಂದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.