ಕರ್ಫ್ಯೂ ಕಟ್ಟುನಿಟ್ಟು; ಎಲ್ಲ ಮಳಿಗೆ ಬಂದ್
ಬಹುತೇಕ ಅಂಗಡಿಗಳಲ್ಲಿ ಜನರು ತಮಗೆ ಬೇಕಿದ್ದ ವಸ್ತುಗಳನ್ನು ಖರೀದಿಸುತ್ತಿದ್ದರು.
Team Udayavani, Apr 23, 2021, 6:37 PM IST
ಯಾದಗಿರಿ: ರಾಜ್ಯಾದ್ಯಂತ ಕೊರೊನಾ 2ನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಆದೇಶ ನೀಡಿದೆ. ಆದರೆ ಎಲ್ಲ ವ್ಯಾಪಾರ-ವಹಿಹಾಟು ಬಂದ್ ಮಾಡುವಂತೆ ಸರ್ಕಾರ ಹೊರಡಿಸಿದ್ದ ಆದೇಶ ಜನರಿಗೆ ತಡವಾಗಿ ಗಮನಕ್ಕೆ ಬಂದಿದೆ.
ಯಾದಗಿರಿಯಲ್ಲಿ ಜಿಲ್ಲಾಡಳಿತ ನಿರ್ದೇಶನದಂತೆ ನಗರಸಭೆ ಪೌರಾಯುಕ್ತ ಬಿ.ಟಿ. ನಾಯಕ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಪೊಲೀಸರ ಸಹಕಾರದಿಂದ ಎಲ್ಲ ಅಂಗಡಿ- ಮುಂಗಟ್ಟು ಬಂದ್ ಮಾಡಿಸಲಾಯಿತು. ಇದು ಮದುವೆ ಸೀಸನ್ ಆಗಿದ್ದರಿಂದ ಮಧ್ಯಾಹ್ನ 1 ಗಂಟೆ ವೇಳೆ ಬಟ್ಟೆ, ಕಿರಾಣಿ, ಜನರಲ್ ಸ್ಟೋರ್‌ಗಳಲ್ಲಿ ಸೇರಿದಂತೆ ಬಹುತೇಕ ಅಂಗಡಿಗಳಲ್ಲಿ ಜನರು ತಮಗೆ ಬೇಕಿದ್ದ ವಸ್ತುಗಳನ್ನು ಖರೀದಿಸುತ್ತಿದ್ದರು.
ಅಷ್ಟರಲ್ಲೇ ಅಧಿಕಾರಿಗಳು ಆಗಮಿಸಿ ಸರ್ಕಾರದ ಆದೇಶದಂತೆ ಏ.22ರಿಂದ ಮೇ 4ರವರೆಗೆ ಎಲ್ಲ ವಹಿವಾಟು ಬಂದ್ ಮಾಡಬೇಕಿದೆ ಎಂದು ಹೇಳಿ ಮುಚ್ಚಿಸಿಯೇ ಬಿಟ್ಟರು. ಇದರಿಂದ ಕೆರಳಿದ ಕೆಲ ವ್ಯಾಪಾರಿಗಳು ಏಕಾಏಕಿ ಹೀಗಾದರೆ ಹೇಗೆ?, ನಮ್ಮ ಬದುಕು ಏನಾಗಬೇಡ?. ಸರ್ಕಾರ ಕನಿಷ್ಟ ಜನರ ಮಿತಿ ನಿಗದಿಪಡಿಸಿ ವ್ಯಾಪಾರಕ್ಕೆ ಅನುಕೂಲ ಮಾಡಬೇಕಿತ್ತು ಎನ್ನುವ ಒತ್ತಾಯ ವ್ಯಾಪಾರಸ್ಥರಿಂದ ಕೇಳಿಬಂತು. ಪ್ರಸ್ತುತ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.