ಶೈಕ್ಷಣಿಕ ಅಭಿವೃದ್ಧಿಗೆ ಸಮುದಾಯ ಸಹಕಾರ ಅಗತ್ಯ: ರವೀಂದ್ರ
Team Udayavani, Jun 11, 2018, 11:58 AM IST
ಯಾದಗಿರಿ: ಶೈಕ್ಷಣಿಕ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ರವೀಂದ್ರ ಹೇಳಿದರು. ತಾಲೂಕಿನ ಅಲ್ಲಿಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸುವ ಮೂಲಕ ಅವರ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ. ಮಕ್ಕಳಿಗಾಗಿ ಆಸ್ತಿಯನ್ನು ಸಂಪಾದಿಸುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಮೌನೇಶ ನಾಲ್ಕಮನಿ ಮಾತನಾಡಿ, ದಾಖಲಾತಿ ಮತ್ತು ಹಾಜರಾತಿ ಇಡೀ ವರ್ಷ ನಡೆಯುವ ಕಾರ್ಯಕ್ರಮ. ಇದಕ್ಕೆ ಇವತ್ತು ಚಾಲನೆ ನೀಡಲಾಗಿದೆ. ಗ್ರಾಮದ ಜನರ ಸಹಕಾರದ ಮೇರೆಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಪ್ಪ ಮ್ಯಾಗೇರಿ, ಕಾರ್ಯಕ್ರಮ ಸಂಯೋಜಕ ಕೆ.ಎಂ. ವಿಶ್ವನಾಥ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾಬಣ್ಣ ನಾಟೇಕಾರ್ 37 ಮಕ್ಕಳಿಗೆ
ಉಚಿತ ನೋಟ್ ಬುಕ್, ಪೆನ್ ನೀಡಿದರು.
ಗ್ರಾಮದ ಮುಖಂಡರಾದ ಹಂಪಯ್ಯ ಸದರಿ ಸಾವಿರ ರೂ. ಪ್ರೋತ್ಸಾಹಧನ ವಿತರಿಸಿದರು. ಸಾಬಣ್ಣ ನಾಟೇಕಾರ್, ಹಂಪಯ್ಯ ಸದರಿ, ನಾಗಪ್ಪ ಸದರಿ, ರಾಜಯ್ಯ ಸ್ವಾಮಿ, ಮೊಗಲಪ್ಪ, ನಿಂಗಪ್ಪ, ಮಾಣಿಕರಾವ್, ಸೋಮಶೇಖರ, ಶಾಮು, ಏಸಪ್ಪ, ಸಾಬಣ್ಣ, ದೇವಮ್ಮ, ಚನ್ನಬಸಮ್ಮ, ಶಾಣಮ್ಮ, ದುಂಡಮ್ಮ, ರಮೇಶ ಈಟೆ, ಪಾಟೀಲ್, ಈರಣ್ಣಾ,
ಶಾಖೀರ್, ವಿಶ್ವನಾಥ, ಮೌನೇಶ, ಶಿಲ್ಪಾ, ಸಂಧ್ಯಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.