ನಿರಂತರ ಮಳೆಗೆ ಅಪಾರ ಬೆಳೆ ನಾಶ: ರೈತ ಕಂಗಾಲು

Team Udayavani, Oct 13, 2020, 5:15 PM IST

yg-tdy-2

ಶಹಾಪುರ: ಹತ್ತಿಗೂಡೂರ ಸೀಮಾಂತರದ ಹೊಲದಲ್ಲಿ ಅಧಿ ಕ ತೇವಾಂಶಕ್ಕೆ ಹತ್ತಿ ಬೆಳೆ ಬಾಡುತ್ತಿದೆ.

ಶಹಾಪುರ: ಕಳೆದ ಒಂದೂವರೆ ತಿಂಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಹತ್ತಿ, ತೊಗರಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗುತ್ತಿವೆ. ಕೆಲ ಹೊಲಗಳಲ್ಲಿ ನೀರು ನಿಂತ ಪರಿಣಾಮ ಹತ್ತಿ,ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳಿಗೂ ಕುತ್ತು ಬಂದಿದ್ದು, ರೈತರು ಮತ್ತೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಒಂದುವರೆ ತಿಂಗಳಿಂದ ನಿರಂತರ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಮೋಡ ಕವಿದ ವಾತಾವರಣ, ಇನ್ನೇನು ಬಿಸಿಲು ಬಿದ್ದಿದೆ ಎಂದು ಹೊಲದಲ್ಲಿನ ಕಳೆ ಕೀಳಬೇಕೆನ್ನುವಷ್ಟರಲ್ಲಿ ಮತ್ತೆ ಧೋ ಎಂದು ಎರಡು ಮೂರು ದಿನ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಯಾವ ಬೆಳೆಯೂ ಕೈಗೆಟುಕುವ ಸಾಧ್ಯತೆಕಡಿಮೆ ಆಗಿದೆ. ನದಿ ಪಾತ್ರ ಜಮೀನುಗಳಂತೂ ಪ್ರವಾಹಕ್ಕೆ ಸಿಲುಕಿ ಬೆಳೆ ಸಂಪೂರ್ಣ ಹಾಳಾಗಿವೆ.

ಉಳಿದಂತೆ ಒಣಬೇಸಾಯಗಾರರಿಗಾದರೂ ಒಂದಷ್ಟು ಬೆಳೆ ಉತ್ತಮವಾಗಿದೆ ಎನ್ನುವಷ್ಟರಲ್ಲಿ ನಿತ್ಯ ಮಳೆಯಾಗುತ್ತಿರುವ ಪರಿಣಾಮ ಅಧಿಕ ತೇವಾಂಶದಿಂದ ಹತ್ತಿ, ಮೆಣಸಿನಕಾಯಿ ಒಣಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಜೂನ್‌ ಮೊದಲ ವಾರ ಉತ್ತಮ ಮಳೆಯಾಗಿದ್ದು, ಆಗ ತಾಲೂಕಿನಲ್ಲಿ ಅಂದಾಜು 43,900 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಿಟಿ ಹತ್ತಿ ವಿವಿಧ ತಳಿಯ ಹತ್ತಿ ಬಿತ್ತಿದ್ದರು. ನಂತರದ ದಿನದಲ್ಲಿ ನಿತ್ಯ ಮಳೆಯಾಗಿ ಹಲವೆಡೆ ತಗ್ಗು ಪ್ರದೇಶದ ಜಮೀನುಗಳು ಜಲಾವೃತಗೊಂಡು ಬೆಳೆಯಲ್ಲಿ ಮುಳುಗಿ ಹೋಗಿತ್ತು. ಕೆಲವೆಡೆ ಒಣ ಬೇಸಾಯಗಾರರ ಭೂಮಿಯಲ್ಲಿ ಹತ್ತಿ ಬೆಳೆ ಚನ್ನಾಗಿಯೇ ಇತ್ತು. ಆಗಸ್ಟ್‌ ಕಳೆದಂತೆ ಹೂ ಕಾಯಿ ಬಿಟ್ಟು ಇನ್ನೇನು ಕೈಗೆ ಬರಲಿದೆ ಎನ್ನುವಷ್ಟರಲ್ಲಿ ಮತ್ತೆ ಸೆಪ್ಟೆಂಬರ್‌, ಅಕ್ಟೋಬರ್‌ ನಿರಂತರ ಮಳೆ ಬೀಳುತ್ತಿದ್ದು, ಹತ್ತಿ ಹೊಲಗಳು ಅಧಿಕ ತೇವಾಂಶದಿಂದ ಬೆಳೆಗಳೆಲ್ಲ ಸುಡುತ್ತಿವೆ.

ನಿರಂತರ ಮಳೆಯಿಂದಾಗಿ ಬೆಳೆಯಡಿ ಎಲ್ಲೆಡೆ ಬಾಚಿಕೊಂಡ ಕಳೆ ತೆಗೆಯಲು ಆಗುತ್ತಿಲ್ಲ. ಅಲ್ಲದೆ ಕೆ ಲದಿನ ಮೋಡ ಕವಿದು ರೋಗ ಬಾಧೆ ಆವರಿಸಿತು. ಇದೀಗ ಮತ್ತೆ ಮಳೆಯಾಗಿದ್ದು, ಹೊಲಗಳು ಆರುತ್ತಿಲ್ಲ. ತಿಂಗಳಿಂದ ಹಸಿಯಾಗಿದೆ. ಹೀಗಾಗಿ ಬೆಳೆಯೆಲ್ಲ ಬಾಡುತ್ತಿವೆ ಎನ್ನುತ್ತಾರೆ ರೈತ ಬಸವರಾಜ ಚೌದ್ರಿ. ಒಂದಷ್ಟು ಮಳೆ ನಿಂತರೆ ಸಾಕು ಹತ್ತಿಹೊಲದಲ್ಲಿನ ಕಳೆ ತೆಗೆದು ಹಾಕಲು ಅನುಕೂಲವಾಗಲಿದೆ ಎಂದು ಕೊಂಡಿದ್ದೇವು. ಆದರೆ ಮತ್ತೆ ನಿರಂತರ ಮಳೆ ಬರುತ್ತಿದೆ. ಹೀಗಾಗಿ ಕಳೆ ಕೀಳಲು ಆಗುತ್ತಿಲ್ಲ. ತೇವಾಂಶ ಅತಿಯಾಗಿದ್ದು, ಹತ್ತಿ ಎಲೆಗಳು ಕೊಳೆಯುತ್ತಿವೆ. ಫಲ ಬರುವದಿಲ್ಲ ಎಂದು ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಕಳೆದ ತಿಂಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಸಾಕಷ್ಟು ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಈ ಕುರಿತು ಸಮೀಕ್ಷೆ ನಡೆಸಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಮತ್ತೆ ಕಳೆದ ನಾಲ್ಕು ದಿನದಿಂದ ನಿರಂತರ ಮಳೆಯಾಗಿದ್ದು, ಹಲವೆಡೆ ಮತ್ತೂಮ್ಮೆ ಸಮೀಕ್ಷೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಸಮೀಕ್ಷಾ ವರದಿ ಬರಲಿದೆ.  –ಗನ್ನಾಥರಡ್ಡಿ, ತಹಶೀಲ್ದಾರ್‌, ಶಹಾಪುರ

ಮಳೆಯಿಂದಾಗಿ ಅಧಿಕ ತೇವಾಂಶದಿಂದ ಹತ್ತಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಮಳೆಯಿಂದಾದ ನಷ್ಟ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡಲಾಗುವುದು. – ಗೌತಮ ವಾಗ್ಮೋರೆ, ಸಹಾಯಕ ಕೃಷಿ ನಿರ್ದೇಶಕ.

-ಮಲ್ಲಿಕಾರ್ಜುನ ಮುದ್ನೂರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ

Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ

ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.