ಕಲ್ಲಂಗಡಿ-ಪಪ್ಪಾಯಿ ಬೆಳೆಗಾರರ ಪರದಾಟ
ರೈತರಿಗೂ ತಟ್ಟಿದ ಲಾಕ್‌ಡೌನ್ ಬಿಸಿ ಕಟಾವಿಗೆ ಬಂದ ಬೆಳೆ ಸೂಕ್ತ ಬೆಲೆ ಸಿಗದೇ ಕಂಗಾಲು
Team Udayavani, Apr 7, 2020, 4:07 PM IST
ಆಳಂದ: ತಾಲೂಕಿನಲ್ಲಿ ಬೆಳೆದ ನೂರಾರು ಎಕರೆ ಕಲ್ಲಂಗಡಿ ಹಾಗೂ ಪಪ್ಪಾಯಿ ಬೆಳೆ ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲೇ ಇಡಿ ದೇಶವೇ ಲಾಕ್‌ಡೌನ್ ಆಗಿದ್ದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ, ಆರ್ಥಿಕ ಸಂಕಷ್ಟದಲ್ಲಿ ಪರದಾಡುವಂತೆ ಮಾಡಿದೆ.
ತೋಟಗಾರಿಕೆ ಇಲಾಖೆ ಅಂದಾಜಿಸಿದಂತೆ ಕಲ್ಲಂಗಡಿಯನ್ನು ಸುಮಾರು 400 ಎಕರೆಯಲ್ಲಿ ಬೆಳೆಯಲಾಗಿದೆ. ಈ ಪೈಕಿ 150 ಎಕರೆ ಮಾರಾಟ ಮಾಡಿದ್ದು, ಇನ್ನೂ 100 ಎಕರೆ ಸದ್ಯ ಕಟಾವು ಆಗಬೇಕು. ಬೆಲೆ ಇಲ್ಲದ್ದಕ್ಕೆ ನಷ್ಟವಾಗುತ್ತಿದೆ. ಇನ್ನುಳಿದ ಕಲ್ಲಂಗಡಿ ಎರಡು ವಾರದಲ್ಲಿ ಕಟಾವಿಗೆ ಬರಲಿದೆ. 100 ಎಕರೆಯಲ್ಲಿ ಅಂದಾಜು ಎರಡು ಸಾವಿರ ಟನ್ ಕಲ್ಲಂಗಡಿ ಉತ್ಪಾದನೆ ಆಗಲಿದ್ದು, ಸದ್ಯ ಇಲ್ಲಿನ
ಮಾರುಕಟ್ಟೆಯಲ್ಲಿ ಎರಡೂವರೆಯಿಂದ 4ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಹೀಗೆ ಒಂದು ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಕುಂಬಳಕಾಯಿಯನ್ನು ಮುಂಬೈ ಮಾರುಕಟ್ಟೆ ಬಿಟ್ಟರೆ ಬೇರೆ ಎಲ್ಲೂ ಖರೀದಿಸುತ್ತಿಲ್ಲ. ಹೀಗಾಗಿ 25 ಎಕರೆಯಲ್ಲಿ ಕುಂಬಳಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಪಪ್ಪಾಯಿ 100 ಎಕರೆಯಲ್ಲಿ ಅರ್ಧ ಇಳುವರಿ ಕೈ ಸೇರಿದೆ. ಸದ್ಯ ಕಟಾವಿಗೆ ಬಂದ ಫಲಕ್ಕೆ ಬೆಲೆಯಿಲ್ಲವಾಗಿದೆ. ಟೊಮ್ಯಾಟೊ 80 ಎಕರೆ, ಬದನೆ 25 ಎಕರೆಯಲ್ಲಿ ಬೆಳೆಯಲಾಗಿದೆ. ಇದೆಲ್ಲ ಬೆಳೆ ವಾಣಿಜ್ಯ ನಗರಿ ಮುಂಬೈ ಹಾಗೂ ಹೈದ್ರಾಬಾದ್‌ಗೆ ಸಾಗಾಟವಾಗಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅಲ್ಲಿನ ಮಾರುಕಟ್ಟೆಗಳು ಮುಚ್ಚಿವೆ. ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ದೊರಕದೆ ರೈತರು ಸಂಕಷ್ಟ ಅನುಭವಿಸುವಂತೆ ಆಗಿದೆ.
ಕಲ್ಲಂಗಡಿ ತಲಾವೊಂದಕ್ಕೆ 8ರಿಂದ 10ರೂ. ಬದಲು 3ರಿಂದ 4ರೂ. ಬೆಲೆಯಲ್ಲಿ ಮಾರುವಂತಾಗಿದೆ. ಅದು ಇಲ್ಲಿನ ವ್ಯಾಪಾರಿಗಳು ಕೊಳ್ಳುವವರೇ ಇಲ್ಲವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬದನೆ, ಬೆಂಡಿ, ಟೋಮ್ಯಾಟೋ ಸ್ಥಳೀಯ
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ರೈತರಿಂದ ಅಗ್ಗದ ದರದಲ್ಲಿ ತರಕಾರಿ ಖರೀದಿಸುವ ವ್ಯಾಪಾರಿಗಳು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾಟ ಮಾಡುತ್ತಿದ್ದಾರೆ. ಆದರೆ ರೈತನಿಗೆ ಮಾತ್ರ ಲಾಭ ದೊರಕುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು
Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.