ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆ: ಬಿರಾದಾರ
Team Udayavani, Sep 2, 2017, 5:24 PM IST
ಶಹಾಪುರ: ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಹೊರ ಸೂಸುವಲ್ಲಿ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಪ್ರತಿಭಾನ್ವಿತರು ರಾಜ್ಯ ಮಟ್ಟದವರೆಗೆ ಮಿಂಚಲಿ ಎಂದು ಡಯಟ್‌ನ ಉಪನಿರ್ದೇಶಕ ಶ್ರೀಶೈಲ
ಬಿರಾದಾರ ಹೇಳಿದರು.
ಜಿಪಂ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ
ಕಾರ್ಯಾಲಯ ವತಿಯಿಂದ ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿ ಒಂದಾಗಿದ್ದು, ಪಠ್ಯೇತರ ಚಟುವಟಿಕೆಗೆ ಒಂದು
ಭೂಮಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಉಳಿಸಿ ಬೆಳೆಸುವಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ. ಪ್ರಾಥಮಿಕ ವಿಭಾಗದಿಂದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ
ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಂತಾಗಿದೆ. ಮಕ್ಕಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ
ಪ್ರತಿಭೆಗಳಿಗೆ ಮನ್ನಣೆ ಸಿಕ್ಕಾಗ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಕೆ. ಪಾಟೀಲ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡಾಕೂಟ, ಪ್ರತಿಭಾ ಕಾರಂಜಿ ಸೇರಿದಂತೆ ಪ್ರತಿಯೊಂದರಲ್ಲಿ
ಭಾಗವಹಿಸುವ ಮೂಲಕ ನಿಮ್ಮಲ್ಲಿ ಅಡಗಿದ ಸುಪ್ತ ಪ್ರತಿಭೆ ಹೊರಸೂಸುವ ಮೂಲಕ ಪಾಲಕರ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಬೇಕು. ನಮ್ಮ ತಾಲೂಕಿನ ಪ್ರತಿಭೆಗಳು ಒಂದೆಡೆ ಕಾಣುತ್ತಿರುವುದು ಅವರಲ್ಲಿ ಉತ್ಸಾಹ
ಮತ್ತು ಶಿಕ್ಷಕರ ಪರಿಶ್ರಮ ಎದ್ದು ಕಾಣುತ್ತಿದೆ ಎಂದರು.
ಜಿಪಂ ಸದಸ್ಯ ಭೀಮಾಬಾಯಿ ಎಂ. ಪೂಜಾರಿ, ಶರಣಮ್ಮ ಕಾಶೀರಾಜ, ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿ ಕಾರಿ
ವೆಂಕಯ್ಯ, ಕ್ಷೇತ್ರ ಸಮನ್ವಯ ಅಧಿಕಾರಿ ಸಿದ್ದಣ್ಣ ಮಾನಸುಣಗಿ, ಶಿಕ್ಷಕರ ಸಂಘದ ಬೀಮಣ್ಣಗೌಡ, ನೌಕರರ ಸಂಘದ ಸುಧಾಕರ ಗುಡಿ, ಬಸವರಾಜ ಯಾಳಗಿ, ಚಂದಪ್ಪ ಇತರರು ಇದ್ದರು.
ಶಿಕ್ಷಣ ಸಂಯೋಜಕ ಲಾಲ ಅಹ್ಮದ ನಿರೂಪಿಸಿದರು. ಬಿ.ಆರ್.ಪಿ ರಾಮಣ್ಣ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.