ಜವಾಬ್ದಾರಿ ಅರಿತು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಿ
Team Udayavani, Apr 20, 2018, 5:42 PM IST
ಶಹಾಪುರ: ಚುನಾವಣೆ ಆಯೋಗದ ನಿರ್ದೇಶನದಂತೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಮಾದರಿ ನೀತಿ ಸಂಹಿತೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವಂತೆ ಸಿಬ್ಬಂದಿಗಳಿಗೆ ಚುನಾವಣೆ ಅಧಿಕಾರಿ ನವೀನ್ ಜೋಸೆಫ್ ಸೂಚಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಚುನಾವಣೆ-2018ರ ಹಿನ್ನೆಲೆಯಲ್ಲಿ ಶಹಾಪುರ ಮತಕ್ಷೇತ್ರದ ನಿರ್ವಹಣೆಗಾಗಿ ರಚಿಸಿದ ವಿವಿಧ ತಂಡಗಳ ಕರ್ತವ್ಯ ನಿರತ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಯಾ ತಂಡದ ಮುಖ್ಯಸ್ಥರು ಮತ್ತು ಸಿಬ್ಬಂದಿ ತಮ್ಮ ತಮ್ಮ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಚುನಾವಣೆ ಮುಗಿಯುವವರೆಗೆ ಎಚ್ಚರದಿಂದ ಕೆಲಸ ಮಾಡಬೇಕು. ಯಾವುದೇ ತಿಳಿಯದ ಸಮಸ್ಯೆ ಎದುರಾದಲ್ಲಿ ತಕ್ಷಣ ಮೇಲಧಿಕಾರಿಗಳನ್ನು ಸಂಪರ್ಕಿಸಿ ಅವರ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಪಂಕಜ್ ಕುಮಾರ ಐ.ಆರ್.ಎಸ್. (ಸಿ ಮತ್ತು ಸಿ.ಇ) ವೆಚ್ಚ ವೀಕ್ಷಕರು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಚುನಾವಣಾಧಿಕಾರಿ ಸುಬ್ಬಣ್ಣ ಜಮಖಂಡಿ ಉಪಸ್ಥಿತಿಯಲ್ಲಿ ರಾಜಕೀಯ ಪಕ್ಷಗಳ, ಖರ್ಚು ವೆಚ್ಚಗಳ ಪರಿಶೀಲನಾ ತಂಡ ಕ್ಷಿಪ್ರ ಸಂಚಾರಿ ದಳ, ವೀಡಿಯೋ ಕಣ್ಗಾವಲು ತಂಡ, ವಿಡೀಯೋ ವೀಕ್ಷಣಾ ತಂಡ, ಅಬಕಾರಿ ನಿರೀಕ್ಷಕರು, ಆರಕ್ಷಕ ವೃತ್ತ ನಿರೀಕ್ಷಕರು ಗ್ರಾಮೀಣ/ನಗರ ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಸಭೆಯಲ್ಲಿ ಇದ್ದರು. ಶಹಾಪುರ ಠಾಣೆ ಸಿಪಿಐ ನಾಗರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.