ಮಹಿಳೆಯರ ಸಾಧನೆಯೇ ಪ್ರೇರಣೆಯಾಗಲಿ
Team Udayavani, Mar 26, 2021, 8:41 PM IST
ಹುಣಸಗಿ : ದೇಶದಲ್ಲಿ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಎಲ್ಲ ರಂಗಗಳಲ್ಲಿಯೂ ಅಪ್ರತಿಮ ಸಾಧನೆ ಮಾಡಿದ್ದಾಳೆ ಎಂದು ರಾಯಚೂರ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಲೀಲಾ.ಎಂ.ಕಾರಟಗಿ ಹೇಳಿದರು.
ಪಟ್ಟಣದ ಮಾತೋಶ್ರೀ ಸುಬ್ಬಮ್ಮಗೌಡತಿ ಮಂಗಲ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಮಹಿಳಾ ಶಿಕ್ಷಕಿ ಹಾಗೂ 21ನೇ ಶತಮಾನದ ಅಗತ್ಯತೆಗಳು ಎನ್ನುವ ಶೈಕ್ಷಣಿಕ ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕೂಡಾ ಒಬ್ಬ ಮಹಿಳೆ ಎಂಬುದು ವಿಷಯ ಎಂದರು. ಭಾರತ ದೇಶದ ಪ್ರಧಾನ ಮಂತ್ರಿಗಳಲ್ಲಿ ದಿ| ಇಂದಿರಾಗಾಂ ಧಿ ಹಾಗೂ ಅಂತರಿಕ್ಷಯಾನ ಮಾಡಿದ ಕಲ್ಪನಾ ಚಾವ್ಲಾ, ಗಣಿತ ತಜ್ಞೆ ಶಕುಂತಲಾ, ಸಾವಿತ್ರಿಬಾಯಿ ಫುಲೆ ಅವರು ಕೂಡಾ ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಇವರ ಆದರ್ಶಗಳೇ ನಮಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿ ಕಾರಿ ಮಹಾದೇವರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾ ಧಿಕಾರಿ ಅಮರೇಶ ಕುಂಬಾರ, ಅಜೀಂ ಪ್ರೇಮ್‌ಜೀ ಸಂಯೋಜಕ ಸುರೇಶ ಗೌಡರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸೋಮರಡ್ಡಿ ಮಂಗಿಹಾಳ, ಸುರಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ಟನಿಕೇದಾರ, ಹುಣಸಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೊಕ್ರಾಣಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ರಾಘವೇಂದ್ರ ಕಾಮನಟಗಿ, ಬಸನಗೌಡ ವಠಾರ, ಶೋಭಾ ವಾಲ್ಮೀಕಿ, ಖಾದರ ಪಟೇಲ್, ರಮೇಶ ಪಾಟೀಲ್, ಶಿವುಕುಮಾರ, ನೀಲಾ ನಾಗರಬೆಟ್ಟ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.