ವ್ಯಾಪಾರಕ್ಕೆ ಅಡ್ಡಿಯಾಗದ ಜಿಎಸ್‌ಟಿ
Team Udayavani, Jul 5, 2017, 11:05 AM IST
ಯಾದಗಿರಿ: ಕೇಂದ್ರ ಸರಕಾರ ದೇಶಾದ್ಯಂತ ಏಕ ರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರು ಅಡೆತಡೆಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.
ಜಿಎಸ್‌ಟಿ ಬಗ್ಗೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಪರಿಪೂರ್ಣ ಮಾಹಿತಿ ದೊರೆಯದ ಕಾರಣ ಹಳೆ ದರದಲ್ಲಿ ವ್ಯಾಪಾರ ನಡೆಸುತ್ತಿದ್ದು, ಮಾರುಕಟ್ಟೆಗಳಲ್ಲಿ ಜಿಎಸ್‌ಟಿ ಜಾರಿಯಿಂದ ಯಾವುದೇ ಪರಿಣಾಮ ಬೀರಿಲ್ಲ. ನಗರದ ವಿವಿಧ ಅಂಗಡಿ, ಶೋ ರೂಂ ಮತ್ತು ಹೋಟೆಲ್‌ಗಳಿಲ್ಲಿ ಮೊದಲಿದ್ದ ಬೆಲೆಗಳಿಗೆ ಗ್ರಾಹಕರು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಜಿಎಸ್‌ಟಿ ತೆರಿಗೆ ನಿಯಮ ತಿಳಿಯದೆ ಯಾವ ವಸ್ತುವಿಗೆ ಎಷ್ಟು ತೆರಿಗೆ ಹೆಚ್ಚಿಸ ಬೇಕು. ಎಷ್ಟು ಕಡಿಮೆ ಮಾಡಬೇಕೆಂಬುದು
ಇನ್ನೂ ನಿಖರವಾಗಿ ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲಿದ್ದ ಬೆಲೆಗೆ ಎಲ್ಲ ಸರಕು, ಸಾಮಗ್ರಿ ಮಾರಾಟ ಮಾಡುತ್ತಿದ್ದೇವೆ ಎಂದು ಅಂಗಡಿ ಮಾಲೀಕರು ಸ್ಪಷ್ಟ ಪಡಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಯಾವುದೇ ಸೀಜನ್ ಇಲ್ಲ. ಇದರಿಂದ ಜಿಎಸ್‌ಟಿ ಪರಿಣಾಮ ಬೀರಿಲ್ಲ. ನಮಗೆ ಜಿಎಸ್
ಟಿಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷ ಜಗನ್ನಾಥರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.
ಹೋಟಲ್‌ಗಳಿಲ್ಲಿ ಗ್ರಾಹಕರು ಎಂದಿನಂತೆ ಕಂಡು ಬಂದಿದ್ದು, ಜಿಎಸ್‌ಟಿ ನಂಬರ್ ಪಡೆದಿದ್ದೇವೆ. ಆದರೆ ಗ್ರಾಹಕರ ಮೇಲೆ
ಜಿಎಸ್‌ಟಿ ತೆರಿಗೆ ಹಾಕಿಲ್ಲ. ಹಳೆ ಬೆಲೆಗೆ ತಿಂಡಿ, ಊಟ ನೀಡಲಾಗುತ್ತಿದೆ ಎಂದು ಎಸ್‌ಎಲ್‌ವಿ ಹೋಟೆಲ್ ಮಾಲೀಕ ಸಂತೋಷ ಶೆಟ್ಟಿ ತಿಳಿಸಿದ್ದಾರೆ.
ದೇಶಾದ್ಯಂತ ಶೇ. 18ರಷ್ಟು ಏಕ ರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ಬೆಲೆಗಳು
ಏರಿಕೆಯಾಗಿವೆ. ಆದರೆ ವ್ಯಾಪಾರಸ್ಥರು ಮಾತ್ರ ಗ್ರಾಹಕರ ಮೇಲೆ ತೆರಿಗೆ ಹೊರೆ ಹಾಕದೆ ಹಳೆ ಬೆಲೆಗಳಲ್ಲಿ ವಸ್ತುಗಳು ಮಾರಾಟ ಮಾಡುತ್ತಿದ್ದಾರೆ. ತೆರಿಗೆ ಹೊರೆ ಹಾಕಿದರೆ ವ್ಯಾಪಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ಆಗಿದೆ.
ಹಳೆ ದರದಲ್ಲಿ ವ್ಯಾಪಾರ
ಸರಕು ಹಾಗೂ ಸೇವಾ ತೆರಿಗೆಯಿಂದ ಜಿಲ್ಲೆಯ ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಳೆ ದರದಲ್ಲಿ ವ್ಯಾಪಾರ ನಡೆಯುತ್ತಿದೆ. ಇನ್ನೂ ವ್ಯಾಪಾರಸ್ಥರು ಸಹ ಗ್ರಾಹಕರ ಮೇಲೆ ಜಿಎಸ್‌ಟಿ ತೆರಿಗೆ ಹೇರಿಲ್ಲ ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗಿಲ್ಲ.
ಹನುಮಾನದಾಸ್ ಮುಂದಡಾ, ಅಧ್ಯಕ್ಷರು, ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ, ಯಾದಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.