ಸಂಪೂರ್ಣ ನೆಲಕಚ್ಚಿದ್ದ ಪುಷ್ಪೋದ್ಯಮಕ್ಕೆ ಮರುಚೇತನ
Team Udayavani, May 14, 2020, 1:35 PM IST
ಭದ್ರಾವತಿ: ಹೂವಿನ ತೋಟದಲ್ಲಿ ಅರಳಿನಿಂತಿರುವ ಸುಗಂಧರಾಜ ಪುಷ್ಪ.
ಭದ್ರಾವತಿ: ಕೋವಿಡ್-19 ಕಾರಣದ ಲಾಕ್‌ಡೌನ್ ಆರಂಭದಿಂದ ತಾಲೂಕಿನಲ್ಲಿ ಸಂಪೂರ್ಣವಾಗಿ ಮುದುಡಿದ ತಾವರೆಯಾಗಿ ನೆಲಕಚ್ಚಿರುವ ಪುಷ್ಪೋದ್ಯಮಕ್ಕೆ ಮರುಚೇತನ ನೀಡುವ ಪ್ರಯತ್ನ ನಡೆಯುತ್ತಿದೆ.
ದೇವಾಲಯ, ಮದುವೆ, ಹುಟ್ಟುಹಬ್ಬ, ಜಾತ್ರೆ, ಎಲ್ಲದಕ್ಕೂ ನಿಷೇಧವಿದ್ದುದರಿಂದ ಇಲ್ಲಿನ ಹೂವಿನಮಾರುಟ್ಟೆ ಸಂಪೂರ್ಣವಾಗಿ ಸ್ಥಗಿತಗೊಂಡು ತಲ್ಲಣಿಸಿ ಹೋಗಿತ್ತು.ಅನೇಕ ವರ್ಷಗಳಿಂದ ತಾಲೂಕಿನ ಹೊಳೇಹೊನ್ನೂರು, ಆನವೇರಿ, ಕನಸಿನಕಟ್ಟೆ, ಇಟ್ಟಿಗೆಹಳ್ಳಿ, ಅರಿಶಿಣಘಟ್ಟ ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲಿನ ಹಲವು ರೈತರು ನೂರಾರು ಎಕರೆ ಪ್ರದೇಶಗಳಲ್ಲಿ ಸೇವಂತಿಗೆ, ಸುಗಂಧರಾಜ,ಚೆಂಡುಹೂವು, ಕನಕಾಂಬರ, ದುಂಡುಮಲ್ಲಿಗೆ, ಕಾಕಡ,ಗುಲಾಬಿ ಸೇರಿದಂತೆ ವೈವಿದ್ಯಮಯ ಹೂವುಗಳ ಕೃಷಿಯನ್ನು ಮಾಡುತ್ತಾ ಭದ್ರಾವತಿ ದಾವಣಗೆರೆ, ಚಿತ್ರದುರ್ಗ ಮುಂತಾದ ಹೊರಜಿಲ್ಲೆಗಳ ಹೂವಿನ ಮಾರುಕಟ್ಟಗಳಿಗೆ ಬೆಳೆದ ಹೂವನ್ನು ಸ್ವಂತ ವಾಹನ ಅಥವ ಖಾಸಗಿ ಬಸ್‌ಗಳ ಮೂಲಕ ಸಾಗಿಸುತ್ತಾ ಬಂದಿದ್ದರು.
ಒಮ್ಮೆಗೆ ಆರಂಭವಾದ ಕೋವಿಡ್-19 ಕಾರಣದಿಂದ ಲಾಕ್‌ಡೌನ್ ನಿಂದಾಗಿ ಮಾರುಕಟ್ಟೆ ವ್ಯವಸ್ಥಿ ಸ್ಥಗಿತಗೊಂಡು ವಾಹನ ಸಂಚಾರವಿಲ್ಲದೆ ಹೊಲಗಳಲ್ಲಿ ಬೆಳೆದ ಹೂವುಗಳನ್ನು ಕೊಯ್ದು ಸಾಗಿಸಲಾಗದೇ ನಷ್ಟ ಅನುಭವಿಸಿದ್ದರು. ಇಲ್ಲಿನ ತೋಟಗರಿಕೆ ಇಲಾಖೆ ಹೂವು ಬೆಳೆಗಾರರತ್ತ ಗಮನಹರಿಸಿ ಕ್ಷೇತ್ರದಲ್ಲಿನ ಸುಮಾರು 160 ಹೂವಿನ ಬೆಳೆಗಾರರ ಹೆಸರಿನ ಪಟ್ಟಿಯನ್ನು ಸಿದ್ಧಪಡಿಸಿ ಕ್ಷೇತ್ರದ 110 ಎಕರೆ ಪ್ರದೇಶದಲ್ಲಿನ ಹೂವಿನಕೃಷಿಯ ಮರುಚೇತನಕ್ಕೆ ಸರ್ಕಾರದಿಂದ ದೊರಕಬಹುದಾದ ನೆರವನ್ನು ಒದಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದೆಲ್ಲದರ ಪರಿಣಾಮವಾಗಿ ಇಲ್ಲಿನ ಹೂವಿನ ಕೃಷಿಕರು ಪುನಃ ಹೂವಿನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವತ್ತ ಗಮನಹರಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.