ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ
ಸಂಘದ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಸಹಾಯ ಸಹಕಾರ ನೀಡಬೇಕು ಎಂದು ಮನವಿ
Team Udayavani, Feb 9, 2021, 5:07 PM IST
ಯಾದಗಿರಿ: ಕೊಳೆವೆಬಾವಿ ಕೊರೆಯಲು ಬೇಕಾಗುವ ಬಿಡಿ ಭಾಗಗಳು, ಡಿಜಲ್ ಕೇಸಿಂಗ್ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬೋರ್ ವೆಲ್ ಲಾರಿ ಮಾಲೀಕರ ಸಂಘ ಒಂದು ವಾರದ ಮುಷ್ಕರ ಹಮ್ಮಿಕೊಂಡಿದ್ದು, ಸೋಮವಾರ ನಗರದ ಸಿನ್ನೂರ ಜಿನ್ ಆವರಣದಲ್ಲಿ ಬೋರ್ ವೆಲ್ ಲಾರಿಗಳನ್ನು ನಿಲ್ಲಿಸುವ ಮೂಲಕ ಕೊಳವೆಬಾವಿ ಕೊರೆತದ ಕೆಲಸ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಆರಂಭಿಸಿದ್ದಾರೆ.
ಫೆ.8ರಿಂದ 14ರವರೆಗೆ ಬೋರ್ ವೆಲ್ ಲಾರಿಗಳ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಂಘ ತಿಳಿಸಿದೆ. ಕೊಳವೆಬಾವಿ ಕೊರೆಯಲು ಬೇಕಾಗುವ ಸಾಮಾಗ್ರಿಗಳ ಬೆಲೆ ಏರಿಕೆ ಒಂದಡೆಯಾದರೆ, ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆತಕ್ಕೆ ಎಕರೂಪ ದರ ನಿಗದಿಯಾಗದಿರುವುದು ಸಮಸ್ಯೆಯಾಗುತ್ತಿದೆ. ಈ ಎಲ್ಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ 7 ದಿನಗಳ ವರೆಗೆ ಬೋರ್‌ವೆಲ್ ಕಾರ್ಯ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಬೇಕು. ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಏಕರೂಪ ದರ ನಿಗದಿ ಕುರಿತು ಜಿಲ್ಲಾಧಿಕಾರಿಗಳು ಮಧ್ಯವಹಿಸಿ ದರ ನಿಗದಿ ಪಡಿಸಬೇಕೆಂದು ಸಂಘ ಮನವಿ ಮಾಡಿದೆ.
ಲಾರಿಗಳನ್ನು ಒಂದಡೆ ನಿಲ್ಲಿಸಲಾಗಿದ್ದು, ಯಾವುದೇ ಕಾಮಗಾರಿಗೆ ಮಾಡದಿರುವ ಕುರಿತು ಸಂಘ ನಿರ್ಧರಿಸಿದೆ. ಈ ಕೂಡಲೇ ಬೋರ್‌ವೆಲ್ ಲಾರಿ ಮಾಲೀಕರ ಸಂಘದ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಸಹಾಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಸವರಡ್ಡಿ ಮಾಲಿ ಪಾಟೀಲ್ ಅನಪುರ, ಗೌರವಧ್ಯಕ್ಷ ಮಲ್ಲಿಕಾರ್ಜುನ ರಡ್ಡಿ ಗುಂಜನೂರ, ಉಪಾಧ್ಯಕ್ಷ ಶರಣಗೌಡ ಚಿನ್ನಕಾರ್. ಖಜಾಂಚಿಯಾಗಿ ವಿನೋದ ರಡ್ಡಿ ಚಿನ್ನಾಕಾರ್, ಕಾರ್ಯಧ್ಯಕ್ಷ ಮಹ್ಮದ್ ಚಿನ್ನಾಕಾರ, ಕಾರ್ಯದರ್ಶಿ ಮಹೇಶ ಕಾಳಬೆಳಗುಂಡಿ, ಸಹ ಕಾರ್ಯದರ್ಶಿ ಸುರೇಶ ಅಲ್ಲಿಪೂರ ಸೇರಿದಂತೆ ಎಲ್ಲಾ ಬೋರ್‌ವೆಲ್ ಲಾರಿ ಮಾಲೀಕರ ಸಂಘದ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.