ಗುರುಮಠಕಲ್ ಪುರಸಭೆ ಆಡಳಿತ ಕೈ ಹಿಡಿದ ಕಾಂಗ್ರೆಸ್
Team Udayavani, Sep 4, 2018, 12:02 PM IST
ಗುರುಮಠಕಲ್: ಜಿದ್ದಾಜಿದ್ದಿನಲ್ಲಿ ನಡೆದ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದಿದ್ದು, ಬಹುತೇಕ ಹೊಸಬರಿಗೆ ಜೈಕಾರ ಹಾಕಿ ಹಳೆಯಬರಿಗೆ ಮಣ್ಣುಮುಕ್ಕಿಸಿ ಹೊಸ ಮನ್ವಂತರಕ್ಕೆ ತೆರೆ ಎಳೆದಿರುವ ಘಟನೆಗೆ ಸಾಕ್ಷಿಯಾಗಿ ಗುರುಮಠಕಲ್ ಪುರಸಭೆ ಫಲಿತಾಂಶ ಮೂಡಿ ಬಂದಿದೆ.
ವಿಧಾನಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಹೊಸಪರ್ವಕ್ಕೆ ನಾಂದಿಹಾಡಿದ ಮತದಾರರು, ಈ ಸಲ ಪುರಸಭೆಗೆ ಮಾತ್ರ ಕಾಂಗ್ರೆಸ್‌ಗೆ ಕೈ ಎತ್ತಿ ಸುಲಭವಾಗಿ ಪಟ್ಟ ಅಲಂಕರಿಸಿ ಜಾಣ ನಡೆ ತೋರಿದ್ದಾರೆ.
ಪುರಸಭೆ ಚುನಾವಣೆ ಇರುವ ಹೊತ್ತಿನಲ್ಲಿ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ ಬಿಜೆಪಿ ಸೇರ್ಪಡೆ ತಕ್ಷಣ ಇಲ್ಲಿನ ಬಿಜೆಪಿ ನಾಯಕರು ತೆರೆಮೆರೆ ಸರಿದು ಆ ಪಕ್ಷಕ್ಕೆ ಅನೆಬಲ ಬರುವ ಬದಲು ನಾಯಕತ್ವದ ಶೂನ್ಯ ಅವರಿಸಿಕೊಂಡಿತು. ಶಾಸಕ ನಾಗನಗೌಡ ಹಾಗೂ ಕಾಂಗ್ರೆಸ್ ವಿಧಾನಸಭೆ ಭಾವಿ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿತರಾಗಿರುವ ಬಸರೆಡ್ಡಿ ಅನಪುರ ಮಧ್ಯ ಪೈಪೋಟಿ ನಡೆಯಿತು ಎನ್ನಬಹುದು.
ಆಡಳಿತ ಪಕ್ಷ ಪುರಸಭೆ ಗದ್ದುಗೆ ವಶಪಡಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಯಿತು. ಮತ್ತು ಸಮಸ್ಯೆಗೆ ಸ್ಪಂದಿಸದ
ದರ್ಪದಿಂದ ನಡೆದ ಹಳೇ ಪುರಸಭೆ ಸದಸ್ಯರನ್ನು ಒಬ್ಬರನ್ನು ಬಿಟ್ಟು ಎಲ್ಲರನ್ನು ಮನೆಗೆ ಕಳಿಸಿ ಮತದಾರ ತನ್ನ ಮತದಾನದ ಶಕ್ತಿಯ ಅಸ್ತ್ರವನ್ನು ಉಪಯೋಗಿಸಿಕೊಂಡಿದ್ದಾನೆ.
ಒಟ್ಟು 23 ಸ್ಥಾನಗಳನ್ನು ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವು 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಆಡಳಿತರೂಡ ಜೆಡಿಎಸ್ ಪಕ್ಷ 8 ಸ್ಥಾನಗಳು ಬಿಜೆಪಿ ಪಕ್ಷ 2 ಸ್ಥಾನಗಳಲ್ಲಿ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದು, ಇಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣವಾದ ಬಹುಮತವನ್ನು ಕಾಂಗ್ರೆಸ್ ಪಕ್ಷ ಪಡೆದಿದೆ.
ಒಂದೇ ಕುಟುಂಬವರು ಇಬ್ಬರ ಗೆಲುವು: ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದಿಂದ ತಾಯಿ-ಮಗ ಹಾಗೂ ಜೆಡಿಎಸ್ ಪಕ್ಷದಿಂದ ಭಾವ-ಸೊಸೆ ಗೆಲುವು ಸಾಧಿಸಿದ್ದಾರೆ. 7ನೇ ವಾರ್ಡ್‌ನಲ್ಲಿ ಮಗ ಅನ್ವರ್ ಪಾಶಾ ಹಾಗೂ 21ನೇ ವಾರ್ಡಿನಲ್ಲಿ ತಾಯಿ ಮೈಲಾನಭೀ ಗೆದ್ದರೇ 6ನೇ ವಾರ್ಡಿನಲ್ಲಿ ಭಾವ ನವಾಜರೆಡ್ಡಿ ಪಾಟೀಲ 11ನೇ ವಾರ್ಡಿನಲ್ಲಿ ಸೊಸೆ ಜಯಶ್ರೀ ರೆಡ್ಡಿ ಗೆಲುವು ಪಡೆದು ಸಂಭ್ರಮಿಸಿದ್ದಾರೆ.
ಹ್ಯಾಟ್ರಿಕ್ ಗೆಲುವು: ಗುರುಮಠಕಲ್ ಪುರಸಭೆಯಲ್ಲಿ ಹ್ಯಾಟ್ರಿಕ್ ಗೆಲುವು ಪಡೆದ ಇತಿಹಾಸವೇ ಇಲ್ಲ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನವಿತಾ ಲಾಲಪ್ಪ ಹ್ಯಾಟ್ರಿಕ್ ಗೆಲುವು ತಮ್ಮದಾಗಿಸಿಕೊಳ್ಳುವುದರ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಕಳೆದ 17 ಪುರಸಭೆ ಸದಸ್ಯರಲ್ಲಿ ಇವರೊಬ್ಬರೇ ಗೆಲುವು ಸಾಧಿಸಿದ್ದಾರೆ.
ಆಡಳಿತ ಪಕ್ಷದ ವಿಫಲತೆ: ಕಳೆದ 5 ದಶಕಗಳಿಂದ ಗುರುಮಠಕಲ್ ಮತಕ್ಷೇತ್ರವು ಕಾಂಗ್ರೆಸ್ ಪಕ್ಷದ ಅಧಿಧೀನದಲ್ಲಿದ್ದು, ಈಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದ ಮತದಾರರು ಜೆಡಿಎಸ್‌ಗೆ ಜೈಕಾರ ಹಾಕಿದ್ದರು. ಆದರೆ ಪುರಸಭೆ ಚುನಾವಣೆಯಲ್ಲಿ ಮಾತ್ರ ಆಡಳಿತ ಪಕ್ಷ ಜೆಡಿಎಸ್‌ಗೆ ಜೈಕಾರ ಹಾಕಿಲ್ಲ, ಕೇವಲ 8 ಸ್ಥಾನಗಳನ್ನು ಪಡೆದು ಪುರಸಭೆ ಗದ್ದುಗೆ ಉಳಿಸಿಕೊಳ್ಳುವಲ್ಲಿ ಎಡವಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟು ಆಗಿ 12 ಸ್ಥಾನಗಳನ್ನು ಪಡೆದು ಪುರಸಭೆ ಗದ್ದುಗೆ ಉಳಿಸಿಕೊಂಡು ವಿಧಾನಸಭೆಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡು ಕಾಂಗ್ರೆಸ್ ಮತ್ತೆ ಶಕ್ತಿ ಪ್ರದರ್ಶಿಸಿದೆ.
ಮೊಗುಲಪ್ಪ ಬಿ. ನಾಯಕಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.