ಪ್ರಸ್ತುತ ಚಿತ್ರಕಲೆಗೆ ಪ್ರೋತ್ಸಾಹ ಇದೆ
Team Udayavani, Aug 3, 2017, 8:37 AM IST
ಶಹಾಪುರ: ಮನುಷ್ಯನ ಮನಸ್ಸಿನ ಭಾವನೆಗಳನ್ನು ತನ್ನ ಕುಂಚ ಕಲೆಯಿಂದ ಸೆರೆ ಹಿಡಿಯುವ ಪ್ರಶಾಂತಕುಮಾರ ಗುಂಬಳಾಪುರಮಠ ಅವರು ಪ್ರತಿಭಾವಂತ ಯುವ ಕಲಾವಿದರು ಎಂದು ಕಲಬುರಗಿ ಚಿತ್ರಕಲಾ ಪ್ರಾಧ್ಯಾಪಕ ಪ್ರೊ| ಲೋಕಯ್ಯ ಹಿರೇಮಠ ಹೇಳಿದರು.
ನಗರದ ಕಸಾಪ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಧನ ಸಹಾಯ ವತಿಯಿಂದ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಚಿತ್ರಕಲಾವಿದ ಪ್ರಶಾಂತಕುಮಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿ ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ಶಹಾಪುರದ ಸಾಂಸ್ಕೃತಿಕ ಪರಿಸರದಲ್ಲಿ ವೈವಿಧ್ಯಮಯ ಚಿತ್ರಕಲೆಗಳನ್ನು ಅಭಿವ್ಯಕ್ತ ಪಡಿಸುತ್ತಿರುವ ಪ್ರಶಾಂತ ಕುಮಾರ ಗುಂಬಳಾಪುರಮಠ ಅವರ ಸಾಧನೆ ನಿಜಕ್ಕೂ ಕೈಗನ್ನಡಿಯಾಗಿದೆ. ಪ್ರಸ್ತುತ ಚಿತ್ರಕಲೆಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಶಹಾಪುರದ ಎಲ್ಲಾ ಚಿತ್ರಕಲಾವಿದರು ಒಗ್ಗಟ್ಟಾಗಿ ಚಿತ್ರಸಂತೆ ಮಾಡಿದರೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗುಂಬಳಾಪುರ ಮಠದ ಸಿದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಸೋಮಶೇಖರ ಅರಳಗುಂಡಿಗಿ, ಖಾಸಿಂಅಲಿ ಹುಜರತಿ, ಬಸವರಾಜ ಆನೇಗುಂದಿ, ಎಸ್.ಟಿ.ಒ
ಬಸವರಾಜ ಕುಂಬಾರ ಉಪಸ್ಥಿತರಿದ್ದರು. ಚಿತ್ರಕಲಾವಿದ ರುದ್ರಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಕುಲಕರ್ಣಿ ನಿರೂಪಿಸಿದರು. ಗೀತಾ ಹಿರೇಮಠ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ ಸ್ವಾಗತಿಸಿದರು. ಬಸವರಾಜ ಸಿನ್ನೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.