ಅಂತರ ಪಾಲಿಸಿ ಕೋವಿಡ್ ಓಡಿಸಿ
Team Udayavani, May 10, 2020, 2:58 PM IST
ಸಾಂದರ್ಭಿಕ ಚಿತ್ರ
ಆಲಮಟ್ಟಿ: ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಆಲಮಟ್ಟಿ ಗ್ರಾಪಂ ವ್ಯಾಪ್ತಿಯ ಬಡ ಕುಟುಂಬಗಳಿಗೆ ಇತ್ತೀಚೆಗೆ ಇಲ್ಲಿನ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಹಾರಧಾನ್ಯದ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಜಗತ್ತಿನ 250ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಹಾಮಾರಿ ಕೋವಿಡ್-19 ತನ್ನ ಕಬಂಧಬಾಹು ಚಾಚಿದೆ. ದೇಶದಲ್ಲಿ ಕೋವಿಡ್ ಸೋಂಕು ತಡೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿತ್ತು. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡುವ ಜತಗೆ ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಸಂಚರಿಸುವ ಮೂಲಕ ಕೋವಿಡ್ ತಡೆಗೆ ಸಹಕರಿಸಬೇಕು ಎಂದರು.
ಲಾಕ್‌ಡೌನ್‌ದಿಂದಾಗಿ ಕಾರ್ಮಿಕರು, ಹಿಂದುಳಿದವರು, ಅಲೆಮಾರಿಗಳಿಗೆ ದುಡಿಮೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಥಹವರಿಗೆ ಸಂಘ-ಸಂಸ್ಥೆಗಳು ಸೇರಿ ಹಲವರು ನೆರವು ನೀಡುತ್ತಿದ್ದಾರೆ. ತಾವು ಹಾಗೂ ಗೆಳೆಯರ ಬಳಗ ಮತ್ತು ವಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ 3.5ಕೋಟಿ ಮೊತ್ತದ 25ಸಾವಿರಕ್ಕೂ ಅಧಿಕ ಕಿಟ್‌ಗಳನ್ನು ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆಲಮಟ್ಟಿ, ಅರಳದಿನ್ನಿ, ಚಿಮ್ಮಲಗಿ ಭಾಗ-1ಎ ಮತ್ತು ಬಿ, ಲೇಬರ್ ಕಾಲೋನಿ ಸೇರಿದಂತೆ ವಿವಿಧೆಡೆ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ, ಉಪಾಧ್ಯಕ್ಷ ಬಿ.ಜೆ.ನದಾಫ, ಮಹಾಂತೇಶ ಹಿರೇಮಠ, ಎಂ.ಆರ್.ಕಮತಗಿ, ಇಬ್ರಾಹಿಂ ತೆಲಗಿ, ಸಿ.ಎಸ್.ಕುಂಬಾರ, ಲಕ್ಷ್ಮಣ ಹಂಡರಗಲ್ಲ, ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ತಾಪಂ ಇಒ ಭಾರತಿ.ಎಸ್.ಚೆಲುವಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.