ಅಂಬಿಗರ ಚೌಡಯ್ಯ ಶ್ರೇಷ್ಠ ವಚನಕಾರ: ಕ್ಯಾತ್ನಾಳ
Team Udayavani, Jan 22, 2019, 11:42 AM IST
ಸೈದಾಪುರ: ಜಾತಿ ಹಾಗೂ ಅನಿಷ್ಟ ಪದ್ಧತಿಗಳನ್ನು ತನ್ನ ನಿಷ್ಠುರ ವಚನಗಳ ಮೂಲಕ ದೊಡ್ಡ ಕಾಂತ್ರಿ ಮಾಡಿದ್ದ ಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ ಹೇಳಿದರು.
ಪಟ್ಟಣದಲ್ಲಿ ವಲಯ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ರೈಲ್ವೆ ನಿಲ್ದಾಣದಿಂದ ಅಂಬಿಗರ ಚೌಡಯ್ಯ ವೃತ್ತದವರೆಗೆ ಏರ್ಪಡಿಸಿ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಉದ್ಘಾಟಿಸಿ ಅವರು ಮಾತಾನಾಡಿದರು.
ಬಸವಾದಿ ಶರಣರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯ ಅಂದಿನ ಶಿವಭಕ್ತಿ, ಕಾಯಕ, ಪರೋಪಕಾರಿ ಹಾಗೂ ಸಮತವಾದಿ ಬಗ್ಗೆ ತನ್ನ ನಿಷ್ಠುರ ವಚನಗಳ ಮೂಲಕ ಖಂಡಿಸಿದ್ದಾರೆ. ಅವರ ವಚನಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.
ತಾಪಂ ಸದಸ್ಯ ಚಂದಪ್ಪ ಕಾವಲಿ, ಚಂದ್ರಶೇಖರ ವಾರದ್, ಸಣ್ಣ ಭೀಮಶಪ್ಪ ಜೇಗರ್, ಯೋಗೇಶ ಕುಮಾರ ದೋಖ, ರಾಜೇಶ ಉಡುಪಿ, ಕೋಲಿ ಸಮಾಜದ ಅಧ್ಯಕ್ಷ ತಾಯಪ್ಪ ಚಿಗರಿ, ಉಪಾಧ್ಯಕ್ಷ ಶರಣಪ್ಪ, ಕಾರ್ಯದರ್ಶಿ ತಾಯಪ್ಪ ಬೋಮಣ್ಣೋರ್, ಕೋಶಧ್ಯಾಕ್ಷ ಶರಣು ಕೃಷ್ಣ, ಸಂಘಟನಾ ಕಾರ್ಯದರ್ಶಿ ಶ್ರೀಶೈಲ ಬಾಗ್ಲಿ, ಹಣಮಂತ ವಡವಟ್, ಸುರೇಶ ಆನಂಪಲ್ಲಿ, ಸಾಬಣ್ಣ ಬಾಗ್ಲಿ, ವೆಂಕಟೇಶ ಗಡದ್, ಶರಣಪ್ಪ ಬಾಗ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.