ಕ್ಷೇತ್ರದ ಸುಧಾರಣೆಗೆ ಪ್ರಯತ್ನ
Team Udayavani, Dec 17, 2018, 2:57 PM IST
ಗುರುಮಠಕಲ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನ ನಿಮಿತ್ತ ಮತಕ್ಷೇತ್ರದ 5 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ 26 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ನಾಗನಗೌಡ ಕಂದಕೂರ ವಿತರಿಸಿದರು.
ರವಿವಾರ ಪಟ್ಟಣದ ಗಾಂಧಿ ಮೈದಾನ ಆವರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನ ನಿಮಿತ್ತ ಜೆಡಿಎಸ್ ಆಯೋಜಿಸಿದ್ದ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ.
ಜಿಲಾಲಪುರ್-ಸೈದಾಪುರ ಕರಿಬೆಟ್ಟ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿಗೆ 50 ಕೋಟಿ ರೂ., ಮುಸ್ಟೂರ್-ಸೈದಾಪುರ ರಸ್ತೆಗೆ 40 ಕೋಟಿ ರೂ,, ಕಣೆಕಲ್-ಕಡೇಚೂರ್ ರಸ್ತೆಗೆ 18 ಕೋಟಿ ರೂ. ಹಾಗೂ ಹಂದರಕಿ-ಹೊಸಳ್ಳಿ ಮಾರ್ಗದ ರಸ್ತೆಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಕಂದಕೂರ ಕೊಂಡಮ್ಮ ದೇವಿ ಬೆಟ್ಟದ ಅಭಿವೃದ್ಧಿಗೆ 1 ಕೋಟಿ, ಗವಿಸಿದ್ಧಲಿಂಗೇಶ್ವರ
ದೇವಸ್ಥಾನ ಅಭಿವೃದ್ಧಿಗೆ 50 ಲಕ್ಷ ರೂ., ತೂಗು ಸೇತುವೆಗೆ 50 ಲಕ್ಷ ಹಾಗೂ ದಬದಬಿ ಜಲಪಾತದ ಅಭಿವೃದ್ಧಿಗೆ 50
ಲಕ್ಷ ರೂಪಾಯಿ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಯುವ ಉಪಾಧ್ಯಕ್ಷ ಶರಣಗೌಡ ಕಂದಕೂರ, ಜಿ. ತಮ್ಮಣ್ಣ, ಶರಣು ಆವಂಟಿ, ಭೀಮಶಪ್ಪ ಗುಡ್ಸೆ, ಕಿಷ್ಟಾರೆಡ್ಡಿ, ತಾಪಂ ಸದಸ್ಯ ಮಲ್ಲಿಕಾರ್ಜುನ ಅರುಣಿ, ನಾಗೇಶ ಚಂಡ್ರಿಕಿ, ಪುರಸಭೆ ಸದಸ್ಯ ಬಾಲಪ್ಪ ದಾಸರಿ, ನವಾಜ ರೆಡ್ಡಿ, ಶರಣಪ್ಪ ಲಿಕ್ಕಿ, ಪಾಪಣ್ಣ, ಬಾಲಪ್ಪ ನೀರೆಟಿ, ಸೀರಜ್ ಚಿಂತಕುಂಟಿ, ಪ್ರಕಾಶ ನಿರೇಟಿ, ವಿಜಯಕುಮಾರ್ ನೀರೆಟಿ, ಶಾರದ ಕಡೆಚೂರ, ಅಂಬದಾಸ್, ರಾಮಣ್ಣ ಬಳಿಚಕ್ರ, ಮಲ್ಲಣ್ಣ ಗೌಡ, ಈಶ್ವರ ನಾಯಕ್, ಬಾಬು ಗೌಡ, ನರಸಪ್ಪ,
ನರಸಿರೆಡ್ಡಿ ಬೂದೂರು, ಬಸರೆಡ್ಡಿ ಎಂ.ಟಿ. ಪಲ್ಲಿ, ಜ್ಞಾನೇಶ್ವರ ರೆಡ್ಡಿ, ರಮೇಶ ಹೂಗಾರ, ಬ್ರಹ್ಮಾನಂದರೆಡ್ಡಿ ಕೇಶ್ವಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.