ಸರ್ವ ಶೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ
Team Udayavani, Sep 16, 2017, 5:01 PM IST
ನಾರಾಯಣಪುರ: ಭಾರತ ರತ್ನ ಪುರಸ್ಕೃತ ಸರ್.ಎಂ. ವಿಶ್ವೇಶ್ವರಯ್ಯನವರು ದೇಶ ಕಂಡ ಸರ್ವ ಶೇಷ್ಠ ಇಂಜಿನಿಯರ್ ಎಂದು ಮುಖ್ಯ ಇಂಜಿನಿಯರ್ ಎಚ್.ಕೆ. ಕೃಷ್ಣೆಗೌಡ ಬಣ್ಣಿಸಿದರು.
ಇಲ್ಲಿನ ಮನೊರಂಜನಾ ಕೇಂದ್ರದ ಡೇಟಾ ಸೆಂಟರನಲ್ಲಿ ಶುಕ್ರವಾರ ಕೃಷ್ಣಾ ಭಾಗ್ಯ ಜಲ ನಿಗಮದ ವಲಯ ಕಚೇರಿ ವತಿಯಿಂದ ನಡೆದ ಇಂಜಿನಿಯರ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸುತ್ತಿರುವುದು ಎಲ್ಲಾ ಇಂಜಿನಿಯರಗಳು ಹೆಮ್ಮೆ ಪಡುವಂತ ವಿಷಯವಾಗಿದೆ ಎಂದು ಹೇಳಿದ ಅವರು, ವಿಶ್ವೇಶ್ವರಯ್ಯನವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಫಲದಿಂದ ಅವರ ಅವಧಿಯಲ್ಲಿ ಕೈಗೊಳ್ಳಲಾದ ಹತ್ತು ಹಲವು ಯೋಜನೆಗಳು ಯಶಸ್ವಿಯಾಗುವುದರ ಜತೆಗೆ ಪ್ರಸ್ತುತವೂ ಜನಾನುರಾಗಿ ಉಳಿಯಲು ಸಾಧ್ಯವಾಗಿದೆ.
ಸ್ವಾತಂತ್ರ್ಯ ಪೂರ್ವ ಮೈಸೂರು ರಾಜ್ಯದ ದಿವಾನರಾದ ಸಂದರ್ಭದಲ್ಲಿ ಅವರ ನಡೆಸಿದಂತ ಆಡಳಿತ ಹಾಗೂ ಕಾರ್ಯವೈಖರಿ ಅತ್ಯಂತ ಸ್ಮರಣೀಯವಾದದ್ದು, ಇದರಿಂದಲೇ ಇಡೀ ದೇಶದಲ್ಲೇ ರಾಜ್ಯವನ್ನು ಮಾದರಿ ರಾಜ್ಯವಾಗಿ ರೂಪಿಸಿರುವ ಕೀರ್ತಿ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವಲಯದ ಅಡಿಯಲ್ಲಿ ಬರುವ ಹಿರಿಯ ಇಂಜಿನಿಯರಗಳು ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಹೂವು ಮಾಲೆ ಹಾಕಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಅಧೀಕ್ಷಕ ಅಭಿಯಂತ ವೀರಣ್ಣ ನಗರೂರ, ಕಾರ್ಯನಿರ್ವಾಹ ಅಭಿಯಂತರಗಳಾದ ಸುರೇಂದ್ರಬಾಬು, ಗಂಗಾಧರ ಬಡಿಗೇರ, ಶ್ರೀನಾಥ, ಆರ್.ಎಲ್. ಹಳ್ಳೂರ, ಟಿ.ಎನ್. ರಾಮಚಂದ್ರ, ಭಜಂತ್ರಿ, ಬಿಜ್ಜೊರ, ಪ್ರಕಾಶ ಪಾತ್ರದ ಸೇರಿದಂತೆ ಕೃಭಾಜನಿನಿ ವಲಯ, ವೃತ್ತ, ವಿಭಾಗ, ಉಪವಿಭಾಗ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.