ಬೇಡಿಕೆ ಈಡೇರಿಸಲು ರಕ್ತದಾನ ನಿರ್ಧಾರ ಶ್ರೇಷ್ಠ
Team Udayavani, Oct 4, 2018, 5:07 PM IST
ಯಾದಗಿರಿ: ಸರ್ಕಾರ 2006ರ ನಂತರದಲ್ಲಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಯೋಜನೆ ಜಾರಿಗೆ ತಂದಿದ್ದನ್ನು ರದ್ದು ಪಡಿಸಬೇಕೆಂದು ಎಂದು ಆಗ್ರಹಿಸಿ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕ ಜಿಲ್ಲಾಧಿ ಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಎನ್‌ಪಿಎಸ್ ವ್ಯವಸ್ಥೆಯಲ್ಲಿ ನೌಕರರ ಮೂಲ ವೇತನ ಮತ್ತು ತುಟಿÂ ಭತ್ಯೆಯಲ್ಲಿ ತಲಾ ಶೇ. 10 ಪ್ರತಿಶತ ಕಟಾವು ಮಾಡಿ ನಿವೃತ್ತಿ ನಂತರ ಪಿಂಚಣಿ ನೀಡಲಾಗುತ್ತದೆ. ಅಲ್ಲದೇ, ನೌಕರರಿಂದ ಕಟಾವು ಮಾಡಿರುವ ಹಣ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ನೌಕರರಲ್ಲಿ ಆತಂಕ ಸೃಷ್ಟಿಸಿದೆ. ಹಾಗಾಗಿ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತಂದು ಸರ್ಕಾರಿ ನೌಕರರ ಕುಟುಂಬ ಹಿತ ಕಾಪಾಡಬೇಕು ಎಂದು ಸಂಘದಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.
ಬಳಿಕ ನೌಕರರ ಸಂಘದಿಂದ “ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಉದ್ಘಾಟಿಸಿ ಮಾತನಾಡಿ, ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದರೊಂದಿಗೆ ರಕ್ತದಾನ ಮಾಡುತ್ತಿರುವುದು ನಿರ್ಧಾರ ಶ್ರೇಷ್ಠ ಎಂದರು.
ವಿವಿಧ ಇಲಾಖೆಯ ಎನ್‌ಪಿಎಸ್ ನೌಕರರು ಭಾಗವಹಿಸಿದ್ದರು. ಈ ವೇಳೆ ಜಿಲ್ಲೆಯ 150ಕ್ಕೂ ಹೆಚ್ಚು ನೌಕರರು ರಕ್ತದಾನ ಮಾಡಿದರು. ಸಂಘದ ಗೌರವಾಧ್ಯಕ್ಷ ಬಸನಗೌಡ ಬೆಳ್ಳಿಕಟ್ಟಿ, ಜಿಲ್ಲಾಧ್ಯಕ್ಷ ಆನಂದ ಕಾಜಗಾರ, ಸುಭಾಸರಡ್ಡಿ ಪೊಲೀಸ್
ಪಾಟೀಲ, ಮಹೇಶ ಪಾಟೀಲ, ವಸಂತ ಕುಮಾರ, ಅಜ್ಮತ ಉಸ್ತಾದ, ಜಮಾಲುದ್ದೀನ್, ವಿಠ್ಠಲ್ ಪವಾರ, ರಾಘವೇಂದ್ರ ಅಂಬಾರೆ, ರವಿಚಂದ್ರ ನಾಯ್ಕಲ, ಮನೋಹರ ನಂದೆಪಲ್ಲಿ, ಸಂತೋಷ ನೀರೆಟಿ, ಬಾಲರಾಜ ಚಂಡರಕಿ, ಶಿವರಾಜ ಸಾಕಾ, ಭೀಮಣ್ಣಗೌಡ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.